ಕರ್ನಾಟಕ

karnataka

ETV Bharat / sports

IPLನಲ್ಲಿ ವಿದೇಶಿ ಕೋಚ್​​ಗಳ ನೇಮಕ 'ಭಾರತೀಯ ಕ್ರಿಕೆಟ್​​ಗೆ ಮೋಸ: ಮಹತ್ವದ ಅಂಶ ಹೊರಹಾಕಿದ ಗವಾಸ್ಕರ್ - ಸುನಿಲ್ ಗವಾಸ್ಕರ್​

ಇಂಡಿಯನ್​ ಪ್ರೀಮಿಯರ್ ಲೀಗ್​ನಲ್ಲಿ ವಿವಿಧ ತಂಡಗಳಿಗೆ ವಿದೇಶಿ ಕೋಚ್​ ನೇಮಕ ಮಾಡುತ್ತಿರುವುದು ಭಾರತೀಯ ಕ್ರಿಕೆಟ್​ಗೆ ಅನಾನುಕೂಲವಾಗಲಿದೆ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ.

Sunil Gavaskar On Foreign Coaches In IPL
Sunil Gavaskar On Foreign Coaches In IPL

By

Published : Jul 8, 2022, 9:12 PM IST

ಮುಂಬೈ: ಇಂಡಿಯನ್​ ಪ್ರೀಮಿಯರ್ ಲೀಗ್​​ನಲ್ಲಿ ವಿವಿಧ ತಂಡಗಳಿಗೆ ವಿದೇಶಿ ಕೋಚ್​​ಗಳ ನೇಮಕದ ಬಗ್ಗೆ ಬ್ಯಾಟಿಂಗ್​​ ದಂತಕಥೆ ಸುನಿಲ್​ ಗವಾಸ್ಕರ್ ಪ್ರಶ್ನೆ ಮಾಡಿದ್ದಾರೆ. ವಿದೇಶಿ ಕೋಚ್​​ಗಳ ನೇಮಕ ಭಾರತೀಯ ಕ್ರಿಕೆಟ್​ಗೆ ಅನಾನುಕೂಲ ಮಾಡಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐಪಿಎಲ್​​​ನಲ್ಲಿ ಭಾರತೀಯ ಆಟಗಾರರ ಬಗ್ಗೆ ವಿದೇಶಿ ಕೋಚ್​​ಗಳು ಮಾಹಿತಿ ಪಡೆದುಕೊಳ್ಳುತ್ತಿರುವ ಅಂಶದ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಇಂಗ್ಲೆಂಡ್ ವಿರುದ್ಧ ನಡೆದ ಅಂತಿಮ ಟೆಸ್ಟ್​ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್ ಶ್ರೇಯಸ್ ಅಯ್ಯರ್​ ಶಾಟ್​ ಬಾಲ್​ಗೆ ವಿಕೆಟ್ ಒಪ್ಪಿಸಿದ್ದರು. ಈ ವಿಚಾರ ಹೆಚ್ಚು ಚರ್ಚೆಗೆ ಗ್ರಾಸವಾಗಿತ್ತು. ಐಪಿಎಲ್​​ನಲ್ಲಿ ಶ್ರೇಯಸ್ ಅಯ್ಯರ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದಲ್ಲಿದ್ದು, ಅದ ತಂಡಕ್ಕೆ ಬ್ರೆಂಡನ್ ಮೆಕ್ಕಲಂ ಕೋಚ್​ ಆಗಿದ್ದಾರೆ.

ಸದ್ಯ ಇಂಗ್ಲೆಂಡ್ ತಂಡದ ಕೋಚ್​ ಆಗಿರುವ ಮೆಕ್ಕಲಂಗೆ ಅಯ್ಯರ್​​ ಬ್ಯಾಟಿಂಗ್ ದೌರ್ಬಲ್ಯದ ಬಗ್ಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿಯೇ ಇಂಗ್ಲೆಂಡ್‌ ಟೆಸ್ಟ್ ತಂಡದ ನೂತನ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿರುವ ಬ್ರೆಂಡನ್ ಮೆಕ್ಕಲಂ, ಬೌಲರ್‌ಗಳಿಗೆ ಶ್ರೇಯಸ್ ಅಯ್ಯರ್ ಎದುರು ಶಾರ್ಟ್‌ ಬಾಲ್ ಎಸೆಯಲು ಸೂಚನೆ ಕೊಟ್ಟಿದ್ದರು. ಬ್ರೆಂಡನ್ ಮೆಕ್ಕಲಂ ಅವರ ತಂತ್ರ ಫಲಕೊಟ್ಟಿತ್ತು.

ಇದನ್ನೂ ಓದಿರಿ:ಬಾಕ್ಸರ್​ ಸ್ವೀಟಿ ಬುರಾ ಜೊತೆ ಟೀಂ ಇಂಡಿಯಾ ಕಬಡ್ಡಿ ಕ್ಯಾಪ್ಟನ್​​​ ದೀಪಕ್ ಹೂಡಾ ಮದುವೆ

ಈ ಘಟನೆ ಬಗ್ಗೆ ಗವಾಸ್ಕರ್ ಮಾತನಾಡಿಲ್ಲ. ಆದರೆ, ವಿದೇಶಿ ಕೋಚ್​ಗಳಿಗೆ ಭಾರತೀಯ ಬ್ಯಾಟರ್​, ಬೌಲರ್​ಗಳ ಬಗ್ಗೆ ಚೆನ್ನಾಗಿ ಗೊತ್ತಿರುವುದರಿಂದ ಇದು ಭಾರತೀಯ ಕ್ರಿಕೆಟ್​​ಗೆ ಅನಾನುಕೂಲವಾಗಲಿದೆ ಎಂದಿದ್ದು, ದೊಡ್ಡ ದೊಡ್ಡ ಟೂರ್ನಿಗಳಲ್ಲಿ ಎದುರಾಳಿ ತಂಡ ಸುಲಭವಾಗಿ ಗೆಲುವು ದಾಖಲು ಮಾಡಲು ಸಹಕಾರಿಯಾಗುತ್ತದೆ ಎಂದಿದ್ದಾರೆ.

ಐಪಿಎಲ್​ ಕೋಚ್​​ಗಳ ವಿಷಯಕ್ಕೆ ಬಂದಾಗ ಅನೇಕರು ವಿವಿಧ ರಾಷ್ಟ್ರೀಯ ತಂಡದ ಕೋಚ್​​ಗಳಾಗಿದ್ದು, ಕೆಲವರು ಸಹಾಯಕ ತರಬೇತುದಾರರು, ಬ್ಯಾಟಿಂಗ್​ ಅಥವಾ ಬೌಲಿಂಗ್ ಸಲಹೆಗಾರರಾಗಿದ್ದಾರೆ. ಅವರಿಗೆ ಭಾರತೀಯ ಆಟಗಾರರ ಬಗ್ಗೆ ಮೊದಲೇ ಮಾಹಿತಿ ಗೊತ್ತಿರುವ ಕಾರಣ ಇದು ಭಾರತೀಯ ಕ್ರಿಕೆಟ್​​ಗೆ ಅನಾನುಕೂಲವಾಗಲಿದೆ ಎಂದಿದ್ದಾರೆ.

ABOUT THE AUTHOR

...view details