ಓವೆಲ್ (ಲಂಡನ್): ವಿರಾಟ್ ಕೊಹ್ಲಿ ಔಟ್ ಆದ ಶಾಟ್ ರಾಂಗ್ ಸೆಲೆಕ್ಷನ್ ಆಗಿತ್ತು, ಮಹತ್ವದ ಪಂದ್ಯದಲ್ಲಿ ಅನುಭವಿ ಆಟಗಾರ ತನ್ನ ಅರ್ಧಶತಕ ಗಳಿಸುವ ಬಗ್ಗೆ ಗಮನ ಕೇಂದ್ರೀಕರಿಸದೇ ತಂಡಕ್ಕೆ ಬೃಹತ್ ಮೊತ್ತ ಕಲೆಹಾಕಲು ಜೊತೆಯಾಟ ನಿರ್ಮಾಣ ಮಾಡಲು ನೋಡಬೇಕಿತ್ತು. ಅಲ್ಲದೇ ಎರಡನೇ ಇನ್ನಿಂಗ್ಸ್ನಲ್ಲಿ ಹೆಚ್ಚಿ ಬ್ಯಾಟರ್ಗಳು ಬಿರುಸಿನ ಆಟಕ್ಕೆ ಮುಂದಾಗ ತಪ್ಪಾದ ಶಾಟ್ನಿಂದ ವಿಕೆಟ್ ಕೊಟ್ಟಿದ್ದಾರೆ ಎಂದು ಮಾಜಿ ಕ್ರಿಕೆಟಿಗೆ ಸುನಿಲ್ ಗವಾಸ್ಕರ್ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಬ್ಯಾಟಿಂಗ್ ವೈಫಲ್ಯದ ಬಗ್ಗೆ ಮಾತನಾಡಿದ್ದಾರೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನಲ್ಲಿ ಗೆಲ್ಲಲು ಭಾರತ ಎರಡನೇ ಇನ್ನಿಂಗ್ಸ್ನಲ್ಲಿ 444 ರನ್ ಗಳಿಸಬೇಕಿತ್ತು. ನಾಲ್ಕನೇ ದಿನದಾಟದ ಅಂತ್ಯಕ್ಕೆ ಭಾರತ ಮೂರು ವಿಕೆಟ್ ಕಳೆದು ಕೊಂಡು 164 ರನ್ ಗಳಿಸಿತ್ತು. ಕೊನೆಯ ದಿನಕ್ಕೆ ಭಾರತ 280 ರನ್ ಗಳಿಸುವ ಅಗತ್ಯತೆ ಇತ್ತು. ಆದರೆ, ಭಾರತ ಮೊದಲ ಸೆಷನ್ನಲ್ಲಿ 7 ವಿಕೆಟ್‌ಗಳನ್ನು ಕಳೆದುಕೊಂಡು 209 ರನ್ನಿಂದ ಸೋಲನುಭವಿಸಿತ್ತು.
ಪಂದ್ಯ ಸೋಲಿನ ನಂತರ ಸ್ಟಾರ್ಸ್ಪೋರ್ಟ್ಗೆ ಚರ್ಚೆಯಲ್ಲಿ ಮಾತನಾಡಿ ಗವಾಸ್ಕರ್ ವಿರಾಟ್ ಕೊಹ್ಲಿ ವಿಕೆಟ್ ಔಟ್ ಆಗಿದ್ದರ ಬಗ್ಗೆ ನೇರವಾಗಿ ಕಮೆಂಟ್ ಮಾಡಿದ ಅವರು ಶಾಟ್ ಸೆಲೆಕ್ಷನ್ ಮಾಡಿದ್ದನ್ನೇ ತಪ್ಪು ಎಂದು ಹೇಳಿದ್ದಾರೆ."ಇದೊಂದು ಕೆಟ್ಟ ಶಾಟ್ ಮತ್ತು ಅದು ಸಾಮಾನ್ಯವಾಗಿ ಆಡುವ ಆಟ ಆಗಿದೆ. ಆ ಶಾಟ್ ಬಗ್ಗೆ ವಿರಾಟ್ ಕೊಹ್ಲಿಯನ್ನು ಅಭಿಪ್ರಾಯ ಕೇಳಬೇಕು ಎಂದು ನಾನು ಭಾವಿಸುತ್ತೇನೆ. ಅದು ಆಫ್-ಸ್ಟಂಪ್‌ನ ಹೊರಗಿನ ಹೋಗುತ್ತಿದ್ದ ಶಾಟ್. ಪಂದ್ಯವನ್ನು ಗೆಲ್ಲಲು, ತಂಡಕ್ಕೆ ಸುದೀರ್ಘ ಇನ್ನಿಂಗ್ಸ್ ಬೇಕು, ನಿಮಗೆ ಒಂದು ಶತಕ ಬೇಕು. ಆಫ್-ಸ್ಟಂಪ್‌ನ ಹೊರಗೆ ಶಾಟ್ ಆಡಲು ಹೋದರೆ ನೀವು ಶತಕವನ್ನು ಹೇಗೆ ಮಾಡಲಿದ್ದೀರಿ"