ಮೆಲ್ಬೋರ್ನ್ :ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟಿ20 ಪಂದ್ಯವನ್ನು 5 ವಿಕೆಟ್ಗಳಿಂದ ಗೆಲ್ಲುವ ಮೂಲಕ ವೈಟ್ ವಾಶ್ ಮುಖಭಂಗವನ್ನು ತಪ್ಪಿಸಿಕೊಂಡಿದೆ. ಆದರೆ, 5 ಪಂದ್ಯಗಳ ಟಿ20 ಸರಣಿಯನ್ನು 4-1ರಲ್ಲಿ ಕಾಂಗರೂ ಪಡೆ ವಶಪಡಿಸಿಕೊಂಡಿದೆ.
ಭಾನುವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ 6 ವಿಕೆಟ್ ಕಳೆದುಕೊಂಡು 154 ರನ್ಗಳಿಸಿತ್ತು. ಮ್ಯಾಥ್ಯೂ ವೇಡ್ 27 ಎಸೆತಗಳಲ್ಲಿ 43 ರನ್ಗಳಿಸಿದರೆ, ಮ್ಯಾಕ್ಸ್ವೆಲ್ 29, ಇಂಗ್ಲಿಸ್ 23 ರನ್ಗಳಿಸಿದ್ದರು.
ಶ್ರೀಲಂಕಾ ಪರ ಲಹಿರು ಕುಮಾರ 34ಕ್ಕೆ 2, ದುಷ್ಮಂತ ಚಮೀರಾ 30ಕ್ಕೆ2, ಪ್ರವೀಣ್ ಜಯವಿಕ್ರಮ 29ಕ್ಕೆ1 ಮತ್ತು ಕರುಣರತ್ನೆ 32ಕ್ಕೆ 1 ವಿಕೆಟ್ ಪಡೆದಿದ್ದರು.
155 ರನ್ಗಳ ಗುರಿ ಬೆನ್ನಟ್ಟಿದ ಲಂಕಾ ಪಡೆ 19.5 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಕುಸಾಲ್ ಮೆಂಡಿಸ್ 58 ಎಸೆತಗಳಲ್ಲಿ 5 ಬೌಂಡರಿ,1 ಸಿಕ್ಸರ್ ಸಹಿತ ಅಜೇಯ 69 ರನ್ಗಳಿಸಿ ತಂಡವನ್ನು ಗೆಲುವಿನ ಗಡಿ ದಾಟಿಸಿದರು. ಇವರಿಗೆ ಸಾಥ್ ನೀಡಿದ ದಾಸುನ್ ಶನಕ 35 ರನ್ಗಳಿಸಿ ಗೆಲುವಿಗೆ ಒಂದು ರನ್ ಬೇಕಿದ್ದಾಗ ಕೇನ್ ರಿಚರ್ಡ್ಸನ್ ವಿಕೆಟ್ ಒಪ್ಪಿಸಿದರು.
ಈ ಸರಣಿಯಲ್ಲಿ ಒಂದು ಸೂಪರ್ ಓವರ್ ಪಂದ್ಯ ಸೇರಿದಂತೆ ಮೊದಲ 4 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡ ಗೆಲುವು ಸಾಧಿಸಿತ್ತು. 138 ರನ್ ಮತ್ತು 1 ವಿಕೆಟ್ ಪಡೆದಿದ್ದ ಆಲ್ರೌಂಡರ್ ಗ್ಲೇನ್ ಮ್ಯಾಕ್ಸ್ವೆಲ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.
ಇದನ್ನೂ ಓದಿ:ಇಂದು ವಿಂಡೀಸ್ ವಿರುದ್ಧ ಕೊನೆಯ ಟಿ20 ಪಂದ್ಯ : ಗಾಯಕ್ವಾಡ್-ಶ್ರೇಯಸ್ ಅಯ್ಯರ್ ಕಣಕ್ಕಿಳಿಯುವ ಸಾಧ್ಯತೆ