ಕರ್ನಾಟಕ

karnataka

ETV Bharat / sports

ಭಾರತದ ವಿರುದ್ಧ ಟಿ-20 ಸರಣಿಗೆ 18 ಸದಸ್ಯರ ತಂಡ ಪ್ರಕಟಿಸಿದ ಶ್ರೀಲಂಕಾ - ದಸುನ್ ಶನಕ ಶ್ರೀಲಂಕಾ ತಂಡದ ನಾಯಕ

ಆಸೀಸ್​ ಪ್ರವಾಸದಲ್ಲಿ ಕೋವಿಡ್​ಗೆ ಒಳಗಾಗಿದ್ದ ವನಿಡು ಹಸರಂಗ ಮತ್ತು ಬಿನುರಾ ಫರ್ನಾಂಡೊ ತಂಡಕ್ಕೆ ವಾಪಸ್​ ಆದರೆ, ಗಾಯಗೊಂಡಿರುವ ಅವಿಶ್ಕಾ ಫರ್ನಾಂಡೊ , ನುವಾನ್ ತುಷಾರ ಮತ್ತು ರಮೇಶ್ ಮೆಂಡಿಸ್ ಸರಣಿಯಿಂದ ಹೊರ ಬಿದ್ದಿದ್ದಾರೆ.

Sri Lanka announce 18 members squad for T20I series vs India
ಭಾರತ ವಿರುದ್ಧ ಟಿ20 ಸರಣಿಗೆ 18 ಸದಸ್ಯರ ತಂಡ ಪ್ರಕಟಿಸಿದ ಶ್ರೀಲಂಕಾ

By

Published : Feb 21, 2022, 3:30 PM IST

ಮುಂಬೈ: ಇದೇ ತಿಂಗಳು ಭಾರತ ಪ್ರವಾಸ ಕೈಗೊಳ್ಳಲಿರುವ ಶ್ರೀಲಂಕಾ ತಂಡ ಟಿ-20 ಸರಣಿಗಾಗಿ 18 ಸದಸ್ಯರ ತಂಡವನ್ನು ಘೋಷಿಸಿದೆ. ದಸುನ್ ಶನಕ ತಂಡವನ್ನು ಮುನ್ನಡೆಸಿದರೆ, ಚರಿತ್ ಅಸಲಂಕಾ ಉಪನಾಯಕನಾಗಿ ಆಯ್ಕೆಯಾಗಿದ್ದಾರೆ.

ಶ್ರೀಲಂಕಾ ಭಾನುವಾರ ಮುಗಿದ ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಸರಣಿಯನ್ನು 4-1ರಲ್ಲಿ ಕಳೆದುಕೊಂಡಿತ್ತು. ಆದರೆ, ಕೊನೆಯ ಪಂದ್ಯವನ್ನು ಗೆಲ್ಲುವ ಮೂಲಕ ವೈಟ್​ವಾಶ್​ ಮುಖಭಂಗವನ್ನು ತಪ್ಪಿಸಿಕೊಂಡಿರುವ ಸಿಂಹಳೀಯರು ಭಾರತದ ವಿರುದ್ಧ ಗೆಲುವಿನ ಆರಂಭ ನಿರೀಕ್ಷಿಸುತ್ತಿದ್ದಾರೆ.

ಆಸೀಸ್​ ಪ್ರವಾಸದಲ್ಲಿ ಕೋವಿಡ್​ಗೆ ಒಳಗಾಗಿದ್ದ ವನಿಡು ಹಸರಂಗ ಮತ್ತು ಬಿನುರಾ ಫರ್ನಾಂಡೊ ತಂಡಕ್ಕೆ ವಾಪಸ್​ ಆದರೆ, ಗಾಯಗೊಂಡಿರುವ ಅವಿಶ್ಕಾ ಫರ್ನಾಂಡೊ , ನುವಾನ್ ತುಷಾರ ಮತ್ತು ರಮೇಶ್ ಮೆಂಡಿಸ್ ಸರಣಿಯಿಂದ ಹೊರ ಬಿದ್ದಿದ್ದಾರೆ.

ಮುಖಾಮುಖಿ:2007ರಿಂದ ಭಾರತ ಮತ್ತು ಶ್ರೀಲಂಕಾ ಒಟ್ಟು 8 ಸರಣಿಗಳನ್ನಾಡಿದ್ದು, ಇದರಲ್ಲಿ ಭಾರತ 6 ಮತ್ತು ಶ್ರೀಲಂಕಾ 1 ರಲ್ಲಿ ಮಾತ್ರ ಜಯ ಸಾಧಿಸಿದೆ. ಒಂದು ಸರಣಿ ಡ್ರಾಗೊಂಡಿದೆ.

ಕಳೆದ ವರ್ಷ ಭಾರತ ಬಿ ತಂಡ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದಾಗ 2-1ರಲ್ಲಿ ಭಾರತ ಸರಣಿ ಸೋತಿತ್ತು. ಒಟ್ಟಾರೆ 22 ಪಂದ್ಯಗಳಲ್ಲಿ ಎರಡೂ ತಂಡಗಳು ಮುಖಾಮುಖಿಯಾಗಿದ್ದು, ಭಾರತ 14 , ಶ್ರೀಲಂಕಾ 7ರಲ್ಲಿ ಜಯ ಸಾಧಿಸಿದೆ. ಒಂದು ಪಂದ್ಯ ರದ್ದಾಗಿದೆ.

ಶ್ರೀಲಂಕಾ ತಂಡ:ದಸುನ್ ಶನಕ(ನಾಯಕ_. ಪತುನ್​ ನಿಸ್ಸಾಂಕ, ಕುಸಾಲ್ ಮೆಂಡಿಸ್, ಚರಿತ್​ ಅಸಲಂಕ (ಉಪನಾಯಕ), ದಿನೇಶ್ ಚಂಡಿಮಲ್, ದನುಷ್ಕ ಗುಣತಿಲಕ, ಕಮಿಲ್ ಮಿಶ್ರಾ, ಜನಿತ್ ಲಿಯಾನಗೆ, ವನಿಂಡು ಹಸರಂಗ, ಚಮಿಕ ಕರುಣಾರತ್ನ, ದುಷ್ಮಂತ ಚಮೀರ, ಲಹಿರು ಕುಮಾರ, ಬಿನುರ ಫೆರ್ನಾಂಡೋ, ಶಿರಾನ್ ಫೆರ್ನಾಂಡೋ, ಮಹೀಶ್ ತೀಕ್ಷಣ, ಜೆಫ್ಫೆರಿ ವಂಡರ್ಸೆ, ಪ್ರವೀಣ್​ ಜಯವಿಕ್ರಮ, ಅಶಿಯನ್ ಡೇನಿಯಲ್

ಇದನ್ನೂ ಓದಿ:ಐಸಿಸಿ ಟಿ-20 ರ್ಯಾಕಿಂಗ್​ ಪಟ್ಟಿ: 6 ವರ್ಷಗಳ ಬಳಿಕ ಭಾರತಕ್ಕೆ ನಂ.1 ಸ್ಥಾನ

ABOUT THE AUTHOR

...view details