ಮುಂಬೈ: ಮುಂಬೈನ ಪ್ರಸಿದ್ಧ ರಣಜಿ ಆಟಗಾರ ಮತ್ತು ಮಾಜಿ ಕೋಚ್, ಮಾರ್ಗದರ್ಶಕ ವಾಸುದೇವ್ ಪರಾಂಜಪೆ ಸೋಮವಾರ ನಿಧನರಾಗಿದ್ದಾರೆ. 82 ವರ್ಷದ ಪರಾಂಜಪೆ ಪತ್ನಿ ಲಲಿತಾ ಮತ್ತು ಇಬ್ಬರು ಹೆಣ್ಣು ಮಕ್ಕಳು ಹಾಗೂ ಮಾಜಿ ಕ್ರಿಕೆಟರ್ ಹಾಗೂ ರಾಷ್ಟ್ರೀಯ ಆಯ್ಕೆ ಸಮಿತಿ ಸದಸ್ಯನಾಗಿದ್ದ ಮಗ ಜತಿನ್ ಅವರನ್ನ ಅಗಲಿದ್ದಾರೆ.
ಇಂದು(ಆಗಸ್ಟ್ 30,2021ರ) ಸೋಮವಾರ ಶ್ರೀ ವಾಸುದೇವ್ ಪರಾಂಜಪೆ ಅವರು ನಿಧನರಾಗಿದ್ದಾರೆ ಎಂಬ ವಿಷಯವನ್ನು ಕೇಳಿ ಮುಂಬೈ ಕ್ರಿಕೆಟ್ ಅಸೋಸಿಯೇಷನ್ ತೀವ್ರ ದುಃಖವನ್ನು ವ್ಯಕ್ತಪಡಿಸುತ್ತದೆ ಮತ್ತು ಸಂತಾಪವನ್ನು ಸೂಚಿಸುತ್ತದೆ ಎಂದು ಹೇಳಿಕೆ ಬಿಡುಗಡೆ ಮಾಡಿದೆ.
ಎಂಸಿಎಯ ಅಪೆಕ್ಸ್ ಕೌನ್ಸಿಲ್ ಸದಸ್ಯರ ಪರವಾಗಿ, ಎಲ್ಲಾ ಸಹೋದರ ಸದಸ್ಯ ಕ್ಲಬ್‌ಗಳು ಪರಾಂಜಪೆಯವರ ನಿಧನಕ್ಕೆ ನಾವು ಸಂತಾಪ ಸೂಚಿಸುತ್ತೇವೆ ಎಂದು ಎಂಸಿಎ ಕಾರ್ಯದರ್ಶಿ ಸಂಜಯ್ ನಾಯ್ಕ್ ಮತ್ತು ಜಂಟಿ ಕಾರ್ಯದರ್ಶಿ ಶಹಲಮ್ ಶೇಖ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಎಂಸಿಯ ಜೊತೆಗೆ 6 ದಶಕಗಳ ನಂಟನ್ನು ಹೊಂದಿದ್ದ ಪರಾಂಜಪೆ ಬೋರ್ಡ್ನಲ್ಲಿ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದರು. ಅವರು ಕ್ರಿಕೆಟ್ ದಂತಕತೆ ಸುನಿಲ್ ಗವಾಸ್ಕರ್ಗೆ ಮಾರ್ಗದರ್ಶಕರಾಗಿದ್ದರು.
ಅಲ್ಲದೆ ಗವಾಸ್ಕರ್ಗೆ ಪ್ರಸಿದ್ಧ ಸನ್ನಿ ಎಂಬ ಅಡ್ಡ ಹೆಸರನ್ನು ಇವರೇ ನಾಮಕರಣ ಮಾಡಿದ್ದವರು. ಮುಂಬೈ ಪರ 29 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ ಅವರು, 23 ಶತಕ ಮತ್ತು 2 ಅರ್ಧಶತಕದ ಸಹಿತ 785 ರನ್ಗಳಿಸಿದ್ದರು.