ಧರ್ಮಶಾಲಾ: ಪಾತುಮ್ ನಿಸ್ಸಾಂಕ ಅವರ ಅರ್ಧಶತಕದ(75) ಮತ್ತು ನಾಯಕ ದಸುನ್ ಶನಕ ಅವರ ಸ್ಫೋಟಕ 47 ರನ್ಗಳ ನೆರವಿನಿಂದ ಶ್ರೀಲಂಕಾ ತಂಡ ಭಾರತಕ್ಕೆ 184 ರನ್ಗಳ ಪ್ರಬಲ ಗುರಿ ನೀಡುವಲ್ಲಿ ಯಶಸ್ವಿಯಾಗಿದೆ.
ಟಾಸ್ ಗೆದ್ದ ಭಾರತ ಪ್ರವಾಸಿ ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿತು. ಸರಣಿ ಉಳಿಸಿಕೊಳ್ಳುವ ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟಿಂಗ್ ಮಾಡಿದ ಲಂಕಾ ಆರಂಭಿಕ ಜೋಡಿ ಮೊದಲ ವಿಕೆಟ್ಗೆ 67 ರನ್ಗಳ ಜೊತೆಯಾಟ ನೀಡಿತು.
ಈ ಜೋಡಿಯನ್ನು ರವೀಂದ್ರ ಜಡೇಜಾ ಬೇರ್ಪಡಿಸಿದರು. 29 ಎಸೆತಗಳಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ಗಳ ಸಹಿತ 38 ರನ್ಗಳಿಸಿದ್ದ ಗುಣತಿಲಕ ಜಡೇಜಾ ಬೌಲಿಂಗ್ನಲ್ಲಿ ವೆಂಕಟೇಶ್ಗೆ ಕ್ಯಾಚ್ ನೀಡಿದ ಔಟಾದರು. ನಂತರ ಬಂದಂತಹ ಕಳೆದ ಪಂದ್ಯದ ಅರ್ಧಶತಕ ವೀರ ಚರಿತ್ ಅಸಲಂಕಾ(2), ಕಮಿಲ್ ಮಿಶ್ರಾ(1) ಮತ್ತು ದಿನೇಶ್ ಚಂಡಿಮಲ್(9) ಒಬ್ಬರ ಹಿಂದೆ ಒಬ್ಬರು ಬಂದಷ್ಟೇ ವೇಗವಾಗಿ ವಾಪಾಸಾದರು.
ಶ್ರೀಲಂಕಾ 14.4 ಓವರ್ಗಳಲ್ಲಿ 102ಕ್ಕೆ 4 ವಿಕೆಟ್ ಕಳೆದುಕೊಂಡಿದ್ದ ಸಂದರ್ಭದಲ್ಲಿ ನಿಸ್ಸಾಂಕ ಜೊತೆಗೂಡಿದ ನಾಯಕ ಶನಕ 5ನೇ ವಿಕೆಟ್ ಜೊತೆಯಾಟದಲ್ಲಿ 26 ಎಸೆತಗಳಲ್ಲಿ 58 ರನ್ ಸೇರಿಸಿ ತಂಡ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು. ನಿಸ್ಸಾಂಕ 53 ಎಸೆತಗಳಲ್ಲಿ 11 ಬೌಂಡರಿ ಸಹಿತ 75 ರನ್ಗಳಿಸಿ 19ನೇ ಓವರ್ನಲ್ಲಿ ಭುವನೇಶ್ವರ್ ಕುಮಾರ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು.
ನಾಯಕ ಶನಕ ಹರ್ಷಲ್ ಪಟೇಲ್ ಎಸೆದ ಕೊನೆಯ ಓವರ್ನಲ್ಲಿ 23 ರನ್ ಸೇರಿದಂತೆ 19 ಎಸೆತಗಳಲ್ಲಿ 2 ಬೌಂಡಿ 5 ಸಿಕ್ಸರ್ ಸಹಿತ ಅಜೇಯ 47 ರನ್ಗಳಿಸಿ 184 ರನ್ಗಳ ಸ್ಪರ್ಧಾತ್ಮಕ ಗುರಿ ನೀಡಲು ನೆರವಾದರು.
ಭಾರತದ ಪರ ಭುವನೇಶ್ವರ್ ಕುಮಾರ್ 36ಕ್ಕೆ1, ಜಸ್ಪ್ರೀತ್ ಬುಮ್ರಾ 24ಕ್ಕೆ1, ಹರ್ಷಲ್ ಪಟೇಲ್ 52ಕ್ಕೆ 1, ಯುಜ್ವೇಂದ್ರ ಚಹಲ್ 27ಕ್ಕೆ1, ರವೀಂದ್ರ ಜಡೇಜಾ 37ಕ್ಕೆ 1 ವಿಕೆಟ್ ಪಡೆದರು.
ಇದನ್ನೂ ಓದಿ:ಯುವ ಆಟಗಾರ್ತಿಯರು ತಮ್ಮ ಸಾಮರ್ಥ್ಯ ಸಾಬೀತು ಮಾಡಿದ್ದಾರೆ, ವಿಶ್ವಕಪ್ನಲ್ಲಿ ಅವರ ಸ್ಥಾನದ ಬಗ್ಗೆ ಖಚಿತತೆ ಇದೆ:ಮಿಥಾಲಿ ರಾಜ್