ಸೆಂಚುರಿಯನ್(ದಕ್ಷಿಣ ಆಫ್ರಿಕಾ): ಕೆ.ಎಲ್.ರಾಹುಲ್ ಅವರ ಸೊಗಸಾದ ಶತಕದಾಟದ ನೆರವಿನಿಂದ ಸೂಪರ್‌ಸ್ಪೋರ್ಟ್ ಪಾರ್ಕ್ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ನ ಮೊದಲ ಇನ್ನಿಂಗ್ಸ್ನಲ್ಲಿ ಭಾರತ 245 ರನ್ ಕಲೆಹಾಕಿತು. ಕಗಿಸೊ ರಬಾಡ 5 ವಿಕೆಟ್ ಕಬಳಿಸಿ ಭಾರತದ ಬ್ಯಾಟಿಂಗ್ ಬಲವನ್ನು ಕಾಡಿದರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ಮೊದಲನೇ ದಿನ ರೋಹಿತ್ ಶರ್ಮಾ (5), ಯಶಸ್ವಿ ಜೈಸ್ವಾಲ್ (17) ಮತ್ತು ಶುಭಮನ್ ಗಿಲ್ (2) ಅವರ ವಿಕೆಟ್ ಅನ್ನು ಬಹುಬೇಗ ಕಳೆದುಕೊಂಡಿತು. ನಾಲ್ಕನೇ ವಿಕೆಟ್ಗೆ ವಿರಾಟ್ ಕೊಹ್ಲಿ (38) ಮತ್ತು ಶ್ರೇಯಸ್ ಅಯ್ಯರ್ (31) ಬವುಮಾ ಪಡೆಯ ದಾಳಿಯನ್ನು ಯಶಸ್ವಿಯಾಗಿ ಎದುರಿಸಿ ಜೊತೆಯಾಟ ಕಟ್ಟಿದರು. ಆದರೆ ಹೆಚ್ಚು ಹೊತ್ತು ಇವರ ಆಟ ನಡೆಯಲಿಲ್ಲ. ಕೆಳ ಕ್ರಮಾಂಕದಲ್ಲಿ ರವಿಚಂದ್ರನ್ ಅಶ್ವಿನ್ (8), ಶಾರ್ದೂಲ್ ಠಾಕೂರ್ (24) ಮತ್ತು ಜಸ್ಪ್ರೀತ್ ಬುಮ್ರಾ (1) ತಂಡಕ್ಕೆ ದೊಡ್ಡ ಕೊಡುಗೆ ನೀಡಲಿಲ್ಲ. ಮೊದಲ ದಿನದಾಟದಂತ್ಯಕ್ಕೆ ಭಾರತ 208ಕ್ಕೆ 8 ವಿಕೆಟ್ ಕಳೆದುಕೊಂಡಿತ್ತು. ರಾಹುಲ್, ಸಿರಾಜ್ ಕ್ರೀಸ್ನಲ್ಲಿದ್ದರು.