ಕರ್ನಾಟಕ

karnataka

ETV Bharat / sports

ಲಂಕಾ ಪ್ಲೇಯರ್ಸ್​ ​ - ಕ್ರಿಕೆಟ್ ಮಂಡಳಿ ಮುಸುಕಿನ ಗುದ್ದಾಟ: ಭಾರತದೊಂದಿಗಿನ ಸರಣಿ ಮೇಲೆ ಕರಿನೆರಳು? - ಶ್ರೀಲಂಕಾ ಕ್ರಿಕೆಟ್ ಮಂಡಳಿ

ವೇತನ ವಿಚಾರವಾಗಿ ಶ್ರೀಲಂಕಾ ಪ್ಲೇಯರ್ಸ್ ಹಾಗೂ ಕ್ರಿಕೆಟ್​ ಬೋರ್ಡ್​ ನಡುವೆ ಮುಸುಕಿನ ಗುದ್ದಾಟ ಶುರುವಾಗಿದೆ.

Srilanka cricket
Srilanka cricket

By

Published : May 21, 2021, 10:34 PM IST

ಕೊಲಂಬೊ:ಶ್ರೀಲಂಕಾ ಕ್ರಿಕೆಟ್ ಮಂಡಳಿ ಹಾಗೂ ಅಲ್ಲಿನ ಕ್ರಿಕೆಟರ್ಸ್ ನಡುವೆ ಮುಸುಕಿನ ಗುದ್ದಾಟ ಶುರುವಾಗಿದ್ದು, ನೂತನ ಗುತ್ತಿಗೆ ಒಪ್ಪಂದಕ್ಕೆ ಸಹಿ ಹಾಕಲು ಅನೇಕ ಕ್ರಿಕೆಟರ್ಸ್​ ಹಿಂದೇಟು ಹಾಕಿದ್ದಾರೆ.

ವಾರ್ಷಿಕ ಗುತ್ತಿಗೆ ಒಪ್ಪಂದದಲ್ಲಿ ಭಾರಿ ಕಡಿತ ಮಾಡಿರುವ ಕಾರಣ ಸಹಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ. ಟೆಸ್ಟ್​​​ ಕ್ರಿಕೆಟ್​ ತಂಡದ ನಾಯಕ ದಿಮುತ್​ ಕರುಣರತ್ನೆ, ದಿನೇಶ್ ಚಾಂಡಿಮಾಲ್​, ಎಂಜಲೋ ಮ್ಯಾಥ್ಯೂಸ್​​​ ಸೇರಿದಂತೆ 24 ಪ್ರಮುಖ ಪ್ಲೇಯರ್ಸ್​​​ ಸಹಿ ಹಾಕಲು ಹಿಂದೇಟು ಹಾಕಿದ್ದಾರೆ.

ಶ್ರೀಲಂಕಾ ಕ್ರಿಕೆಟ್ ಮಂಡಳಿ ಆರ್ಥಿಕ ತೊಂದರೆ ಅನುಭವಿಸುತ್ತಿದ್ದು, ಹೀಗಾಗಿ ಅನೇಕ ಪ್ಲೇಯರ್ಸ್​​​ ವಾರ್ಷಿಕ ಸಂಬಳದಲ್ಲಿ ಕಡಿತಗೊಳಿಸಲಾಗಿದ್ದು, ಇದೇ ಮುಸುಕಿನ ಗುದ್ದಾಟಕ್ಕೆ ಮುಖ್ಯ ಕಾರಣವಾಗಿದೆ ಎಂದು ತಿಳಿದು ಬಂದಿದೆ.

ಶ್ರೀಲಂಕಾ ನೀಡುವ ಸಂಭಾವಣೆ ಇತರ ರಾಷ್ಟ್ರಗಳ ವೇತನದ ಮೂರನೇ ಒಂದು ಭಾಗದಷ್ಟಿದೆ ಎಂದು ಕರುಣರತ್ನೆ, ಮ್ಯಾಥ್ಯೂಸ್​​, ಚಾಂಡಿಮಲ್ ಹೇಳಿಕೊಂಡಿದ್ದಾರೆ. ಪ್ರಮುಖವಾಗಿ 24 ಪ್ಲೇಯರ್ಸ್​​ಗಳಿಗೆ 4 ವಿಭಾಗದಡಿ ಗುತ್ತಿಗೆ ನೀಡಲಾಗಿದೆ. ಅದಕ್ಕೆ ಸಹಿ ಹಾಕಲು ಜೂನ್​ 3ರವರೆಗೆ ಅವಕಾಶ ನೀಡಲಾಗಿದೆ. ಈ ಗುದ್ದಾಟದಿಂದಾಗಿ ಭಾರತದ ವಿರುದ್ಧ ನಡೆಯಲಿರುವ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಮೇಲೂ ಕರಿನೆರಳು ಬೀಳುವ ಸಾಧ್ಯತೆ ಇದೆ.

ABOUT THE AUTHOR

...view details