ಕೊಲಂಬೋ(ಶ್ರೀಲಂಕಾ) :ಮುಂದಿನ ತಿಂಗಳಿಂದ ದುಬೈನಲ್ಲಿ ಆರಂಭಗೊಳ್ಳಲಿರುವ ಐಸಿಸಿ ಟಿ-20 ವಿಶ್ವಕಪ್ ಟೂರ್ನಾಮೆಂಟ್ಗೆ ಈಗಾಗಲೇ ಎಲ್ಲ ತಂಡಗಳು ತಮ್ಮ ಆಟಗಾರರನ್ನ ಆಯ್ಕೆ ಮಾಡಿಕೊಂಡಿವೆ. ಇದರ ಬೆನ್ನಲ್ಲೇ ಶ್ರೀಲಂಕಾ ಕ್ರಿಕೆಟ್ ಮಂಡಳಿ ತಮ್ಮ ತಂಡಕ್ಕೆ ಹೆಚ್ಚುವರಿಯಾಗಿ ಐವರು ಪ್ಲೇಯರ್‌ಗಳನ್ನ ಸೇರ್ಪಡೆ ಮಾಡಿಕೊಂಡಿದೆ.
ಈಗಾಗಲೇ ಆಯ್ಕೆಯಾಗಿರುವ ಶ್ರೀಲಂಕಾ ವಿಶ್ವಕಪ್ ತಂಡಕ್ಕೆ ಪಾತುಮ್ ನಿಶಾಂಕ್, ಮಿನೋದ್ ಭಾನುಕ, ಅಶೆನ್ ಬಂಡಾರ, ಲಕ್ಷಣ ಸಂದಕನ್ ಮತ್ತು ರಮೇಶ್ ಮೆಂಡಿಸ್ಹೆಚ್ಚುವರಿಯಾಗಿಸೇರಿಕೊಳ್ಳಲಿದ್ದಾರೆ.
ಈಗಾಗಲೇ ಘೋಷಿತ ತಂಡದಲ್ಲಿದ್ದ ಲಾಹೀರು ಮಧುಶಂಕ ತಂಡದೊಂದಿಗೆ ಪ್ರಯಾಣ ಮಾಡುವುದಿಲ್ಲ. ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಅಂತಾ ಲಂಕಾಆಯ್ಕೆ ಸಮಿತಿ ಹೇಳಿದೆ. ಶ್ರೀಲಂಕಾ ತಂಡ ಅಕ್ಟೋಬರ್ 18ರಿಂದ ತನ್ನ ಅಭಿಯಾನ ಆರಂಭ ಮಾಡಲಿದೆ. ಮೊದಲ ಪಂದ್ಯದಲ್ಲಿ ನಮೀಬಿಯಾ ವಿರುದ್ಧ ಸಿಂಹಳೀಯರು ಸೆಣಸಾಟ ನಡೆಸಲಿದಾರೆ.
ಇದನ್ನೂ ಓದಿರಿ:ಟಿ-20 ವಿಶ್ವಕಪ್: ದಸುನ್ ಶನಕ ನಾಯಕತ್ವದಲ್ಲಿ ಬಲಿಷ್ಠ ತಂಡ ಪ್ರಕಟಿಸಿದ ಶ್ರೀಲಂಕಾ