ಕರ್ನಾಟಕ

karnataka

ETV Bharat / sports

ಕ್ರಿಕೆಟ್​ ಸರಣಿ ಮಧ್ಯೆಯೇ ಮೂವರು ಶ್ರೀಲಂಕಾ ಆಟಗಾರರ ವಿವಾಹ ಸಂಭ್ರಮ - ಕ್ರಿಕೆಟ್​ ಸರಣಿ ಮಧ್ಯೆಯೇ ಶ್ರೀಲಂಕಾ ಆಟಗಾರರ ವಿವಾಹ

ಅಫ್ಘಾನಿಸ್ತಾನವ ವಿರುದ್ಧದ ಕ್ರಿಕೆಟ್​ ಸರಣಿಯ ಮಧ್ಯೆಯೇ ಶ್ರೀಲಂಕಾದ ಮೂವರು ಆಟಗಾರರು ಒಂದೇ ದಿನದಲ್ಲಿ ವಿವಾಹ ಬಂಧನಕ್ಕೆ ಒಳಗಾಗಿದ್ದಾರೆ. ಶ್ರೀಲಂಕಾ ಕ್ರಿಕೆಟ್​ ಮಂಡಳಿ ಚಿತ್ರಗಳನ್ನು ಹಂಚಿಕೊಂಡಿದೆ.

sri-lankan-cricketers-tie-knot
ಶ್ರೀಲಂಕಾ ಆಟಗಾರರ ವಿವಾಹ ಸಂಭ್ರಮ

By

Published : Nov 28, 2022, 7:24 PM IST

ಅಫ್ಘಾನಿಸ್ತಾನ ವಿರುದ್ಧದ ಏಕದಿನ ಕ್ರಿಕೆಟ್‌ ಸರಣಿಯ ನಡುವೆಯೇ ಶ್ರೀಲಂಕಾದ ಮೂವರು ಆಟಗಾರರಿಗೆ ಕಂಕಣಭಾಗ್ಯ ಕೂಡಿ ಬಂದಿದೆ. 2 ಮತ್ತು 3 ನೇ ಏಕದಿನ ಪಂದ್ಯದ ಮಧ್ಯೆ 3 ದಿನ ಬಿಡುವು ನೀಡಲಾಗಿದೆ. ಈ ಸಮಯದಲ್ಲಿಯೇ ಲಂಕಾ ಆಟಗಾರರು ತಮ್ಮ ಬಾಳಸಂಗಾತಿಯ ಕೈ ಹಿಡಿದಿದ್ದಾರೆ.

ಆಲ್​ರೌಂಡರ್​ ಕಸುನ್​ ರಜಿಥಾ, ಬ್ಯಾಟರ್​ ಚರಿಥಾ ಅಸಲಂಕಾ, ಫಥುಮಾ ನಿಸ್ಸಂಕಾ ಇಂದು ಹಸೆಮಣೆ ಏರಿದ್ದಾರೆ. ಮೂವರು ಆಟಗಾರರ ವಿವಾಹದ ಫೋಟೋಗಳನ್ನು ಶ್ರೀಲಂಕಾ ಕ್ರಿಕೆಟ್​ ಮಂಡಳಿ ತನ್ನ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಶುಭಾಶಯ ತಿಳಿಸಿದೆ. ಕ್ರಿಕೆಟಿಗರ ವಿವಾಹಕ್ಕೆ ಮಾಜಿ ಆಟಗಾರರು, ಅಭಿಮಾನಗಳು ಕೂಡ ಶುಭಾಶಯ ಕೋರಿದ್ದಾರೆ. ಕ್ರಿಕೆಟ್​ ಜೀವನದ ಜೊತೆಗೆ ವೈಯಕ್ತಿಕ ಜೀವನವೂ ಉತ್ತಮವಾಗಿರಲಿ ಎಂದು ಹರಸಿದ್ದಾರೆ.

ಇನ್ನು ಮೂವರು ಪಂದ್ಯಗಳ ಏಕದಿನ ಸರಣಿಯಲ್ಲಿ ಶ್ರೀಲಂಕಾ ಮೊದಲ ಪಂದ್ಯವನ್ನು 60 ರನ್​ಗಳಿಂದ ಅಫ್ಘನ್​ ಮುಂದೆ ಶರಣಾಗಿತ್ತು. ಬಳಿಕ ಭಾನುವಾರ ನಡೆದ 2ನೇ ಪಂದ್ಯ ಮಳೆಗೆ ಆಹುತಿಯಾಗಿತ್ತು. ಮೂರನೇ ಪಂದ್ಯ ನವೆಂಬರ್​ 30 ರಂದು ನಡೆಯಲಿದೆ.

ಇದನ್ನೂ ಓದಿ:2 ಡಬ್ಲ್ಯೂಬಿಸಿ ಪ್ರಶಸ್ತಿಗೆ ಪಂಚ್​ ಮಾಡಿದ ಭಾರತದ ಬಾಕ್ಸರ್​ ಊರ್ವಶಿ ಸಿಂಗ್​

ABOUT THE AUTHOR

...view details