ಪಲ್ಲೆಕೆಲೆ : ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಪ್ರಾಬಲ್ಯ ಸಾಧಿಸಿದ ಶ್ರೀಲಂಕಾ ತಂಡ 2ನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ 207ರನ್ಗಳ ಅಂತರದಿಂದ ಜಯ ಸಾಧಿಸಿ 2 ಪಂದ್ಯಗಳ ಸರಣಿಯನ್ನು 1-0 ರಲ್ಲಿ ವಶಪಡಿಸಿಕೊಂಡಿದೆ.
ಆತಿಥೇಯ ಶ್ರೀಲಂಕಾ ತಂಡ ನೀಡಿದ್ದ 437 ರನ್ಗಳ ಬೃಹತ್ ಮೊತ್ತವನ್ನು ಹಿಂಬಾಲಿಸಿದ ಬಾಂಗ್ಲಾ ತಂಡ 227ರನ್ಗಳಿಗೆ ಆಲೌಟ್ ಆಗುವ ಮೂಲಕ ಸೋಲುಂಡಿತು.
4ನೇ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡಿದ್ದು, 177 ರನ್ಗಳಿಸಿದ್ದ ಬಾಂಗ್ಲಾ ಇಂದು ಆ ಮೊತ್ತಕ್ಕೆ ಕೇವಲ 50 ರನ್ಗಳನ್ನಷ್ಟೇ ಸೇರಿಸಲು ಶಕ್ತವಾಯಿತು. ಭಾನುವಾರ ಅಜೇಯರಾಗುಳಿದಿದ್ದ ಲಿಟನ್ ದಾಸ್ 17 ರನ್ಗಳಿಸಿ ವಿಕೆಟ್ ಒಪ್ಪಿಸಿದರೆ, ಮೆಹಿದಿ ಹಸನ್ 39 ರನ್ಗಳಿಸಿ ಸೋಲನ್ನು ಸ್ವಲ್ಪ ಸಮಯ ಮುಂದಕ್ಕೂಡಿದರು.
ಬಾಲಂಗೋಚಿಗಳಾದ ತಾಜಿವುಲ್ ಇಸ್ಲಾಮ್ 2, ತಸ್ಕಿನ್ ಅಹ್ಮದ್ 7, ತಸ್ಕಿನ್ ಅಹ್ಮದ್ 7 ರನ್ಗಳಿಸಿ ಔಟಾದರು. ಭಾನುವಾರ ತಮೀಮ್ ಇಕ್ಬಾಲ್ 24, ಸೈಫ್ ಹಸನ್ 34, ನಜ್ಮುಲ್ ಹುಸೇನ್ 26, ಮೊಮಿನುಲ್ ಹಕ್ 32, ರಹೀಮ್ 40 ರನ್ಗಳಿಸಿ ವಿಕೆಟ್ ಒಪ್ಪಿಸಿದ್ದರು.
ಮೊದಲ ಇನ್ನಿಂಗ್ಸ್ನಲ್ಲಿ493 ರನ್ಗಳಿಸಿದರೆ, ಇದಕ್ಕುತ್ತರವಾಗಿ ಬಾಂಗ್ಲಾದೇಶ 251 ರನ್ಗಳಿಸಿತ್ತು. 242 ರನ್ಗಳ ಮುನ್ನಡೆಯೊಂದಿಗೆ ಲಂಕಾ 2ನೇ ಇನ್ನಿಂಗ್ಸ್ನಲ್ಲಿ 194 ರನ್ಗಳಿಗೆ ಡಿಕ್ಲೇರ್ ಘೋಷಿಸಿ 437 ರನ್ಗಳ ಬೃಹತ್ ಟಾರ್ಗೆಟ್ ನೀಡಿತ್ತು.
ಶ್ರೀಲಂಕಾ ಪರ ಪದಾರ್ಪಣೆ ಬೌಲರ್ ಪ್ರವೀಣ್ ಜಯವಿಕ್ರಮ 11 ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ನಾಯಕ ದಿಮುತ್ ಕರುಣರತ್ನೆ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಇದನ್ನು ಓದಿ:ಐಸಿಸಿ ಏಕದಿನ ರ‍್ಯಾಂಕಿಂಗ್ : ಆಂಗ್ಲರನ್ನ ಹಿಂದಿಕ್ಕಿದ ಕಿವೀಸ್‌ಗೆ ಅಗ್ರಸ್ಥಾನ, ಭಾರತಕ್ಕೆ 3ನೇ ಪ್ಲೇಸ್