ಹೈದರಾಬಾದ್: ಸನ್ರೈಸರ್ಸ್ ಹೈದರಾಬಾದ್ ಆಧಾರ ಸ್ತಂಭವಾಗಿದ್ದ ಡೇವಿಡ್ ವಾರ್ನರ್ ಮತ್ತು ಆರಂಭಿಕ ಬ್ಯಾಟರ್ ಜಾನಿ ಬೈರ್ಸ್ಟೋವ್ ತಮ್ಮ ಫ್ರಾಂಚೈಸಿಗೆ ಧನ್ಯವಾದ ಅರ್ಪಿಸಿದ್ದಾರೆ. ರಿಟೆನ್ಷೆನ್ ಘೋಷಣೆಗೂ ಮುನ್ನವೇ ಇವರಿಬ್ಬರು ತಂಡದಿಂದ ಹೊರ ಬಿದ್ದಿರುವುದು ಖಚಿತವಾಗಿದೆ.
ಕಳೆದ ಕೆಲವು ವರ್ಷಗಳಿಂದ ತಂಡಕ್ಕಾಗಿ ಕೊಡುಗೆ ನೀಡಿರುವ ಎಲ್ಲಾ ಆಟಗಾರರಿಗೂ ಫ್ರಾಂಚೈಸಿ ಧನ್ಯವಾದವನ್ನು ಹೇಳಲು ಇಷ್ಟಪಡುತ್ತದೆ. ಇದು ಆಟಗಾರರಿಗೆ ಗುಡ್ ಬೈ ಅಲ್ಲ. ನಾವು ಹರಾಜಿನಲ್ಲಿ ಮತ್ತೆ ನಮ್ಮ ಕೆಲವು ಆಟಗಾರರನ್ನು ಖರೀದಿಸಲಿದ್ದೇವೆ ಎಂದು ಸನ್ರೈಸರ್ಸ್ ಹೈದರಾಬಾದ್ ಟ್ವೀಟ್ ಮಾಡಿದೆ.
2014ರಿಂದ ಫ್ರಾಂಚೈಸಿಯ ಭಾಗವಾಗಿದ್ದ ಡೇವಿಡ್ ವಾರ್ನರ್ ಇದಕ್ಕೆ ಉತ್ತರಿಸಿದ್ದು, ಕಳೆದ ಕೆಲವು ವರ್ಷಗಳಿಂದ ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ನನ್ನ ಏಳು-ಬೀಳುಗಳಲ್ಲಿ ನೀವು ತೋರಿದ ಪ್ರೀತಿಗೆ ನಾನು ಮತ್ತು ತಂಡ ಎಷ್ಟು ಧನ್ಯವಾದ ಹೇಳಿದರೂ ಸಾಲದು. ನಾನು ಮತ್ತು ಕ್ಯಾಂಡಿಸ್( ಪತ್ನಿ) ಎಲ್ಲಾ ಅಭಿಮಾನಿಗಳಿಗೆ ಧನ್ಯವಾದ ಹೇಳುತ್ತೇವೆ ಎಂದು ಬರೆದುಕೊಂಡಿದ್ದಾರೆ.