ನವದೆಹಲಿ: ಭಾರತ ತಂಡ ಮತ್ತು ಮುಂಬೈ ಇಂಡಿಯನ್ ತಂಡದ ಸ್ಪಿನ್ನರ್ ಪಿಯೂಷ್ ಚಾವ್ಲಾ ಅವರ ತಂದೆ ಕೋವಿಡ್ 19ಗೆ ಸೋಮವಾರ ಬಲಿಯಾಗಿದ್ದಾರೆ. ನಿನ್ನೆಯಷ್ಟೇ ರಾಜಸ್ಥಾನ ರಾಯಲ್ಸ್ ತಂಡದ ವೇಗಿ ಚೇತನ್ ಸಕಾರಿಯಾ ಅವರ ತಂದೆ ಕೂಡ ಸಾಂಕ್ರಾಮಿಕ ವೈರಸ್ಗೆ ನಿಧನರಾಗಿದ್ದರು.
ಈ ದುಃಖದ ವಿಚಾರವನ್ನು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಪಿಯೂಷ್ ಚಾವ್ಲಾ" ತಮ್ಮ ಶಕ್ತಿಯ ಪಿಲ್ಲರ್ ಕಳೆದುಕೊಂಡಿರುವುದರಿಂದ ಮುಂದಿನ ಜೀವನ ಎಂದಿನಂತೆ ಇರುವುದಿಲ್ಲ" ಎಂದು ಪೋಸ್ಟ್ ಮಾಡಿದ್ದಾರೆ.
" ನನ್ನ ಪ್ರೀತಿಯ ತಂದೆ ಪ್ರಮೋದ್ ಕುಮಾರ್ ಚಾವ್ಲಾ ಅವರು ಮೇ 10 2021 ರಂದು ನಿಧನರಾಗಿದ್ದಾರೆ ಎಂದು ತೀವ್ರ ನೋವಿನೊಂದಿಗೆ ಘೋಷಿಸುತಿದ್ದೇವೆ. ಅವರು ಕೋವಿಡ್ ಸಮಸ್ಯೆಗಳಿಂದ ಬಳಲುತ್ತಿದ್ದರು. ಇಂತಹ ಕಷ್ಟದ ಸಮಯದಲ್ಲಿ ನಿಮ್ಮ ಆಲೋಚನೆಗಳು ಮತ್ತು ಪ್ರಾರ್ಥನೆಗಳನ್ನು ನಾವು ಆಹ್ವಾನಿಸುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ " ತಮ್ಮ ತಂದೆಯ ಚಿತ್ರದೊಂದಿಗೆ ಇನ್ಸ್ಟಾಗ್ರಾಮ್ನಲ್ಲಿ ಫೋಟೋ ಸಹಿತ ಚಾವ್ಲಾ ಶೇರ್ ಮಾಡಿಕೊಂಡಿದ್ದಾರೆ.