ಕರ್ನಾಟಕ

karnataka

ETV Bharat / sports

ವಿರಾಟ್​ ಫಾರ್ಮ್​ ಕಳೆದುಕೊಂಡಿರಲಿಲ್ಲ, ಅದು ಶತಕದ ಲಯ ನಿರ್ಧರಿಸುವ ಮಾನದಂಡವೂ ಅಲ್ಲ: ಸುನಿಲ್​ ಗವಾಸ್ಕರ್​ - ETV Bharath Kannada news

ವಿರಾಟ್​ ಟೆಸ್ಟ್​ ಕ್ರಿಕೆಟ್​ ಮಾದರಿಯ ಶತಕ ದಾಖಲಿಸಿದ್ದಾರೆ - ವಿರಾಟ್​ ಲಯ ಕಳೆದುಕೊಂಡಿರಲಿಲ್ಲ - ಅವರ ಬ್ಯಾಟ್​ನಿಂದ ಅರ್ಧಶತಕಗಳು ದಾಖಲಾಗಿದ್ದವು - ಬ್ಯಾಟಿಂಗ್​ ಲಯ ಅಳೆಯಲು ಶತಕ ಮಾನದಂಡ ಅಲ್ಲ - ಸುನಿಲ್​ ಗವಾಸ್ಕರ್​ ಅಭಿಪ್ರಾಯ

Sunil Gavaskar statement on Kohli Test century
ವಿರಾಟ್​ ಫಾರ್ಮ್​ ಕಳೆದುಕೊಂಡಿರಲಿಲ್ಲ

By

Published : Mar 13, 2023, 5:32 PM IST

ಅಹಮದಾಬಾದ್:ಟೆಸ್ಟ್ ಕ್ರಿಕೆಟ್​ನಲ್ಲಿ 3.5 ವರ್ಷಗಳ ನಂತರ ವಿರಾಟ್​ ಕೊಹ್ಲಿ ಶತಕ ಬಾರಿಸಿ ತಮ್ಮ ಬರವನ್ನು ನೀಗಿಸಿದ್ದಾರೆ. ವಿರಾಟ್​ ಬ್ಯಾಟಿಂಗ್​ ಫಾರ್ಮ್​ ಬಗ್ಗೆ ಬರುತ್ತಿದ್ದ ಹಲವಾರು ಪ್ರಶ್ನೆಗಳಿಗೆ ನಿನ್ನೆಯ ಪಂದ್ಯದಲ್ಲಿ ಉತ್ತರ ಸಿಕ್ಕಂತಾಗಿದೆ. ನಿನ್ನೆಯ ವಿರಾಟ್ ಬ್ಯಾಟಿಂಗ್​ ಬಗ್ಗೆ ಕ್ರಿಕೆಟ್ ದಂತಕಥೆ ಸುನಿಲ್ ಗವಾಸ್ಕರ್ "ಒಬ್ಬ ಒಳ್ಳೆಯ ಬ್ಯಾಟರ್​ ಫಾರ್ಮ್​ ಕಳೆದುಕೊಳ್ಳುವುದಿಲ್ಲ" ಎಂದು ಹೇಳಿದ್ದಾರೆ.

ಭಾನುವಾರ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾದ ಮೊದಲ ಇನ್ನಿಂಗ್ಸ್​ನಲ್ಲಿ ಗಳಿಸಿದ್ದ 480 ರನ್‌ಗಳಿಗೆ ಪ್ರತಿಕ್ರಿಯೆಯಾಗಿ ಭಾರತವು 571 ರನ್​ ದಾಖಲಿಸಿತು. ವಿರಾಟ್​ ಕೊಹ್ಲಿ 364 ಎಸೆತಗಳಲ್ಲಿ 186 ರನ್ ಗಳಿಸಿದರು. ನವೆಂಬರ್ 2019 ರಿಂದ 41 ಇನ್ನಿಂಗ್ಸ್​​ಗಳ ನಂತರ ಅವರ ಬ್ಯಾಟ್​ನಿಂದ ಬಂದ ಮೊದಲ ಶತಕ ಇದಾಗಿತ್ತು. ಇದು ವಿರಾಟ್​ ವೃತ್ತಿ ಜೀವನದ 75ನೇ ಅಂತಾರಾಷ್ಟ್ರೀಯ ಶತಕವಾದರೆ, ಟೆಸ್ಟ್​ನಲ್ಲಿ 28 ನೇಯದ್ದಾಗಿತ್ತು.

"ವಿರಾಟ್​ ಕೊಹ್ಲಿ 2 ಅಥವಾ 3 ವರ್ಷಗಳಿಂದ ಶತಕ ಗಳಿಸಿಲ್ಲ ಎಂದು ಹೇಳಲಾಗುತ್ತಿದೆ. ಆದರೆ, ಅವರು ಶತಕ ಮಾಡಿಲ್ಲ ಅಷ್ಟೇ ಅವರ ಬ್ಯಾಟ್​ನಿಂದ 7 ಇಲ್ಲಾ 8 ಅರ್ಧಶತಕಗಳು ದಾಖಲಾಗಿದ್ದವು. ಅವರು ಬ್ಯಾಟಿಂಗ್​ ಉತ್ತಮವಾಗಿಯೇ ಇತ್ತು. ಅವರು ವಿಕೆಟ್​ ನೀಡುತ್ತಿದ್ದದ್ದು ಅವರ ತಪ್ಪಾಗಿತ್ತು. ಶತಕ ಎಂಬುದು ವಿಕೆಟ್​ ಅನ್ನು ಕಾಯ್ದುಕೊಂಡಿರುವ ಕನಿಷ್ಠ ಅಂಕಿ ಅಷ್ಟೇ" ಎಂದು ಹೇಳುವ ಮೂಲಕ ಶತಕವೇ ಲಯವನ್ನು ನಿರ್ಧರಿಸುವ ಮಾನ ಅಲ್ಲ ಎಂಬ ಅಭಿಪ್ರಾಯ ತಿಳಿಸಿದ್ದಾರೆ.

