ಮುಂಬೈ:ಸಮಾಜಮುಖಿ ಕೆಲಸಗಳಿಂದ ಜನಮನ್ನಣೆ ಪಡೆದುಕೊಂಡಿದ್ದ ಭಾರತ ತಂಡ ಮಾಜಿ ಆಲ್ರೌಂಡರ್ ಸುರೇಶ್ ರೈನಾ ಮಾತಿನ ಭರದಲ್ಲಿ ವಿವಾದವೊಂದನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಐಪಿಎಲ್ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ರಮುಖ ಭಾಗವಾಗಿರುವ ರೈನಾ ಎರಡು ದಿನಗಳ ಹಿಂದೆ ಆರಂಭವಾದ ತಮಿಳುನಾಡು ಪ್ರೀಮಿಯರ್ ಲೀಗ್ ಕಾಮೆಂಟರಿ ಚಿಟ್ಚಾಟ್ನಲ್ಲಿ ಭಾಗವಹಿಸಿದ್ದ ವೇಳೆ ಚೆನ್ನೈ ಜೊತೆಗಿನ ನಿಮ್ಮ ಸಂಬಂಧ ಹೇಗಿದೆ ಮತ್ತು ಇಲ್ಲಿನ ಸಂಸ್ಕೃತಿಯನ್ನು ಹೇಗೆ ಅಳವಡಿಸಿಕೊಂಡಿದ್ದೀರಿ ಎಂದು ಕೇಳಿದ್ದಾರೆ.
ಇದಕ್ಕೆ ಉತ್ತರಿಸಿದ 34 ವರ್ಷದ ರೈನಾ, " ನಾನು ಕೂಡ ಬ್ರಾಹ್ಮಣ. 2004 ರಿಂದಲೂ ಚೆನ್ನೈನಲ್ಲಿ ಆಡುತ್ತಿದ್ದೇನೆ. ನಾನು ಇಲ್ಲಿನ ಸಂಸ್ಕೃತಿಯನ್ನು ಪ್ರೀತಿಸುತ್ತೇನೆ. ನನ್ನ ಸಹ ಆಟಗಾರರನ್ನು ಇಷ್ಟಪಡುತ್ತೇನೆ. ಅಲ್ಲದೆ ನಾನು ಇಲ್ಲಿನ ಆಟಗಾರರಾದ ಅನಿರುದ್ಧ್ ಶ್ರೀಕಾಂತ್, ಬದ್ರಿ(ಎಸ್ ಬದ್ರಿನಾಥ್), ಬಾಲ ಭಾಯ್(ಲಕ್ಷ್ಮೀಪತಿ ಬಾಲಾಜಿ) ಮುಂತಾದವರ ಜೊತೆ ಆಡಿದ್ದೇನೆ. ನೀವು ಅಲ್ಲಿಂದ ಏನಾದರೂ ಒಳ್ಳೆಯದನ್ನು ಕಲಿಯಬೇಕು ಎಂದು ನಾನು ಭಾವಿಸುತ್ತೇನೆ. ನಮಗೆ ಉತ್ತಮ ಮ್ಯಾನೇಜ್ಮೆಂಟ್ ಇದೆ, ನಮ್ಮನ್ನು ಅನ್ವೇಷಿಸಿಕೊಳ್ಳಲು ನಮಗೆ ಲೈಸೆನ್ಸ್ ಇದೆ. ನಾನು ಅಲ್ಲಿನ ಸಂಸ್ಕೃತಿಯನ್ನು ಪ್ರೀತಿಸುತ್ತೇನೆ, ಮತ್ತು ನಾನು ಸಿಎಸ್‌ಕೆ ಭಾಗವಾಗಲು ಅದೃಷ್ಟಶಾಲಿ ಎಂದು ಹೇಳಿದ್ದರು.