ಕರ್ನಾಟಕ

karnataka

ETV Bharat / sports

ಬಾಂಗ್ಲಾ ವಿರುದ್ಧದ ಟೆಸ್ಟ್​ ಸರಣಿಗೆ ಬೈ ಬೈ, ಐಪಿಎಲ್​ಗೆ ಜೈ ಅಂದ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು - ಬಿಸಿಸಿಐ

ರಬಾಡ,ಎಂಗಿಡಿ, ವ್ಯಾನ್ ಡರ್ ಡಸೆನ್,ಮಾರ್ಕ್ರಮ್, ಜಾನ್ಸನ್​ ಮತ್ತು ನಾರ್ಕಿಯ ದಕ್ಷಿಣ ಆಫ್ರಿಕಾದ ಟೆಸ್ಟ್​ ಯೋಜನೆಯಲ್ಲಿದ್ದಾರೆ. ಇದೀಗ ಈ ಆಟಗಾರರು ಬಾಂಗ್ಲಾದೇಶದ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ.

South African test players to choose IPL over Test
ಐಪಿಎಲ್​ನಲ್ಲಾಡಲಿರುವ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು

By

Published : Mar 15, 2022, 9:47 PM IST

ಮುಂಬೈ: ಬಾಂಗ್ಲಾದೇಶದ ವಿರುದ್ಧ ತವರಿನಲ್ಲಿ ನಡೆಯಲಿರುವ ಟೆಸ್ಟ್​ ಸರಣಿ ಬದಲಿಗೆ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಆಡುವುದಕ್ಕೆ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ನಿರ್ಧರಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

ಬಾಂಗ್ಲಾದೇಶ ತಂಡ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಮೊದಲಿಗೆ 3 ಪಂದ್ಯಗಳ ಏಕದಿನ ಸರಣಿಯನ್ನಾಡಲಿದೆ. ಈಗಾಗಲೆ ಏಕದಿನ ಸರಣಿಗಾಗಿ ದಕ್ಷಿಣ ಆಫ್ರಿಕಾ ಕ್ರಿಕೆಟ್​ ಮಂಡಳಿ 16 ಸದಸ್ಯರ ತಂಡವನ್ನು ಪ್ರಕಟಿಸಿದೆ. ಈ ಸರಣಿ ಮುಗಿದ ಬಳಿಕ ಟೆಸ್ಟ್​ ಸರಣಿ ನಡೆಯಲಿದ್ದು, ಐಪಿಎಲ್​ ಪ್ರತಿನಿಧಿಸುವ ಆಟಗಾರರು ಟೆಸ್ಟ್​ ತಂಡದಿಂದ ಹೊರಬಂದು ಐಪಿಎಲ್​ಗಾಗಿ ಭಾರತಕ್ಕೆ ಪ್ರಯಾಣಿಸಲು ಸಜ್ಜಾಗಿದ್ದಾರೆ ಎಂದು ತಿಳಿದುಬಂದಿದೆ.

ಎರಡೂ ದೇಶಗಳ ಒಪ್ಪಂದದ ಪ್ರಕಾರ ಸಿಎಸ್​ಎ ಇಂಡಿಯನ್​ ಪ್ರೀಮಿಯರ್​ ಲೀಗ್​ನಲ್ಲಿ ಆಡುವುದಕ್ಕೆ ತನ್ನ ಆಟಗಾರರಿಗೆ ಎನ್​ಒಸಿ ನೀಡಬೇಕಿದೆ. ಹಾಗೆಯೇ ಈ ಸಂದರ್ಭದಲ್ಲಿ ಯಾವುದೇ ದ್ವಿಪಕ್ಷೀಯ ಸರಣಿಯನ್ನು ಆಯೋಜಿಸಬಾರದು ಎನ್ನುವ ಒಪ್ಪಂದವಾಗಿದೆ. ಆದರೆ ಈ ಬಾರಿ ಐಪಿಎಲ್​ 10 ತಂಡಗಳ ಕಾರಣ ಹೆಚ್ಚಿನ ದಿನಗಳಿಗೆ ವಿಸ್ತಾರವಾಗಿದೆ. ಹಾಗಾಗಿ ಈ ಸರಣಿ ಮತ್ತು ಐಪಿಎಲ್​ ನಡುವೆ ಸಂಘರ್ಷ ಉಂಟಾಗಿದೆ. ಆದರೂ ಟೆಸ್ಟ್ ಅಥವಾ ಐಪಿಎಲ್​ ಎರಡರಲ್ಲಿ ಆಡುವ ಆಯ್ಕೆಯನ್ನು ಸಿಎಸ್​ಎ ತನ್ನ ಆಟಗಾರರಿಗೆ ಬಿಟ್ಟುಕೊಟ್ಟಿತ್ತು. ಇದೀಗ ಆಟಗಾರರು ಐಪಿಎಲ್ ಆಡುವುದಕ್ಕೆ ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ.

ರಬಾಡ,ಎಂಗಿಡಿ, ವ್ಯಾನ್ ಡರ್ ಡಸೆನ್,ಮಾರ್ಕ್ರಮ್, ಜಾನ್ಸನ್​ ಮತ್ತು ನಾರ್ಕಿಯ ದಕ್ಷಿಣ ಆಫ್ರಿಕಾದ ಟೆಸ್ಟ್​ ಯೋಜನೆಯಲ್ಲಿದ್ದಾರೆ. ಈ ಆಟಗಾರರು ಬಾಂಗ್ಲಾದೇಶದ ವಿರುದ್ಧ ಟೆಸ್ಟ್​ ಸರಣಿಯಲ್ಲಿ ಆಡುವುದು ಅನುಮಾನ ಎನ್ನಲಾಗುತ್ತಿದೆ. ಆದರೆ ಟೆಸ್ಟ್​ ತಂಡದಲ್ಲಿಲ್ಲದ​ ಡೇವಿಡ್ ಮಿಲ್ಲರ್​, ಕ್ವಿಂಟನ್ ಡಿ ಕಾಕ್, ಡ್ವೇನ್ ಪ್ರಿಟೋರಿಯಸ್ ಏಕದಿನ ಸರಣಿ ಮುಗಿಯುತ್ತಿದ್ದಂತೆ ಭಾರತಕ್ಕೆ ಬರಲಿದ್ದಾರೆ.

ಇದನ್ನೂ ಓದಿ:ಐಪಿಎಲ್​ಗೆ ಸ್ಪರ್ಧೆಯೊಡ್ಡಲು ಪಿಎಸ್ಎಲ್​​​ನಲ್ಲಿ ಹೊಸ ಬದಲಾವಣೆ ತರಲು ಬಯಸಿದ್ದೇನೆ : ರಮೀಜ್ ರಾಜಾ

ABOUT THE AUTHOR

...view details