ಕೊಲಂಬೊ(ಶ್ರೀಲಂಕಾ):ಮೊದಲ ಏಕದಿನ ಪಂದ್ಯದಲ್ಲಿ 14ರನ್ಗಳ ಗೆಲುವು ದಾಖಲಿಸುವ ಮೂಲಕ ಆತ್ಮವಿಶ್ವಾಸದಲ್ಲಿದ್ದ ಆತಿಥೇಯ ಶ್ರೀಲಂಕಾ ತಂಡಕ್ಕೆ ಹರಿಣಗಳ ತಂಡ ತಿರುಗೇಟು ನೀಡಿದೆ. ಎರಡನೇ ಪಂದ್ಯದಲ್ಲಿ ಭರ್ಜರಿ 67ರನ್ಗಳಿಂದ(ಡಕ್ವರ್ಥ್ ಲೂಯಿಸ್) ಗೆದ್ದು ಬೀಗಿದೆ. ಈ ಮೂಲಕ ಸರಣಿಯಲ್ಲಿ 1-1 ಅಂತರದ ಸಮಬಲ ಸಾಧಿಸಿದೆ.
ಆರ್.ಪ್ರೇಮದಾಸ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ ಆರಂಭಿಕ ಆಟಗಾರ ಮಲನ್ ಭರ್ಜರಿ 121ರನ್ಗಳ ನೆರವಿನಿಂದ 47ಓವರ್ಗಳಲ್ಲಿ 6ವಿಕೆಟ್ ನಷ್ಟಕ್ಕೆ ಸ್ಪರ್ಧಾತ್ಮಕ 283ರನ್ ಗಳಿಸಿತು. ತಂಡಕ್ಕೆ ಹೆಂಡ್ರಿಕ್ಸ್ 51, ಕೆಲ್ಸನ್ 43 ಹಾಗೂ ಮಾರ್ಕ್ರಮ್ 21ರನ್ಗಳ ಕಾಣಿಕೆ ನೀಡಿದರು.
284ರನ್ಗಳ ಗುರಿ ಬೆನ್ನತ್ತಿದ್ದ ಶ್ರೀಲಂಕಾ ತಂಡ ಆರಂಭದಲ್ಲೇ ಆಘಾತಕ್ಕೊಳಗಾಯಿತು. ಕಳೆದ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ್ದ ಫರ್ನಾಡೋ ಕೇವಲ 8ರನ್ ಗಳಿಸಿ ವಿಕೆಟ್ ಒಪ್ಪಿಸಿದರೆ, ಭಾನುಕ್ 7ರನ್ ಗಳಿಸಿದರು. ಉಳಿದಂತೆ ರಾಜಪಕ್ಸೆ ಸೊನ್ನೆ ಸುತ್ತಿದರು.