ಕೊಲಂಬೊ:ಭಾರತ-ಶ್ರೀಲಂಕಾ ನಡುವಿನ ಎರಡನೇ ಟಿ-20 ಪಂದ್ಯ ಆರಂಭಗೊಂಡಿದೆ. ಟಾಸ್ ಗೆದ್ದಿರುವ ಲಂಕಾ ಕ್ಯಾಪ್ಟನ್ ದಸುನ್ ಶನಕ ಬೌಲಿಂಗ್ ಆಯ್ದಕೊಂಡಿದ್ದಾರೆ. ಇಂದಿನ ಪಂದ್ಯ ಗೆಲ್ಲಲೇಬೇಕಾದ ಸ್ಥಿತಿಯಲ್ಲಿ ಲಂಕಾ ತಂಡವಿದೆ.
ಈಗಾಗಲೇ ಮೊದಲ ಟಿ-20 ಪಂದ್ಯದಲ್ಲಿ ಶಿಖರ್ ಧವನ್ ಪಡೆ 38 ರನ್ಗಳ ಗೆಲುವು ದಾಖಲಿಸಿ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಆರ್.ಪ್ರೇಮದಾಸ ಮೈದಾನದಲ್ಲಿ ಪಂದ್ಯ ನಡೆಯುತ್ತಿದೆ. ಕೊರೊನಾ ವೈರಸ್ ಕಾರಣ ಒಂದು ದಿನ ತಡವಾಗಿ ಪಂದ್ಯ ಆರಂಭಗೊಂಡಿದೆ. ಭಾರತ ತಂಡದಲ್ಲಿ ಕೊರೊನಾ ಹಾವಳಿ ಕಂಡು ಬಂದಿರುವ ಕಾರಣ ಪ್ರಮುಖ ಪ್ಲೇಯರ್ಸ್ ಮೈದಾನಕ್ಕಿಳಿಯುತ್ತಿಲ್ಲ. ಹೀಗಾಗಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ.
ನಾಲ್ವರು ಪದಾರ್ಪಣೆ: ಟೀಂ ಇಂಡಿಯಾ ಪರ ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ಗೆ ನಾಲ್ವರು ಪದಾರ್ಪಣೆ ಮಾಡಿದ್ದಾರೆ. ಕನ್ನಡಿಗ ದೇವದತ್ ಪಡಿಕ್ಕಲ್, ಋತುರಾಜ್ ಗಾಯ್ಕವಾಡ, ಚೇತನ್ ಸಕಾರಿಯಾ ಹಾಗೂ ನಿತೀಶ್ ರಾಣಾಗೆ ಅವಕಾಶ ನೀಡಲಾಗಿದೆ.