ಲಂಡನ್ :ಭಾರತದ ವಿರುದ್ಧದ 2ನೇ ಟೆಸ್ಟ್ಗೂ ಮುನ್ನ ಇಂಗ್ಲೆಂಡ್ಗೆ ಮರ್ಮಾಘಾತವಾಗಿದೆ. ಹಿರಿಯ ವೇಗಿ ಸ್ಟುವರ್ಟ್ ಬ್ರಾಡ್ ಕಾಫ್ ಇಂಜುರಿ(ಕಣಕಾಲಿನ ಹಿಂಬಾಗ)ಯಿಂದ ಬಳಲುತ್ತಿರುವುದರಿಂದ ಇಡೀ ಸರಣಿಯಿಂದಲೇ ಹೊರ ಬಿದ್ದಿದ್ದಾರೆ.
35 ವರ್ಷದ ಬ್ರಾಡ್ ಇಂಗ್ಲೆಂಡ್ನ 2ನೇ ಗರಿಷ್ಠ ವಿಕೆಟ್ ಪಡೆದ ಬೌಲರ್ ಆಗಿದ್ದು, 150 ಟೆಸ್ಟ್ಗಳ ಸನಿಹವಿದ್ದರು. ಇನ್ನು, 39 ವರ್ಷದ ಜೇಮ್ಸ್ ಆ್ಯಂಡರ್ಸನ್ ಕೂಡ ಗಾಯಕ್ಕೊಳಗಾಗಿದ್ದು, ಗುರುವಾರ ಆರಂಭವಾಗಲಿರುವ 2ನೇ ಟೆಸ್ಟ್ ಪಂದ್ಯದಲ್ಲಿ ಆಡುವುದು ಅನುಮಾನವಾಗಿದೆ. ಆದರೆ, ಅವರ ಗಾಯದ ಬಗ್ಗೆ ಸಂಪೂರ್ಣ ಮಾಹಿತಿ ಇನ್ನು ಹೊರಬಿದ್ದಿಲ್ಲ.
ಇಬ್ಬರು ಹಿರಿಯ ವೇಗಿಗಳು ಗಾಯದಿಂದ ಬಳಲುತ್ತಿರುವುದರಿಂದ ಸಾದಿಕ್ ಮೊಹ್ಮೂದ್ಗೆ ಕರೆ ನೀಡಲಾಗಿದೆ. ಪ್ರಸ್ತುತ ತಂಡದಲ್ಲಿ ಮಾರ್ಕ್ವುಡ್ ಮತ್ತು ಕ್ರೈಗ್ ಓವರ್ಟನ್ ಆಂಗ್ಲರ ಮುಂದಿರುವ ಬೌಲಿಂಗ್ ಆಯ್ಕೆಯಾಗಿದ್ದಾರೆ.