ಭರ್ಜರಿ ಫಾರ್ಮ್ನಲ್ಲಿರುವ ಸೂರ್ಯಕುಮಾರ್ ಯಾದವ್ ದಾಖಲೆಯ ಮೇಲೆ ದಾಖಲೆ ಬರೆಯುತ್ತಿದ್ದಾರೆ. ಕ್ಯಾಲೆಂಡರ್ ವರ್ಷವೊಂದರಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಆಟಗಾರನಾಗಿ ಸೂರ್ಯ ಹೊರಹೊಮ್ಮಿದ್ದರೆ, ಇನ್ನೂ 24 ರನ್ ಗಳಿಸಿದರೆ ವರ್ಷವೊಂದರಲ್ಲಿ 1000 ರನ್ ಪೂರೈಸಿದ ದಾಖಲೆಗೂ ಪಾತ್ರರಾಗಲಿದ್ದಾರೆ.
ಈ ಹಿಂದೆ 2018 ರಲ್ಲಿ ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ 689 ರನ್ ಬಾರಿಸಿ ಕ್ಯಾಲೆಂಡರ್ ವರ್ಷದಲ್ಲಿ ಅತ್ಯಧಿಕ ರನ್ ಗಳಿಸಿದ ಆಟಗಾರ ಎಂಬ ಖ್ಯಾತಿ ಹೊಂದಿದ್ದರು. ಇದೀಗ ಸೂರ್ಯಕುಮಾರ್ ಯಾದವ್ ಆ ದಾಖಲೆ ಮೀರಿದ್ದು, 1 ಸಾವಿರ ರನ್ ಸನಿಹದಲ್ಲಿದ್ದಾರೆ.
2022 ರ ಸಾಲಿನಲ್ಲಿ ಭರ್ಜರಿಯಾಗಿ ಬ್ಯಾಟ್ ಬೀಸುತ್ತಿರುವ ಸೂರ್ಯಕುಮಾರ್ ಯಾದವ್ ಅವರ ಸ್ಟ್ರೈಕ್ರೇಟ್ 180.29 ಆಗಿದೆ. 32 ಟಿ20 ಪಂದ್ಯವಾಡಿರುವ ಸೂರ್ಯಕುಮಾರ್ ಒಟ್ಟಾರೆ 173.35 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಸೂರ್ಯ ಬ್ಯಾಟ್ನಿಂದ ಈವರೆಗೂ 57 ಸಿಕ್ಸರ್ ಮತ್ತು 88 ಬೌಂಡರಿಗಳು ಬಂದಿವೆ.