ನವದೆಹಲಿ :ಇತ್ತೀಚಿನ ಇಂಗ್ಲೆಂಡ್ ಪ್ರವಾಸದ ವೇಳೆ ಕೋವಿಡ್ ಪ್ರೋಟೋಕಾಲ್ ಬ್ರೇಕ್ ಮಾಡಿ ಒಂದು ವರ್ಷ ನಿಷೇಧ ಮತ್ತು ಭಾರಿ ದಂಡಕ್ಕೆ ತುತ್ತಾಗಿರುವ ಕುಸಾಲ್ ಮೆಂಡಿಸ್, ದನುಷ್ಕಾ ಗುಣತಿಲಕ ಮತ್ತು ನಿರೋಷನ್ ಡಿಕ್ವೆಲ್ಲಾ ಅಮೆರಿಕಾ ಕ್ರಿಕೆಟ್ನಲ್ಲಿ ಆಡುವುದಕ್ಕೆ ಚಿಂತಿಸುತ್ತಿದ್ದಾರೆ ಎಂದು ವರದಿಗಳಿಂದ ತಿಳಿದು ಬಂದಿದೆ.
ಭಾರತಕ್ಕೆ 2012ರ ಅಂಡರ್-19 ವಿಶ್ವಕಪ್ ತಂದುಕೊಟ್ಟಿದ್ದ ಉನ್ಮುಕ್ತ್ ಚಾಂದ್ ಅಮೆರಿಕಾ ಕ್ರಿಕೆಟ್ನಲ್ಲಿ ನೆಲೆ ಕಂಡುಕೊಳ್ಳುವ ಆಲೋಚನೆಯಿಂದ ತಮ್ಮ 28ನೇ ವಯಸ್ಸಿಗೆ ಭಾರತೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದರು. ಅವರು ಅಮೆರಿಕಾದ ಮೈನರ್ ಕ್ರಿಕೆಟ್ ಲೀಗ್ನಲ್ಲಿ ಈಗಾಗಲೇ ತಮ್ಮ ಅಭಿಯಾನ ಶುರು ಮಾಡಿದ್ದಾರೆ.
ನ್ಯೂಜಿಲ್ಯಾಂಡ್ನ ಸ್ಟಾರ್ ಆಲ್ರೌಂಡರ್ ಕೋರಿ ಆ್ಯಂಡರ್ಸನ್ ಮತ್ತು ಪಾಕಿಸ್ತಾನದ ಸಮಿ ಇಸ್ಲಾಮ್ ಕೂಡ ತಮ್ಮ ರಾಷ್ಟ್ರೀಯ ತಂಡಕ್ಕೆ ನಿವೃತ್ತಿ ಘೋಷಿಸಿ ಈಗಾಗಲೇ ಅಮೆರಿಕಾದಲ್ಲಿ ನೆಲೆಯೂರಿದ್ದಾರೆ.