ಕರ್ನಾಟಕ

karnataka

ETV Bharat / sports

INDvsSL T20I: ಟಾಸ್​ ಗೆದ್ದ ಶ್ರೀಲಂಕಾ ಬೌಲಿಂಗ್ ಆಯ್ಕೆ, ದೀಪಕ್​ ಹೂಡ ಪದಾರ್ಪಣೆ, ಬುಮ್ರಾ-ಜಡ್ಡು ಕಮ್​ಬ್ಯಾಕ್ - ಭಾರತ-ಶ್ರೀಲಂಕಾ ಟಾಸ್ ವರದಿ

ಕಳೆದ ವಿಂಡೀಸ್ ಸರಣಿಯಿಂದ ಹೊರಗುಳಿದಿದ್ದ ಜಸ್ಪ್ರೀತ್ ಬುಮ್ರಾ ಮತ್ತು ಗಾಯದಿಂದ ಮೂರು ತಿಂಗಳ ಕಾಲ ಕ್ರಿಕೆಟ್​ನಿಂದ ದೂರವಿದ್ದ ರವೀಂದ್ರ ಜಡೇಜಾ ಮತ್ತೆ ತಂಡ ಸೇರಿಕೊಂಡಿದ್ದಾರೆ. ಸಂಜು ಸಾಮ್ಸನ್​ ದೀರ್ಘ ಸಮಯದ ನಂತರ ಭಾರತ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಇನ್ನು ವಿಂಡೀಸ್ ವಿರುದ್ಧ ಕೊನೆಯ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಭುವನೇಶ್ವರ್​, ಯುಜ್ವೇಂದ್ರ ಚಹಲ್​ ಇಂದು ಕಣಕ್ಕಿಳಿದಿದ್ದಾರೆ

INDvsSL T20I
INDvsSL T20I

By

Published : Feb 24, 2022, 6:56 PM IST

ಲಖನೌ: ಭಾರತ- ಶ್ರೀಲಂಕಾ ನಟುವಿನ 3 ಪಂದ್ಯಗಳ ಟಿ20 ಸರಣಿಯ ಪಂದ್ಯದಲ್ಲಿ ಟಾಸ್​ ಗೆದ್ದ ಲಂಕಾ ನಾಯಕ ದಸುನ್ ಶನಕ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.

ಭಾರತದ ಪರ ಆಲ್​ರೌಂಡರ್​ ದೀಪಕ್​ ಹೂಡ ಪದಾರ್ಪಣೆ ಮಾಡಿದ್ದಾರೆ. ರುತುರಾಜ್ ಗಾಯಕ್ವಾಡ್​ ಮಣಿಕಟ್ಟು ಗಾಯದ ಕಾರಣ ಕೊನೆಯ ಕ್ಷಣದಲ್ಲಿ ಪಂದ್ಯದಿಂದ ಹೊರಗುಳಿದಿದ್ದಾರೆ. ಇಂದಿನ ಪಂದ್ಯದಲ್ಲೂ ಕೂಡ ಇಶಾನ್ ಕಿಶನ್​ ನಾಯಕ ರೋಹಿತ್ ಶರ್ಮಾ ಜೊತೆಗೆ ಇನ್ನಿಂಗ್ಸ್​ ಆರಂಭಿಸಿದ್ದಾರೆ.

ಇನ್ನು ಕಳೆದ ವಿಂಡೀಸ್ ಸರಣಿಯಿಂದ ಹೊರಗುಳಿದಿದ್ದ ಜಸ್ಪ್ರೀತ್ ಬುಮ್ರಾ ಮತ್ತು ಗಾಯದಿಂದ ಮೂರು ತಿಂಗಳ ಕಾಲ ಕ್ರಿಕೆಟ್​ನಿಂದ ದೂರವಿದ್ದ ರವೀಂದ್ರ ಜಡೇಜಾ ಮತ್ತೆ ತಂಡ ಸೇರಿಕೊಂಡಿದ್ದಾರೆ. ಸಂಜು ಸಾಮ್ಸನ್​ ದೀರ್ಘ ಸಮಯದ ನಂತರ ಭಾರತ ತಂಡಕ್ಕೆ ಕಮ್​ಬ್ಯಾಕ್ ಮಾಡಿದ್ದಾರೆ. ಇನ್ನು ವಿಂಡೀಸ್ ವಿರುದ್ಧ ಕೊನೆಯ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಭುವನೇಶ್ವರ್​, ಯುಜ್ವೇಂದ್ರ ಚಹಲ್​ ಇಂದು ಕಣಕ್ಕಿಳಿದಿದ್ದಾರೆ.

ಇತ್ತ ಶ್ರೀಲಂಕಾ ತನ್ನ ಸ್ಟಾರ್ ಆಟಗಾರರಾದ ಕುಸಾಲ್ ಮೆಂಡಿಸ್​, ಯುವ ಸ್ಪಿನ್ನರ್ ತೀಕ್ಷಣ ಹಾಗೂ ವನಿಂಡು ಹಸರಂಗ ಇಲ್ಲದೆ ಕಣಕ್ಕಿಳಿಯುತ್ತಿದೆ.

ತಂಡಗಳು:

ಭಾರತ (ಆಡುವ XI): ರೋಹಿತ್ ಶರ್ಮಾ (ನಾಯಕ), ಇಶಾನ್ ಕಿಶನ್ (ವಿಕೀ), ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ರವೀಂದ್ರ ಜಡೇಜಾ, ವೆಂಕಟೇಶ್ ಅಯ್ಯರ್, ಹರ್ಷಲ್ ಪಟೇಲ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ, ಯುಜ್ವೇಂದ್ರ ಚಹಲ್

ಶ್ರೀಲಂಕಾ (ಪ್ಲೇಯಿಂಗ್ XI): ಪಾತುಮ್ ನಿಸ್ಸಾಂಕ, ಕಮಿಲ್ ಮಿಶ್ರಾ, ಚರಿತ್ ಅಸಲಂಕಾ, ದಿನೇಶ್ ಚಂಡಿಮಲ್ (ವಿಕೀ), ಜನಿತ್ ಲಿಯಾನಗೆ, ದಸುನ್ ಶನಕ (ನಾಯಕ), ಚಮಿಕಾ ಕರುಣಾರತ್ನೆ, ಜೆಫ್ರಿ ವಾಂಡರ್ಸೆ, ಪ್ರವೀಣ್ ಜಯವಿಕ್ರಮ, ದುಷ್ಮಂತ ಚಮೀರ, ಲಹಿರು ಕುಮಾರ

ಇದನ್ನೂ ಓದಿ:ವನಿತೆಯರ ಕ್ರಿಕೆಟ್​: ಮಂಧಾನಾ ಪಂದ್ಯಶ್ರೇಷ್ಠ ಆಟ, ನ್ಯೂಜಿಲೆಂಡ್‌ ವಿರುದ್ಧ ಕೊನೆಯ ಪಂದ್ಯ ಗೆದ್ದ ಭಾರತ

ABOUT THE AUTHOR

...view details