ಅಬುದಾಬಿ : ಟಿ-20 ವಿಶ್ವಕಪ್ 2021ರ ಸೂಪರ್ 12 ಸುತ್ತಿನ ಮೊದಲನೇ ಪಂದ್ಯದಲ್ಲಿ ಇಂದು ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಕಾಂಗರೊ ಪಡೆ 5 ವಿಕೆಟ್ಗಳ ಭರ್ಜರಿ ಜಯಗಳಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
ತೆಂಬಾ ಬಾವುಮಾ ಬಳಗ ನೀಡಿದ 118 ಸ್ಪರ್ಧಾತ್ಮಕ ಮೊತ್ತ ಬೆನ್ನಟ್ಟಿದ ಆ್ಯರೋನ್ ಫಿಂಚ್ ನಾಯಕತ್ವದ ಆಸ್ಟ್ರೇಲಿಯಾ ತಂಡ ಎರಡು ಬಾಲುಗಳು ಬಾಕಿ ಇರುವಾಗಲೇ ಗೆಲುವನ್ನು ತಮ್ಮದಾಗಿಸಿಕೊಂಡಿದೆ. ಈ ಮೂಲಕ ಇಂದು ಆರಂಭವಾದ ಮೊದಲ ಪಂದ್ಯದಲ್ಲೇ ಹರಿಣಗಳ ಮೇಲೆ ಕಾಂಗರೂಗಳ ಪಡೆ ಸವಾರಿ ಮಾಡಿದೆ.
ಈ ಪಂದ್ಯ ವೀಕ್ಷಣೆಗೆ ಬಂದ ಕೆಲವು ವೀಕ್ಷಕರಿಗೆ ವಿಶೇಷ ಆಸನದ ವ್ಯವಸ್ಥೆ ಮಾಡಲಾಗಿತ್ತು. ಅದರಲ್ಲೂ ಸಾಮಾಜಿಕ ಅಂತರದ ಫ್ಯಾಮಿಲಿ ಪಾಡ್ಸ್ ಎನ್ನುವ ಆಸನಗಳನ್ನು ಸಿದ್ದಪಡಿಸಲಾಗಿತ್ತು. ಇದರಲ್ಲಿ ಕುಟುಂಬದವರು ಒಂದೆಡೆ ಕುಳಿತು ಪಂದ್ಯ ವೀಕ್ಷಣೆ ಮಾಡಿದರು.
ಸಾಮಾಜಿಕ ಅಂತರದ ನಿಯಮದಂತೆ ಕಟ್ಟಿಗೆಗಳಿಂದ ಹುಲ್ಲು ಹಾಸಿನ ಮೇಲೆ ಚೌಕಟ್ಟನ್ನು ತಯಾರಿಸಲಾಗಿದ್ದು, ಆ ಚೌಕಟ್ಟಿನಲ್ಲಿ ಫ್ಯಾಮಿಲಿ ಸದಸ್ಯರು ಕುಳಿತು ಪಂದ್ಯ ವೀಕ್ಷಿಸಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಒಂದು ಒಂದು ಚೌಕಟ್ಟಿನಿಂದ ಮತ್ತೊಂದು ಪ್ಯಾಮಿಲಿ ಪಾಡ್ಸ್ಗೆ ಸುಮಾರು 3 ಅಡಿ ಅಂತರವನ್ನು ಕಾಪಾಡಿಕೊಳ್ಳಲಾಗಿತ್ತು. ಈ ಚೌಕಟ್ಟಿನಲ್ಲಿ ವೀಕ್ಷಕರು ಪಂದ್ಯ ನೋಡುವುದನ್ನು ಐಸಿಸಿ ತನ್ನ ಇನ್ಸ್ಟಾಗ್ರಾಂನಲ್ಲಿ ಸಾಮಾಜಿಕ ಅಂತರದ ಫ್ಯಾಮಿಲಿ ಪಾಡ್ಸ್ ಎಂಬ ಬರಹದಡಿ ವಿಡಿಯೋ ಹಂಚಿಕೊಂಡಿದೆ.