ಕೊಲಂಬೋ:ಆತಿಥೇಯ ಶ್ರೀಲಂಕಾ ವಿರುದ್ಧ ನಡೆದ ಕೊನೆಯ ಟಿ-20 ಪಂದ್ಯದಲ್ಲೂ ಪ್ರವಾಸಿ ದಕ್ಷಿಣ ಆಪ್ರಿಕಾ 10 ವಿಕೆಟ್ಗಳ ಗೆಲುವು ದಾಖಲು ಮಾಡಿದ್ದು, ಈ ಮೂಲಕ ಮೂರು ಪಂದ್ಯಗಳ ಚುಟುಕು ಕ್ರಿಕೆಟ್ನಲ್ಲಿ ಸರಣಿ ಕ್ಲೀನ್ ಸ್ವೀಪ್ ಸಾಧನೆ ಮಾಡಿದೆ.
ಶ್ರೀಲಂಕಾ ವಿರುದ್ಧ ಟಿ-20 ಸರಣಿ ಗೆದ್ದ ದಕ್ಷಿಣ ಆಫ್ರಿಕಾ ಆರ್.ಪ್ರೇಮದಾಸ್ ಮೈದಾನದಲ್ಲಿ ನಡೆದ ಫೈನಲ್ ಟಿ-20 ಪಂದ್ಯದಲ್ಲಿ ಮೊದಲು ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 120ರನ್ ಮಾತ್ರಗಳಿಸಲು ಶಕ್ತವಾಯಿತು. ತಂಡದ ಪರ ಆರಂಭಿಕ ಆಟಗಾರ ಪರೆರಾ 39 ರನ್ ಹಾಗೂ ಕರುಣರತ್ನೆ 24ರನ್ಗಳಿಕೆ ಮಾಡಿ ಅತಿ ಹೆಚ್ಚು ರನ್ಗಳಿಸಿರುವ ಆಟಗಾರರಾದರು. ಉಳಿದಂತೆ ಯಾವೊಬ್ಬ ಪ್ಲೇಯರ್ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಲಿಲ್ಲ.
ಆಫ್ರಿಕಾ ಪರ ಪೋರ್ಟೂನ್, ರಬಾಡಾ ತಲಾ 2ವಿಕೆಟ್ ಪಡೆದುಕೊಂಡರೆ, ಮಾರ್ಕ್ರಾಮ್, ಮುಲ್ಡರ್ ಹಾಗೂ ಕೇಶವ್ ಮಹಾರಾಜ್ ತಲಾ 1 ವಿಕೆಟ್ ಕಿತ್ತರು.
121ರನ್ಗಳ ಗುರಿ ಬೆನ್ನತ್ತಿದ್ದ ದ. ಆಫ್ರಿಕಾ ತಂಡ ವಿಕೆಟ್ನಷ್ಟವಿಲ್ಲದೇ 14.4 ಓವರ್ಗಳಲ್ಲಿ 121ರನ್ಗಳಿಕೆ ಮಾಡಿ ಗೆಲುವಿನ ಗುರಿ ಮಟ್ಟಿತ್ತು. ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಹೆಂಡ್ರಿಕ್ಸ್ ಅಜೇಯ 56 ರನ್ ಹಾಗೂ ವಿಕೆಟ್ ಕೀಪರ್ ಡಿಕಾಕ್ ಅಜೇಯ 59ರನ್ಗಳಿಕೆ ಮಾಡಿ, ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು. ಜೊತೆಗೆ ಮೂರು ಟಿ-20 ಪಂದ್ಯಗಳ ಸರಣಿಯಲ್ಲಿ 3-0 ಅಂತರದಿಂದ ಕ್ಲೀನ್ ಸ್ವೀಪ್ ಸಾಧನೆ ಮಾಡಿತು.
ಮೊದಲ ಟಿ-20 ಪಂದ್ಯದಲ್ಲಿ 28ರನ್ಗಳ ಗೆಲುವು ದಾಖಲು ಮಾಡಿದ್ದ ಪ್ರವಾಸಿ ತಂಡ ಎರಡನೇ ಪಂದ್ಯದಲ್ಲೂ 9 ವಿಕೆಟ್ಗಳ ಅಂತರದ ಜಯ ಸಾಧಿಸಿತು. ಇದೀಗ ಫೈನಲ್ ಪಂದ್ಯದಲ್ಲಿ 10 ವಿಕೆಟ್ಗಳ ಗೆಲುವು ಸಾಧಿಸಿದೆ. ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ವಿಂಟನ್ ಡಿಕಾಕ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಶ್ರೀಲಂಕಾ ವಿರುದ್ಧ ಟಿ-20ಯಲ್ಲಿ ದೊಡ್ಡ ಜೊತೆಯಾಟ
ದ. ಆಫ್ರಿಕಾ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ಹೆಂಡ್ರಿಕ್ಸ್ ಹಾಗೂ ಡಿಕಾಕ್ ಲಂಕಾ ವಿರುದ್ಧ ಹೊಸ ರೆಕಾರ್ಡ್ ಬರೆದರು. ದಕ್ಷಿಣ ಆಫ್ರಿಕಾ ಪರ ಇಲ್ಲಿಯವರೆಗೆ ಆರಂಭಿಕರಾಗಿ ಕಣಕ್ಕಿಳಿದು ಅತಿ ದೊಡ್ಡ ಜೊತೆಯಾಟ ನೀಡಿರುವ ಸಾಧನೆ ಮಾಡಿದರು. ಹೆಂಡ್ರಿಕ್ಸ್ ಅಜೇಯ 56ರನ್ ಹಾಗೂ ಡಿಕಾಕ್ ಅಜೇಯ 59ರನ್ಗಳೊಂದಿಗೆ 121ರನ್ ಗಳಿಸಿದರು. ಈ ಹಿಂದೆ ಆಫ್ರಿಕಾದ ಯಾವುದೇ ಜೋಡಿ ಇಷ್ಟೊಂದು ರನ್ಗಳಿಕೆ ಮಾಡಿಲ್ಲ.