ಲಂಡನ್ (ಯುಕೆ): ಇಂಗ್ಲೆಂಡ್ ಪ್ರವಾಸದಲ್ಲಿರುವ ಶ್ರೀಲಂಕಾದ ವನಿತೆಯರ ತಂಡ ಆಂಗ್ಲರನ್ನು ಅವರ ನೆಲದಲ್ಲೇ ಮಣಿಸಿ ದಾಖಲೆ ಬರೆದಿದೆ. ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯವನ್ನು ಸಿಂಹಳದ ವನಿತೆಯರ ತಂಡ ಗೆದ್ದುಕೊಂಡಿತು. ಈ ಮೂಲಕ ಆಂಗ್ಲರ ವಿರುದ್ಧ ಟಿ20ಯ ಮೊದಲ ಜಯ ಇದಾಗಿದೆ. ಇದು 11ನೇ ಬಾರಿಯ ಇಂಗ್ಲೆಂಡ್ ಮತ್ತು ಲಂಕಾ ಮುಖಾಮಖಿಯಾಗಿದ್ದವು. ಇದರಲ್ಲಿ 40 ಬಾಲ್ ಉಳಿಸಿಕೊಂಡು ಜಯ ದಾಖಲಿಸಿದೆ. ಉಭಯ ತಂಡಗಳ ನಡುವೆ ನಡೆಯುತ್ತಿರುವ ಮೂರು ಪಂದ್ಯಗಳ ಸರಣಿ 1-1ರಲ್ಲಿ ಸಮಬಲ ಸಾಧಿಸಿವೆ.
ಲಂಕಾ ನಾಯಕಿ ಚಾಮರಿ ಅಥಾಪತ್ತು ಅವರ ಅರ್ಧ ಶತಕದ ಅದ್ಭುತ ಪ್ರದರ್ಶನ ಬಲದಿಂದ ಈ ಸಾಧನೆ ಮಾಡಿದೆ. ಚೆಲ್ಮ್ಸ್‌ಫೋರ್ಡ್ ಮೈದಾನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಲಂಕಾದ ಕಾರಾರುವಕ್ಕು ದಾಳಿಗೆ ಮಣಿಯಿತು. 18 ಓವರ್ಗೆ 104 ರನ್ ಗಳಿಸಿ ಸರ್ವಪತನ ಕಂಡಿತು. ಆಂಗ್ಲರ ಪರ ಷಾರ್ಲೆಟ್ ಡೀನ್ 34 ರನ್ ಗಳಿಸಿದ್ದು ಬಿಟ್ಟರೆ ಮಿಕ್ಕೆಲ್ಲ ಆಟಗಾರ್ತಿಯರು 15ಕ್ಕೂ ಹೆಚ್ಚು ರನ್ ಗಳಿಸುವಲ್ಲಿ ವಿಫಲರಾದರು.
105 ರನ್‌ಗಳ ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವನ್ನು ನಾಯಕ ಅಥಪತ್ತು ಮುನ್ನಡೆಸಿದರು. 31 ಬಾಲ್ಗಳನ್ನು ಎದುರಿಸಿದ ಅವರು 8 ಬೌಂಡರಿ ಮತ್ತು 2 ಸಿಕ್ಸ್ನಿಂದ 55 ರನ್ ಗಳಸಿದರು. ಒಂಬತ್ತನೇ ಓವರ್‌ನಲ್ಲಿ ಆಲಿಸ್ ಕ್ಯಾಪ್ಸೆ ಬೌಲ್ಗೆ ಕ್ಯಾಚ್ ಕೊಟ್ಟರು. ಈ ವೇಳೆ ಗೆಲುವಿನ ಸನಿಹದಲ್ಲಿತ್ತು. ಪ್ರತಿ ಓವರ್ಗೆ 3 ರನ್ ಗಳಿಸಿದರೂ ಗೆಲುವು ಸಾಧ್ಯವಿತ್ತು. ಅಲ್ಲದೇ ತಂಡ ಎರಡನೇ ವಿಕೆಟ್ನ ಪತನ ಇದಾಗಿತ್ತು. ಕೊನೆಯಲ್ಲಿ ಹರ್ಷಿತಾ ಸಮರವಿಕ್ರಮ (30) ಮತ್ತು ವಿಶ್ಮಿ ಗುಣರತ್ನೆ (18) ಅಜೇಯರಾಗಿ ಉಳಿದು, 40 ಬಾಲ್ ಬಾಕಿ ಇರುವಂತೆ 6 ವಿಕೆಟ್ಗಳಿಂದ ಗೆದ್ದುಕೊಂಡಿತು.
ಪಂದ್ಯದ ನಂತರ ಮಾತನಾಡಿದ ಲಂಕಾ ನಾಯಕಿ,"ನನ್ನ ತಂಡದ ಪ್ರದರ್ಶನದಿಂದ ನನಗೆ ತುಂಬಾ ಸಂತೋಷವಾಗಿದೆ. ಕಳೆದ ಆಟದಿಂದ ನಾವು ಬಹಳಷ್ಟು ವಿಷಯಗಳನ್ನು ಕಲಿತಿದ್ದೇವೆ. ಈ ಪಂದ್ಯದಲ್ಲಿ ಎಲ್ಲಾ ಸರಿಯಾದ ಯೋಜನೆಗಳನ್ನು ಕಾರ್ಯಗತಗೊಳಿಸಿದ್ದೇವೆ. ನಾಯಕಿಯಾಗಿ, ತಂಡವಾಗಿ, ಇದು ನಮಗೆ ದೊಡ್ಡ ವಿಷಯ. ಶ್ರೀಲಂಕಾದಲ್ಲಿ ಮಹಿಳಾ ಕ್ರಿಕೆಟ್‌ಗೆ ದೊಡ್ಡ ಗೆಲುವು" ಎಂದಿದ್ದಾರೆ. ಈ ಪಂದ್ಯದಲ್ಲಿ ನಾಯಕಿ ಚಾಮರಿ ಮೊದಲ ಇನ್ನಿಂಗ್ಸ್ನಲ್ಲಿ ಮೂರು ಓವರ್ ಬೌಲ್ ಮಾಡಿ ಕೇವಲ 11 ರನ್ ಕೊಟ್ಟು 1 ವಿಕೆಟ್ ಸಹ ಪಡೆದು ಆಲ್ರೌಂಡರ್ ಪ್ರದರ್ಶನ ನೀಡಿದರು.
ಇದನ್ನೂ ಓದಿ:Asia Cup 2023: ಪಾಕ್ನಲ್ಲಿ ಅಫ್ಘಾನ್ vs ಬಾಂಗ್ಲಾ ಫೈಟ್.. ಟಾಸ್ ಗೆದ್ದ ಶಕೀಬ್ ಬ್ಯಾಟಿಂಗ್ ಆಯ್ಕೆ