ನಿನ್ನೆ ವಿರಾಟ್​ ಬ್ಯಾಟ್​ನಿಂದ ದಾಖಲಾದ ಶತಕ ಎರಡನೇ ನಿಧಾನ ಗತಿಯದ್ದಾಗಿದೆ. 241 ಬಾಲ್​ಗಳನ್ನು ಎದುರಿಸಿ ಕೇವಲ 5 ಬೌಂಡರಿಯಿಂದ ಶತಕ ಮಾಡಿದ್ದರು. ಅಂದರೆ, ಕೇವಲ 20 ರನ್​ ಫೋರ್​ನಿಂದ ಬಂದಿತ್ತು, ಬಾಕಿ ರನ್​ ಓಡಿ ಗಳಿಸಿಕೊಂಡಿದ್ದರು. 2012/ 13ರಲ್ಲಿ ಇಂಗ್ಲೆಂಡ್ ವಿರುದ್ಧ ಸರಣಿಯಲ್ಲಿ ವಿರಾಟ್​ 289 ಬಾಲ್​ನಿಂದ ಶತಕ ಮಾಡಿದ್ದರು. ಇದು ಅವರ ಅತಿ ಹೆಚ್ಚು ಎಸೆತ ಎದುರಿಸಿ ದಾಖಲಾದ ಮೊದಲ ಶತಕವಾಗಿದೆ.

"ಟೆಸ್ಟ್ ಪಂದ್ಯದ ಶತಕವನ್ನು ಹೇಗೆ ಗಳಿಸಬೇಕು ಎಂಬುದನ್ನು ಕೊಹ್ಲಿಯ ನಿನ್ನೆಯ ಆಟ ಸಾಕ್ಷಿಯಾಗಿತ್ತು. ವಿರಾಟ್​ ಸ್ವಲ್ಪ ನಿಧಾನವಾಗಿ ಪ್ರಾರಂಭಿಸಿದರು ಅಲ್ಲಿ ಪಿಚ್ ಮತ್ತು ಬೌಲಿಂಗ್ ಅನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿದರು. ಸೆಟ್ ಆದ ನಂತರ ವಿರಾಟ್​ ಕೆಲವು ಉತ್ತಮ ಹೊಡೆತಗಳನ್ನ ಬಾರಿಸಿದರು. ಶತಕದ ನಂತರ ಧೃಡವಾಗಿ ಬ್ಯಾಟ್​ ಬೀಸಿದರು. ಇದು ವಿರಾಟ್​ ಬ್ಯಾಟಿಂಗ್​ನಲ್ಲಿ ಸ್ಕೋರ್​ ಮಾಡುವ ದೃಢಸಂಕಲ್ಪ ಹೊಂದಿದ್ದರು ಎಂಬುದನ್ನು ತೋರಿಸುತ್ತದೆ" ಎಂದು ಗವಾಸ್ಕರ್ ಹೇಳಿದರು.

"ಮೊದಲ ಇನ್ನಿಂಗ್ಸ್​ನಲ್ಲಿ ಆಸ್ಟ್ರೇಲಿಯಾ ಬೃಹತ್​ ರನ್​ಗಳ ಟಾರ್ಗೆಟ್​ ನೀಡಿತ್ತು. ಈ ಟಾರ್ಗೆಟ್​ ವಿರಾಟ್​​ ಲೆಕ್ಕಾಚಾರದಲ್ಲಿತ್ತು. ಉಸ್ಮಾನ್​ ಖವಾಜಾ ಅವರ 180 ಹಾಗೇ ಕ್ಯಾಮರೂನ್ ಗ್ರೀನ್ ಶತಕ ಆಸಿಸ್​ಗೆ ಹೇಗೆ ನೆರವಾಗಿದೆ ಎಂಬುದನ್ನು ಅವರು ಚನ್ನಾಗಿಯೇ ಅರಿತಿದ್ದರು. ಶುಭಮನ್​ ಗಿಲ್​ 128 ರನ್​ ಮಾಡಿರುವ ಲೆಕ್ಕಾಚಾರದಲ್ಲೇ ವಿರಾಟ್​ 480 ತಲುಪಲು ಬೇಕಾದ ರನ್ ಗಳಿಸಲು ಧೃಡವಾಗಿ ನಿಂತಿದ್ದರು ಎಂದು ಗವಾಸ್ಕರ್​ ಅವರು ವಿರಾಟ್ ಬ್ಯಾಟಿಂಗ್​ ಲೆಕ್ಕಾಚಾರದ ಬಗ್ಗೆ ಮಾತನಾಡಿದರು.

ಇದನ್ನೂ ಓದಿ:ವಿಶ್ವಕಪ್​ ಪಂದ್ಯಗಳನ್ನು 40 ಓವರ್​ಗೆ ಇಳಿಸಿ, ಇಲ್ಲವಾದಲ್ಲಿ ಏಕದಿನ ಕ್ರಿಕೆಟ್​ ಅಳಿಯಲಿದೆ: ರವಿಶಾಸ್ತ್ರಿ

ABOUT THE AUTHOR

...view details