ಕೊಲಂಬೋ: ಮುಂದಿನ ತಿಂಗಳಿನಿಂದ ಆರಂಭವಾಗಲಿರುವ ಟಿ-20 ವಿಶ್ವಕಪ್‌ಗಾಗಿ ಶ್ರೀಲಂಕಾ ಕ್ರಿಕೆಟ್ ಬಲಿಷ್ಠ ತಂಡ ಪ್ರಕಟಿಸಿದೆ. ಶ್ರೀಲಂಕಾ ಕ್ರಿಕೆಟ್ ಬೋರ್ಡ್ ಇಂದು 15 ಆಟಗಾರರ ತಂಡ ಪ್ರಕಟಿಸಿದ್ದು, ಇದರ ಜೊತೆಗೆ 4 ಮೀಸಲು ಆಟಗಾರರನ್ನು ಆಯ್ಕೆ ಮಾಡಿದೆ.
ದಸುನ್ ಶನಕಗೆ ತಂಡದ ನಾಯಕನ ಪಟ್ಟ ನೀಡಿದೆ. ಆರು ಬ್ಯಾಟ್ಸ್‌ಮನ್‌ಗಳು, ಐದು ಆಲ್ರೌಂಡರ್‌ಗಳು ಮತ್ತು ನಾಲ್ಕು ಬೌಲರ್‌ಗಳನ್ನು ತಂಡ ಹೊಂದಿದೆ.
ಟಿ-20 ವಿಶ್ವಕಪ್‌ಗೆ ಶ್ರೀಲಂಕಾದ 15 ಆಟಗಾರರ ತಂಡ:
ದಾಸುನ್ ಶನಕ (ನಾಯಕ), ಧನಂಜಯ ಡಿ ಸಿಲ್ವಾ, ಕುಸಾಲ್ ಪೆರೇರಾ, ದಿನೇಶ್ ಚಂಡಿಮಾಲ್, ಅವಿಷ್ಕಾ ಫೆರ್ನಾಂಡೊ, ಭಾನುಕಾ ರಾಜಪಕ್ಸೆ, ಚರಿತ್ ಅಸಲಂಕ, ಹಸರಂಗ, ಕಮಿಂಡು ಮೆಂಡಿಸ್, ಚಮಿಕ ಕರುಣರತ್ನೆ, ನುವಾನ್ ಪ್ರದೀಪ್, ದುಷ್ಮಂತ ಚಮೀರ, ಪ್ರವೀಣ್ ಜಯವಿಕ್ರಮ, ಲಹಿರು ಮಧುಶಂಕ.
ಮೀಸಲು ಆಟಗಾರರು: ಲಹಿರು ಕುಮಾರ, ಬಿನೂರ ಫೆರ್ನಾಂಡೊ, ಅಕಿಲ ದನಂಜಯ, ಪುಲಿನ ತರಂಗ.
ಇದನ್ನೂ ಓದಿ : 18 ವರ್ಷಗಳ ಬಳಿಕ ಪಾಕ್ಗೆ ಬಂದ ನ್ಯೂಜಿಲ್ಯಾಂಡ್ ತಂಡ.. ಏಕದಿನ, ಟಿ-20 ಸರಣಿಯಲ್ಲಿ ಭಾಗಿ..