ದುಬೈ(ಯುಎಇ):2018ರಲ್ಲಿ ನಡೆದ ನಿದಾಸ್ ಕ್ರಿಕೆಟ್ ಟ್ರೋಫಿಯ ಅಂತಿಮ ಲೀಗ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಶ್ರೀಲಂಕಾ ಸೋಲು ಕಂಡಿತ್ತು. ಈ ಸಂದರ್ಭದಲ್ಲಿ ಗೆಲುವಿನ ಅತಿರೇಕದಲ್ಲಿ ಬಾಂಗ್ಲಾ ತಂಡದ ಆಟಗಾರರು ನಾಗಿಣಿ ಡ್ಯಾನ್ಸ್ ಮೂಲಕ ಸಿಂಹಳೀಯರನ್ನು ಅವಮಾನಿಸುವ ರೀತಿಯಲ್ಲಿ ಸಂಭ್ರಮಿಸಿದ್ದರು. ಇದೀಗ ಅದಕ್ಕೆ ಸೇಡು ತೀರಿಸಿಕೊಳ್ಳುವಲ್ಲಿ ಲಂಕಾ ಕ್ರಿಕೆಟಿಗರು ಯಶಸ್ವಿಯಾಗಿದ್ದಾರೆ.
ದುಬೈ ಅಂತಾರಾಷ್ಟ್ರೀಯ ಮೈದಾನದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಶ್ರೀಲಂಕಾ 2 ವಿಕೆಟ್ಗಳ ರೋಚಕ ಗೆಲುವು ಕಂಡಿತು. ವಿಜಯ ಸಾಧಿಸುತ್ತಿದ್ದಂತೆ ಸಂಭ್ರಮಿಸಿ ಲಂಕನ್ನರು ನಾಗಿಣಿ ಡ್ಯಾನ್ಸ್ ಮಾಡಿ ಪ್ರತೀಕಾರ ತೀರಿಸಿದರು.