ಕರ್ನಾಟಕ

karnataka

ETV Bharat / sports

SL vs IND: ಸರಣಿ ಆಯೋಜನೆಯಿಂದ ಶ್ರೀಲಂಕಾಗೆ 89.7 ಕೋಟಿ ರೂ. ಆದಾಯ - ಭಾರತ-ಶ್ರೀಲಂಕಾ ಸರಣಿ

ಮುಂದಿನ ವಾರದಿಂದ ಭಾರತ-ಶ್ರೀಲಂಕಾ ನಡುವಿನ ಕ್ರಿಕೆಟ್​ ಸರಣಿ ಆರಂಭಗೊಳ್ಳಲಿದೆ. ಈ ಟೂರ್ನಿ ಆಯೋಜನೆ ಮಾಡಿರುವ ಶ್ರೀಲಂಕಾ ಕ್ರಿಕೆಟ್​ ಬೋರ್ಡ್​ಗೆ 89.7 ಕೋಟಿ ರೂ. ಆದಾಯ ಬರಲಿದೆ ಎಂದು ತಿಳಿದು ಬಂದಿದೆ.

Team india
Team india

By

Published : Jul 8, 2021, 5:10 PM IST

ಕೊಲಂಬೊ(ಶ್ರೀಲಂಕಾ):ಭಾರತ ಹಾಗೂ ಆತಿಥೇಯ ಶ್ರೀಲಂಕಾ ನಡುವೆ ಜುಲೈ 13ರಿಂದ ನಿಗದಿತ ಓವರ್​ಗಳ ಕ್ರಿಕೆಟ್​ ಸರಣಿ ಆರಂಭಗೊಳ್ಳಲಿದೆ. ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳ ಕ್ರಿಕೆಟ್​ ಸರಣಿಯಲ್ಲಿ ಉಭಯ ತಂಡಗಳು ಭಾಗಿಯಾಗಲಿವೆ.

ಶ್ರೀಲಂಕಾದಲ್ಲಿ ಈ ಕ್ರಿಕೆಟ್​ ಸರಣಿ ಆಯೋಜನೆಗೊಂಡಿರುವ ಕಾರಣ ಅಲ್ಲಿನ ಕ್ರಿಕೆಟ್ ಮಂಡಳಿ 89.7 ಕೋಟಿ ರೂ. ಹಣ (12 ಮಿಲಿಯನ್​ ಡಾಲರ್​) ಗಳಿಕೆ ಮಾಡಲಿದೆ ಎಂದು ತಿಳಿದು ಬಂದಿದೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಲಂಕಾ ಕ್ರಿಕೆಟ್​ ಬೋರ್ಡ್​ನ ಅಧ್ಯಕ್ಷ ಶಾಮಿ ಸಿಲ್ವಾ ಮಾತನಾಡಿದ್ದು, ನಾವು ಮೂರು ಕ್ರಿಕೆಟ್​ ಪಂದ್ಯಗಳ ಸರಣಿಗೆ ಯೋಜನೆ ರೂಪಿಸಿದ್ದೆವು. ಆದರೆ ಬಿಸಿಸಿಐ ಆರು ಪಂದ್ಯಗಳಿಗೆ ಒಪ್ಪಿಗೆ ಸೂಚಿಸಿದ್ದು, ಇದರಿಂದ ನಮಗೆ ಹೆಚ್ಚುವರಿಯಾಗಿ 6 ಮಿಲಿಯನ್​ ಡಾಲರ್​​ ಆದಾಯ ಬರಲಿದೆ ಎಂದಿದ್ದಾರೆ.

ಶ್ರೀಲಂಕಾ ಕ್ರಿಕೆಟರ್ಸ್​​​

ಕಳೆದ ಕೆಲ ವರ್ಷಗಳಿಂದ ಶ್ರೀಲಂಕಾ ಕ್ರಿಕೆಟ್ ಮಂಡಳಿ ಹೆಚ್ಚಿನ ಸಮಸ್ಯೆಗೊಳಗಾಗಿರುವ ಕಾರಣ ಆರ್ಥಿಕ ಸಂಕಷ್ಟಕ್ಕೊಳಗಾಗಿದೆ. ಹೀಗಾಗಿ ಅಲ್ಲಿನ ಗುತ್ತಿಗೆ ಒಪ್ಪಂದ ಒಪ್ಪಿಕೊಳ್ಳಲು ಕ್ರಿಕೆಟರ್ಸ್ ಕೂಡ​ ಹಿಂದೇಟು ಹಾಕುತ್ತಿದ್ದಾರೆ. ಇದೇ ಕಾರಣದಿಂದಾಗಿ ಲಂಕಾ ಕ್ರಿಕೆಟ್​ ತಂಡದ ಅನುಭವಿ ಆಲ್​ರೌಂಡರ್​ ಎಂಜಲೋ ಮ್ಯಾಥ್ಯೂಸ್​​ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂಬ ಮಾತು ಸಹ ಕೇಳಿ ಬರಲು ಶುರುವಾಗಿದೆ. ಸದ್ಯ ಟೀಂ ಇಂಡಿಯಾ ಜೊತೆಗಿನ ಕ್ರಿಕೆಟ್​ ಸರಣಿಯಿಂದ ಸ್ವಲ್ಪ ಮಟ್ಟದ ಆದಾಯ ಗಳಿಕೆ ಮಾಡಲು ಲಂಕಾ ಬೋರ್ಡ್​ ಮುಂದಾಗಿದೆ.

ಭಾರತ-ಶ್ರೀಲಂಕಾ ನಡುವೆ ಜುಲೈ 13ರಿಂದ ಮೂರು ಏಕದಿನ ಹಾಗೂ ಮೂರು ಟಿ-20 ಪಂದ್ಯಗಳ ಸರಣಿ ಆಯೋಜನೆಗೊಂಡಿದೆ.

ಇದನ್ನೂ ಓದಿರಿ: ನೆಲದ ಕಾನೂನನ್ನು ಪ್ರತಿಯೊಬ್ಬರೂ ಪಾಲಿಸಬೇಕು: ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ Twitterಗೆ ಐಟಿ ಸಚಿವರ ಎಚ್ಚರಿಕೆ

ABOUT THE AUTHOR

...view details