ದುಬೈ: ಟಿ20 ವಿಶ್ವಕಪ್ ಆರಂಭಕ್ಕೆ ಕೇವಲ 5 ದಿನ ಬಾಕಿ ಉಳಿದಿವೆ. ಈಗಾಗಲೇ ಬಹುಪಾಲು ತಂಡಗಳು ಟಿ20 ವಿಶ್ವಕಪ್ಗೆ ತಂಡವನ್ನು ಖಚಿತಪಡಿಸಿವೆ. ಅಕ್ಟೋಬರ್ 17ರಿಂದ ಆರಂಭವಾಗಲಿರುವ ಕ್ರಿಕೆಟ್ ಹಬ್ಬಕ್ಕೆ ಕೆಲವು ರಾಷ್ಟ್ರಗಳು ತಮ್ಮ ವಿನೂತನ ಜರ್ಸಿಯನ್ನು ಬಿಡುಗಡೆಗೊಳಿಸುತ್ತಿವೆ.
ಸ್ಕಾಟ್ಲೆಂಡ್ :ವಿಶ್ವಕಪ್ ಕ್ವಾಲಿಫೈಯರ್ನಲ್ಲಿ ಆಡಲು ಅರ್ಹತೆ ಪಡೆದಿರುವ ಸ್ಕಾಟ್ಲೆಂಡ್ ಯುಎಇ ಮತ್ತು ಒಮಾನ್ನಲ್ಲಿ ನಡೆಯಲಿರುವ ಚುಟುಕು ಮಹಾ ಸಮರದಲ್ಲಿ ನೇರಳೆ ಬಣ್ಣದ ಜರ್ಸಿ ಮತ್ತು ಹೆಲ್ಮೆಟ್ ಧರಿಸಲಿದೆ.
ಶ್ರೀಲಂಕಾ :ಸೂಪರ್ 12ಗೆ ನೇರ ಅರ್ಹತೆಗಿಟ್ಟಿಸಿಕೊಳ್ಳಲು ವಿಫಲರಾಗಿರುವ 2014ರ ವಿಶ್ವ ಚಾಂಪಿಯನ್ ಶ್ರೀಲಂಕಾ ಈ ಬಾರಿ ಎರಡು ಕಿಟ್ಗಳನ್ನು ಬಿಡುಗಡೆ ಮಾಡಿದೆ. ಬಲ ಭಾಗದಲ್ಲಿ ಸಿಂಹದ ಚಿತ್ರವಿರುವ ಹಳದಿ ಮತ್ತು ನೀಲಿ ಸಂಖ್ಯೆ ಇರುವ ಒಂದು ಜರ್ಸಿ ಮತ್ತು ವಿಭಿನ್ನ ವಿನ್ಯಾಸದ ನೀಲಿ ಬಣ್ಣದ ಮತ್ತೊಂದು ಕಿಟ್ ಬಿಡುಗಡೆ ಮಾಡಿದೆ.