ಕರ್ನಾಟಕ

karnataka

ETV Bharat / sports

ಅಹರ್ನಿಶಿ ಟೆಸ್ಟ್​ನ​ ಮೊದಲ ದಿನ ಭಾರತಕ್ಕೆ ಮೇಲುಗೈ; 86ಕ್ಕೆ6 ವಿಕೆಟ್​ ಕಳೆದುಕೊಂಡ ಶ್ರೀಲಂಕಾ ​

ಶ್ರೇಯಸ್​ ಅಯ್ಯರ್​ ಅವರ ಏಕಾಂಗಿ ಹೋರಾಟದ ನೆರವಿನಿಂದ ಭಾರತ 252 ರನ್​ಗಳಿಸಿದರೆ, ಇದಕ್ಕುತ್ತರವಾಗಿ ಮೊದಲ ಇನ್ನಿಂಗ್ಸ್​ನಲ್ಲಿ ಶ್ರೀಲಂಕಾ 6 ವಿಕೆಟ್​ ಕಳೆದುಕೊಂಡು 86 ರನ್​ಗಳಿಸಿದೆ.

India vs Sri Lanka test
ಭಾರತ ಶ್ರೀಲಂಕಾ ಟೆಸ್ಟ್​

By

Published : Mar 12, 2022, 10:06 PM IST

ಬೆಂಗಳೂರು: ಭಾರತ ಮತ್ತು ಶ್ರೀಲಂಕಾ ನಡುವಿನ ಹೊನಲು ಬೆಳಕಿನ ಪಂದ್ಯದ ಮೊದಲ ದಿನ ಎರಡೂ ಕಡೆಯ ಬೌಲರ್​ಗಳು ಮೇಲುಗೈ ಸಾಧಿಸಿದ್ದು, ಮೊದಲ ದಿನವೇ ಬರೋಬ್ಬರಿ 16 ವಿಕೆಟ್​ಗಳು ಪತನಗೊಂಡಿವೆ.​

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ಮೊದಲ ಇನ್ನಿಂಗ್ಸ್​ನಲ್ಲಿ 59.1 ಓವರ್​ಗಳಲ್ಲಿ 252 ರನ್​ಗಳಿಸಿ ತನ್ನಲ್ಲೇ ವಿಕೆಟ್ ಕಳೆದುಕೊಂಡಿತು. ಭಾರತದ ಶ್ರೇಯಸ್​ ಅಯ್ಯರ್(98 ಎಸೆತಗಳಲ್ಲಿ 92 ರನ್) ಏಕೈಕ ಅರ್ಧಶತಕ ದಾಖಲಿಸಿದರು. ರಿಷಂತ್ ಪಂತ್ 39, ಹನುಮ ವಿಹಾರಿ 31 ಮತ್ತು ಕೊಹ್ಲಿ 23 ರನ್​ಗಳಿಸಿದರು.

ಆರಂಭಿಕ ಮಯಾಂಕ್ ಅಗರ್ವಾಲ್(4), 400ನೇ ಅಂತಾರಾಷ್ಟ್ರೀಯ ಪಂದ್ಯವನ್ನಾಡುತ್ತಿರುವ ನಾಯಕ ರೋಹಿತ್ ಶರ್ಮಾ ಕೇವಲ 15 ರನ್​ಗಳಿಸಿದರೆ,ಕಳೆದ ಪಂದ್ಯದ ಹೀರೋಗಳಾದ ಜಡೇಜಾ(4) ಮತ್ತು ರವಿಚಂದ್ರನ್ ಅಶ್ವಿನ್(13) ಇಂದು ವೈಫಲ್ಯ ಅನುಭವಿಸಿದರು.

ಭಾರತದ 252 ರನ್​ಗಳನ್ನು ಹಿಂಬಾಲಿಸಿದ ಶ್ರೀಲಂಕಾ ಕೂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿ 86ರನ್​ಗಳಿಸುವಷ್ಟರಲ್ಲಿ ತನ್ನ 6 ಪ್ರಮುಖ ವಿಕೆಟ್ ಕಳೆದುಕೊಂಡಿದೆ.

ಕುಸಾಲ್ ಮೆಂಡಿಸ್​(2), ಲಹಿರು ತಿರುಮನ್ನೆ(5) ಮತ್ತು ಎಂಜೆಯೋ ಮ್ಯಾಥ್ಯೂಸ್​(43) ಯಾರ್ಕರ್ ಸ್ಪೆಷಲಿಸ್ಟ್​ ಜಸ್ಪ್ರೀತ್​ ಬುಮ್ರಾಗೆ ವಿಕೆಟ್ ಒಪ್ಪಿಸಿದರೆ, ಶಮಿ ಲಂಕಾ ನಾಯಕ ಕರುಣರತ್ನೆ(4) ಮತ್ತು ಧನಂಜಯ ಡಿ ಸಿಲ್ವಾ(10) ರನ್ನು ಪೆವಿಲಿಯನ್​ಗಟ್ಟಿದರು. ಉತ್ತಮ ಲಯದಲ್ಲಿರುವ ಚರಿತ್ ಅಸಲಂಕಾ (10) ವಿಕೆಟ್​ ಆಲ್​ರೌಂಡರ್ ಅಕ್ಷರ್ ಪಟೇಲ್ ವಿಕೆಟ್ ಪಡೆದುಕೊಂಡರು.

ಬೆಂಗಳೂರಿನಲ್ಲಿ ಇದೇ ಮೊದಲ ಬಾರಿಗೆ ಅಹರ್ನಿಶಿ ಪಂದ್ಯ ನಡೆಯುತ್ತಿದ್ದು, ಮೊದಲ ದಿನವೇ 16 ವಿಕೆಟ್​ಗಳು ಉರುಳಿರುವುದರಿಂದ ಪಂದ್ಯ ಬಹುತೇಕ 3 ದಿನಗಳಲ್ಲೇ ಮುಗಿಯುವ ಸಾಧ್ಯತೆ ಎದ್ದು ಕಾಣುತ್ತಿದೆ.

ಇದನ್ನೂ ಓದಿ:ತಮಗೆ ಸಿಕ್ಕಿದ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಕೌರ್​ ಜೊತೆ ಹಂಚಿಕೊಂಡ ಸ್ಮೃತಿ ಮಂಧಾನ

ABOUT THE AUTHOR

...view details