ಬೆಂಗಳೂರು :ವೆಸ್ಟ್ ಇಂಡೀಸ್ ತಂಡದ ವಿಕೆಟ್ ಕೀಪರ್ ಬ್ಯಾಟರ್ ನಿಕೋಲಸ್ ಪೂರನ್ ಅವರನ್ನು ಸನ್ರೈಸರ್ಸ್ ಹೈದರಾಬಾದ್ 2022ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿನಲ್ಲಿ ಬರೋಬ್ಬರಿ 10.75 ಕೋಟಿ ರೂ. ನೀಡಿ ಖರೀದಿಸಿದೆ. ಆರ್ಸಿಬಿ ಶ್ರೀಲಂಕಾದ ಆಲ್ರೌಂಡರ್ ವನಿಡು ಹಸರಂಗ ಅವರನ್ನು ಕೂಡ 10.75 ಕೋಟಿ ರೂ. ನೀಡಿ ಖರೀದಿಸಿದೆ.
2018ರ ಡಿಸೆಂಬರ್ನಲ್ಲಿ ನಡೆದಿದ್ದ ಹರಾಜಿನಲ್ಲಿ 4.2 ಕೋಟಿಗೆ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ಖರೀದಿಸಿತ್ತು. ಆದರೆ, ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಅವರನ್ನು ರಿಟೈನ್ ಮಾಡಿಕೊಂಡಿರಲಿಲ್ಲ.
ವಿಕೆಟ್ ಕೀಪರ್ ವಿಭಾಗದಲ್ಲಿ ಹರಾಜಿನಲ್ಲಿದ್ದ 1.5 ಕೋಟಿ ರೂ. ನಿಗದಿ ಮಾಡಿಕೊಂಡಿದ್ದರು. ವಿಕೆಟ್ ಕೀಪರ್ ಸ್ಥಾನಕ್ಕಾಗಿ ಹೈದರಾಬಾದ್ ಮತ್ತು ಕೆಕೆಆರ್ ತಂಡಗಳು ಪೈಪೋಟಿ ನಡೆಸಿದ್ದರಿಂದ 10 ಕೋಟಿ ರೂ. ಮೀರಿತು. ಕೊನೆಗೆ ಸನ್ರೈಸರ್ಸ್ ಹೈದರಾಬಾದ್ 10.75 ಕೋಟಿ ರೂ.ಗೆ ಖರೀಸುವಲ್ಲಿ ಸಫಲವಾಯಿತು. ಇದು ಈ ವರ್ಷದ ಹರಾಜಿನಲ್ಲಿ ವಿದೇಶಿ ಆಟಗಾರ ಪಡೆದ ಗರಿಷ್ಠ ಮೊತ್ತವಾಗಿದೆ.