ಕರ್ನಾಟಕ

karnataka

ETV Bharat / sports

ಮಿಂಚಿದ ಲಂಕಾ ಸ್ಪಿನ್ನರ್ಸ್; 225 ರನ್​ಗಳಿಗೆ ಆಲೌಟ್​ ಆದ ಟೀಂ ಇಂಡಿಯಾ

ಲಂಕಾ ಸ್ಪಿನ್ನರ್ಸ್​ಗಳ ದಾಳಿಗೆ ದಿಢೀರ್ ಕುಸಿತ ಕಂಡ ಟೀಂ ಇಂಡಿಯಾ 43 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 225 ರನ್​ಗಳಿಕೆ ಮಾಡಿದೆ.

Sri Lanka vs India
Sri Lanka vs India

By

Published : Jul 23, 2021, 8:21 PM IST

ಕೊಲಂಬೊ:ಆರ್​​.ಪ್ರೇಮದಾಸ​ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಏಕದಿನ ಪಂದ್ಯದಲ್ಲಿ ಲಂಕಾ ಸ್ಪಿನ್ನರ್ಸ್​ ಮೇಲುಗೈ ಸಾಧಿಸಿದರು. ಹೀಗಾಗಿ, ಟೀಂ ಇಂಡಿಯಾ 43.1 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 225 ರನ್​ಗಳಿಕೆ ಮಾಡಿದೆ. ಡಕವರ್ತ್‌ ಲೂಯಿಸ್ ಪ್ರಕಾರ ಲಂಕಾ ತಂಡಕ್ಕೆ 227 ರನ್​ಗಳ ಗೆಲುವಿನ ಟಾರ್ಗೆಟ್ ನೀಡಲಾಗಿದೆ.

46ರನ್​ಗಳಿಸಿ ವಿಕೆಟ್ ಒಪ್ಪಿಸಿದ ಸ್ಯಾಮ್ಸನ್​

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಆರಂಭದಲ್ಲೇ ಕ್ಯಾಪ್ಟನ್​ ಶಿಖರ್​ ಧವನ್​(13) ವಿಕೆಟ್​ ಕಳೆದುಕೊಂಡಿತು. ಇದಾದ ಬಳಿಕ ಒಂದಾದ ಪೃಥ್ವಿ ಶಾ ಹಾಗೂ ಸಂಜು ಸ್ಯಾಮ್ಸನ್ ತಂಡಕ್ಕೆ ಭದ್ರ ಬುನಾದಿ ಹಾಕಿದರು. 80 ರನ್​ಗಳ ಜೊತೆಯಾಟವಾಡಿದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಶನಕ್​ ಯಶಸ್ವಿಯಾದರು. 49 ರನ್​ಗಳಿಕೆ ಮಾಡಿದ್ದ ಪೃಥ್ವಿ ಶಾ ಎಲ್​ಬಿ ಬಲೆಗೆ ಬಿದ್ದರು. ಇದರ ಬೆನ್ನಲ್ಲೇ ಸ್ಯಾಮ್ಸನ್​ ಕೂಡ 46ರನ್​ಗಳಿಸಿದ್ದಾಗ ಫರ್ನಾಡೋ ಓವರ್​ನಲ್ಲಿ ವಿಕೆಟ್​ ಒಪ್ಪಿಸಿದರು.

ಇದನ್ನೂ ಓದಿ: ಟೋಕಿಯೋ ಒಲಿಂಪಿಕ್ಸ್​​: ನಾಳೆ ಭಾರತದ ಸ್ಪರ್ಧಿಗಳಿಗೆ ಎದುರಾಗುವ ಸವಾಲೇನು? ಇಲ್ಲಿದೆ ಮಾಹಿತಿ..

ಇದಾದ ಬಳಿಕ ಮನೀಷ್ ಪಾಂಡೆ 11 ರನ್​ಗಳಿಕೆ ಮಾಡಿ ಕ್ಯಾಚ್ ನೀಡಿ ಮತ್ತೊಮ್ಮೆ ನಿರಾಸೆ ಅನುಭವಿಸಿದರು. ಆದರೆ ಸೂರ್ಯಕುಮಾರ್ ಯಾದವ್​ 40 ರನ್​ಗಳಿಕೆ ಮಾಡಿ ತಂಡಕ್ಕೆ ಆಸರೆಯಾದರು. ಆಲ್​ರೌಂಡರ್ ಹಾರ್ದಿಕ್ ಪಾಂಡ್ಯಾ 19ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ಕೊನೆಯದಾಗಿ ನಿತೀಶ್ ರಾಣಾ 7ರನ್​, ಕೆ. ಗೌತಮ್​ 2ರನ್, ಚಹಾರ್​ 13ರನ್​ ಸೈನಿ 15 ರನ್​ಗಳಿಕೆ ಮಾಡಿದರು.

ಲಂಕಾ ಪರ ಉತ್ತಮ ಬೌಲಿಂಗ್​ ಪ್ರದರ್ಶನ ನೀಡಿದ ಧನಂಜಯ ಹಾಗೂ ಜಯವಿಕ್ರಂ ತಲಾ 3ವಿಕೆಟ್ ಪಡೆದುಕೊಂಡರೆ, ಚಮೀರಾ ಎರಡು ಹಾಗೂ ಶನಕ್​ ಮತ್ತು ಕರುಣರತ್ನೆ ತಲಾ 1ವಿಕೆಟ್ ಪಡೆದು ಗಮನ ಸೆಳೆದರು.

ಪಂದ್ಯದ ಅರ್ಧದಲ್ಲಿ ಮಳೆ ಸುರಿದ ಕಾರಣ 47 ಓವರ್​ಗಳ ಆಟ ನಡೆಸಲು ನಿರ್ಧರಿಸಲಾಗಿದ್ದು, ಇದೀಗ ಲಂಕಾ ತಂಡಕ್ಕೆ 227ರನ್​ಗಳ ಗೆಲುವಿಗೆ ರನ್​ ಟಾರ್ಗೆಟ್ ನೀಡಲಾಗಿದೆ.

ABOUT THE AUTHOR

...view details