ಕೊಲಂಬೊ: ಶ್ರೀಲಂಕಾ ಕ್ರಿಕೆಟ್ ತಂಡ (ಎಸ್ಎಲ್ಸಿ)ದ ಆಟಗಾರರಾದ ನಿರೋಶನ್ ಡಿಕ್ವೆಲ್ಲಾ ಮತ್ತು ಕುಸಲ್ ಮೆಂಡಿಸ್ ವಿರುದ್ಧ ಬಯೋಬಬಲ್ನ ಉಲ್ಲಂಘನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು, ತನಿಖೆ ನಡೆಲಾಗುತ್ತಿದೆ.
ಬಯೋಬಬಲ್ ನಿಯಮ ಉಲ್ಲಂಘಿಸಿದ ಶ್ರೀಲಂಕಾ ಆಟಗಾರರು!
ಅಂತಿಮ ಟಿ - 20 ಅಂತಾರಾಷ್ಟ್ರೀಯ ಪಂದ್ಯದ ಬಳಿಕ ನಿರೋಶನ್ ಡಿಕ್ವೆಲ್ಲಾ ಮತ್ತು ಕುಸಲ್ ಮೆಂಡಿಸ್ ಡರ್ಹಾಮ್ನ ಬೀದಿಗಳಲ್ಲಿ ಓಡಾಡುತ್ತಿದ್ದರು ಎನ್ನಲಾಗಿದೆ. ಈ ಮೂಲಕ ಬಯೋಬಬಲ್ ನೀತಿ ಉಲ್ಲಂಘನೆ ಮಾಡಿದ್ದಾರೆ ಎಂಬ ಕೇಳಿ ಬಂದಿದ್ದು, ತನಿಖೆ ನಡೆಲಾಗುತ್ತಿದೆ.
ಕಳೆದ ರಾತ್ರಿ ನಡೆದ ಅಂತಿಮ ಟಿ -20 ಅಂತಾರಾಷ್ಟ್ರೀಯ ಪಂದ್ಯದ ಬಳಿಕ ಇವರಿಬ್ಬರು ಡರ್ಹಾಮ್ನ ಬೀದಿಗಳಲ್ಲಿ ಓಡಾಡುತ್ತಿದ್ದರು ಎನ್ನಲಾಗಿದೆ. ಇನ್ನು ಶ್ರೀಲಂಕಾವು 89 ರನ್ಗಳಿಂದ ಭಾರಿ ಸೋಲು ಅನುಭವಿಸಿದ್ದು ,ಎರಡೂ ಆಟಗಾರರು ಪಂದ್ಯದ ಇಲೆವೆನ್ನ ಭಾಗವಾಗಿದ್ದರು ಎನ್ನಲಾಗಿದೆ. ರಾತ್ರಿಯಲ್ಲಿ ಹೊರಗೆ ಹೋಗುವ ಮೂಲಕ ಅವರು ಬಯೋಬಬಲ್ ನೀತಿ ಉಲ್ಲಂಘಿಸಿದ್ದಾರೆಯೇ ಎಂದು ಎಸ್ಎಲ್ಸಿ ತನಿಖೆ ನಡೆಸಲಿದೆ.
ಶ್ರೀಲಂಕಾದ ಅಭಿಮಾನಿಯೊಬ್ಬರು ಪೋಸ್ಟ್ ಮಾಡಿದ ವಿಡಿಯೋಗೆ ಪ್ರತಿಕ್ರಿಯಿಸಿದ ಎಸ್ಎಲ್ಸಿ ಮುಖ್ಯಸ್ಥ ಶಮ್ಮಿ ಸಿಲ್ವಾ, "ಅವರು ನೀತಿ ಸಂಹಿತೆ ಉಲ್ಲಂಘಿಸಿರುವುದರಿಂದ ತನಿಖೆ ನಡೆಯುತ್ತಿದೆ" ಎಂದು ಹೇಳಿದರು. ಭಾನುವಾರ ಕೊನೆಗೊಂಡ ಟಿ 20 ಸರಣಿಯಲ್ಲಿ ಶ್ರೀಲಂಕಾ 0-3ರಿಂದ ಹಿನ್ನಡೆ ಕಂಡಿದೆ.