ಕಟಕ್(ಒಡಿಶಾ):ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ-20 ಪಂದ್ಯದಲ್ಲೂ ಭಾರತ ಸೋಲೊಂಡಿದೆ. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 148 ರನ್ಗಳ ಸಾಧರಣ ಮೊತ್ತ ಕಲೆ ಹಾಕಿತ್ತು ಇದಕ್ಕುತ್ತರವಾಗಿ ದಕ್ಷಿಣ ಆಫ್ರಿಕಾ 18.2 ಓವರ್ಗಳಲ್ಲಿ 149 ರನ್ ಮಾಡಿ ನಿರಾಯಾಸ ಗೆಲುವು ಸಾಧಿಸಿತು. ಈ ಮೂಲಕ 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಪಡೆದಿದೆ.
ಗುಡುಗಿದ ಹೈನ್ರಿಚ್ ಕ್ಲಾಸಿನ್: ಗಾಯಗೊಂಡ ಕ್ವಿಂಟನ್ ಡಿ ಕಾಕ್ ಬದಲಾಗಿ ತಂಡದಲ್ಲಿ ಸ್ಥಾನ ಪಡೆದ ಹೈನ್ರಿಚ್ ಕ್ಲಾಸಿನ್ ಅವಕಾಶವನ್ನು ಉಪಯೋಗಿಸಿಕೊಂಡು ಭರ್ಜರಿಯಾಗಿಯೇ ರನ್ ಸಿಡಿಸಿದರು. 46 ಎಸೆತಗಳಲ್ಲಿ 5 ಸಿಕ್ಸರ್ 7 ಬೌಂಡರಿ ಸಮೇತ 81 ರನ್ ಗಳಿಸಿ ಗೆಲುವಿನ ರೂವಾರಿಯಾದರು. ನಾಯಕ ತೆಂಬ ಬವುಮಾ(35), ಡೇವಿಡ್ ಮಿಲ್ಲರ್ 20 ರನ್ ಗಳಿಸಿ ಗೆಲುವಿನ ನಗೆ ಬೀರಿದರು.
ರನ್ಗಾಗಿ ಪರದಾಡಿದ ಇಂಡಿಯಾ:ಮೊದಲು ಬ್ಯಾಟ್ ಮಾಡಿದ ಭಾರತ ತಂಡದ ಆಟಗಾರರು ರನ್ ಗಳಿಸಲು ಪರದಾಡಿದರು. ಋತುರಾಜ್ ಗಾಯಕ್ವಾಡ್ 1 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇಶಾನ್ ಕಿಶನ್ 34, ಶ್ರೇಯಸ್ ಅಯ್ಯರ್ 40 ರನ್ ಗಳಿಸಿ ಪ್ರತಿರೋಧ ಒಡ್ಡಿದರು. ಇವರ ಬಳಿಕ ಬಂದ ನಾಯಕ ಪಂತ್, ಹಾರ್ದಿಕ್ ಪಾಂಡ್ಯ ಅಕ್ಷರ್ ಪಟೇಲ್, ಅಲ್ಪ ಮೊತ್ತಕ್ಕೆ ಔಟಾದರು. ಕೊನೆಯಲ್ಲಿ ದಿನೇಶ್ ಕಾರ್ತಿಕ್ 30 ರನ್ ಗಳಿಸಿ ತಂಡ 150 ರ ಗಡಿ ಹತ್ತಿರ ಬರುವಂತೆ ನೋಡಿಕೊಂಡರು.
ಭುವನೇಶ್ವರ್ ಕುಮಾರ್ ಮಿಂಚು:ಕಳೆದ ಪಂದ್ಯದಲ್ಲಿ ಕಳಪೆ ಪ್ರದರ್ಶನ ತೋರಿದ್ದ ಭುವನೇಶ್ವರ್ ಕುಮಾರ್ ಈ ಪಂದ್ಯದಲ್ಲಿ 4 ವಿಕೆಟ್ ಪಡೆಯುವ ಮೂಲಕ ಮಿಂಚಿದರು. ಸ್ಪಿನ್ನರ್ ಯಜುವೇಂದ್ರ ಚಹಲ್ ಹರ್ಷಲ್ ಪಟೇಲ್ ತಲಾ 1 ವಿಕೆಟ್ ಪಡೆದರು.
ಓದಿ:ಕಾಶ್ಮೀರದ ದರ್ಜಿಯ ಮಗ ಖೇಲೋ ಇಂಡಿಯಾ ಸ್ಪರ್ಧೆಯಲ್ಲಿ 'ಚಿನ್ನದ ಹುಡುಗ'