ಕರ್ನಾಟಕ

karnataka

ETV Bharat / sports

ಶ್ರೀಲಂಕಾದ ಮೊದಲ ಟೆಸ್ಟ್​ ಕ್ಯಾಪ್ಟನ್​ ಬಂದುಲಾ ವರ್ನಾಪುರ

68 ವರ್ಷದ ಮಾಜಿ ಲಂಕಾ ಮಾಜಿ ನಾಯಕನಿಗೆ ಸುಗರ್ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದ್ದರಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.

By

Published : Oct 18, 2021, 10:42 PM IST

Sri Lanka's first captain Bandula Warnapura is no more
ಶ್ರೀಲಂಕಾದ ಮೊದಲ ಟೆಸ್ಟ್​ ಕ್ಯಾಪ್ಟನ್​ ಬಂದುಲಾ ವರ್ನಾಪುರ

ಕೊಲಂಬೊ: ಶ್ರೀಲಂಕಾದ ಮೊದಲ ಟೆಸ್ಟ್ ತಂಡದ ನಾಯಕ ಮತ್ತು ರಾಷ್ಟ್ರೀಯ ತಂಡದ ಮಾಜಿ ಕೋಚ್ ವಂಡುಲ ವರ್ನಾಪುರ ಕೊಲಂಬೋದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ನಿಧನರಾಗಿದ್ದಾರೆ.

68 ವರ್ಷದ ಮಾಜಿ ಲಂಕಾ ಮಾಜಿ ನಾಯಕನಿಗೆ ಸುಗರ್ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದ್ದರಿಂದ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.

1982ರಲ್ಲಿ ಬಂಡುಲಾ ಶ್ರೀಲಂಕಾದ ಮೊದಲ ಟೆಸ್ಟ್​ ಪಂದ್ಯದಲ್ಲಿ ತಂಡವನ್ನು ಮುನ್ನಡೆಸಿದ್ದರು. ಅವರು ಲಂಕಾ ತಂಡದ ಪರ 3 ಟೆಸ್ಟ್​ ಮತ್ತು 12 ಏಕದಿನ ಪಂದ್ಯಗಳ್ನಾಡಿದ್ದಾರೆ. ಆದರೆ, ಅವರು 1982/93ರಲ್ಲಿ ರಬೆಲ್ ತಂಡದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದರಿಂದ ಅವರನ್ನು ಅಜೀವ ನಿಷೇಧಕ್ಕೆ ಒಳಗಾಗಿದ್ದರು.

ಆದರೆ 1991ರಲ್ಲಿ ಬಂಡುಲಾ ಮತ್ತೆ ರಾಷ್ಟ್ರೀಯ ಕೋಚ್​ ಆಗಿ ಮತ್ತು ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. 1994 ರಲ್ಲಿ ಡೈರೆಕ್ಟರ್ ಆಫ್ ಕೋಚಿಂಗ್ ಆಗಿ ನೇಮಕಗೊಂಡಿದ್ದರು. 20221ರಲ್ಲಿ ಎಸ್​ಎಲ್​ಸಿಯ ಕ್ರಿಕೆಟ್​ ಕಾರ್ಯಾಚರಣೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಬಂಡುಲ ವರ್ನಾಪುರ ಸಾವಿಗೆ ಶ್ರೀಲಂಕಾದ ಮಾಜಿ ಕ್ರಿಕೆಟಿಗ ಸನತ್ ಜಯಸೂರ್ಯ ಸೇರಿದಂತೆ ಹಲವಾರು ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ.

ಇದನ್ನು ಓದಿ:ವಿಶ್ವಕಪ್​ನಲ್ಲಿ ರೋಹಿತ್​ ಜೊತೆ ರಾಹುಲ್ ಇನ್ನಿಂಗ್ಸ್ ಆರಂಭಿಸೋದು ಪಕ್ಕಾ: ದೃಢಪಡಿಸಿದ ಕೊಹ್ಲಿ

ABOUT THE AUTHOR

...view details