ದುಬೈ: ವೆಸ್ಟ್ ಇಂಡೀಸ್ ತಂಡದ ಯುವ ಕ್ರಿಕೆಟಿಗರ ಶೆರ್ಫೇನ್ ರುದರ್ಫೋರ್ಡ್ ಅವರ ತಂದೆ ಗುರುವಾರ ನಿಧನರಾಗಿದ್ದು, ಈ ಸಂದರ್ಭದಲ್ಲಿ ಕುಟುಂಬದ ಜೊತೆಯಲ್ಲಿರಲು ಐಪಿಎಲ್ ಬಯೋಬಬಲ್ ತ್ಯಜಿಸಿ ತವರಿಗೆ ಮರಳಿದ್ದಾರೆ.
ಸನ್ರೈಸರ್ಸ್ ಹೈದರಾಬಾದ್ ಕುಟುಂಬ ತಂದೆಯನ್ನು ಕಳೆದುಕೊಂಡಿರುವ ಶೆರ್ಫೇನ್ ರುದರ್ಫೋರ್ಡ್ ಅವರಿಗೆ ಮತ್ತು ಕುಟುಂಬಕ್ಕೆ ಸಂತಾಪವನ್ನು ತಿಳಿಸುತ್ತದೆ.
ಈ ಕಠಿಣ ಸಂದರ್ಭದಲ್ಲಿ ಕುಟುಂಬದ ಜೊತೆಯಲ್ಲಿರಲು ಶೆರ್ಫೇನ್ ರುದರ್ಫೋರ್ಡ್ ಐಪಿಎಲ್ ಬಯೋಬಬಲ್ ತ್ಯಜಿಸಿ ತವರಿಗೆ ಮರಳಲಿದ್ದಾರೆ ಎಂದು ಫ್ರಾಂಚೈಸಿ ಟ್ವೀಟ್ ಮೂಲಕ ತಿಳಿಸಿದೆ.
ರುದರ್ಫೋರ್ಡ್ ಐಪಿಎಲ್ನಿಂದ ಕೊನೆ ಕ್ಷಣದಲ್ಲಿ ಹಿಂದೆ ಸರಿದಿದ್ದ ಇಂಗ್ಲೆಂಡ್ ಓಪನರ್ ಜಾನಿ ಬೈರ್ಸ್ಟೋವ್ ಅವರ ಬದಲಿ ಆಟಗಾರನಾಗಿ ಹೈದರಾಬಾದ್ ತಂಡ ಸೇರಿಕೊಂಡಿದ್ದರು. ಇತ್ತೀಚೆಗೆ ಮುಗಿದ ಸಿಪಿಎಲ್ನಲ್ಲಿ ಉತ್ತಮ ಪ್ರದರ್ಶನ ತೋರಿದ್ದರಿಂದ ಅವರನ್ನು ಫ್ರಾಂಚೈಸಿ ತಂಡಕ್ಕೆ ಸೇರಿಸಿಕೊಂಡಿತ್ತಾದರೂ ಆಡುವ ಬಳಗದಲ್ಲಿ ಅವಕಾಶ ನೀಡಿರಲಿಲ್ಲ.
ಇದನ್ನು ಓದಿ:ಭಾರತ-ಪಾಕಿಸ್ತಾನದ ಸ್ಥಿತಿ ಒಂದೇ, ಆದ್ರೆ ಪಾಕ್ ಎಲ್ಲರಿಗೂ ಸುಲಭದ ಟಾರ್ಗೆಟ್ ಆಗಿದೆ: ಉಸ್ಮಾನ್ ಖವಾಜ