ಕರ್ನಾಟಕ

karnataka

ETV Bharat / sports

ಬೃಹತ್​ ಮೊತ್ತದ ಗುರಿ ನೀಡಿದ ಸೌತ್​ ಆಫ್ರಿಕಾ..164 ರನ್​ಗಳ ಸೋಲು ಕಂಡ ಆಸ್ಟ್ರೇಲಿಯಾ

ದಕ್ಷಿಣ ಆಫ್ರಿಕಾ ತಂಡ ನೀಡಿದ ಬೃಹತ್ ಮೊತ್ತದ ಗುರಿಯನ್ನು ಬೆನ್ನತ್ತಿದ್ದ ಆಸ್ಟ್ರೇಲಿಯಾ ತಂಡ 252 ರನ್‌ಗಳಿಗೆ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡು ಸೋಲನ್ನಪ್ಪಿತು. ಆಸ್ಟ್ರೇಲಿಯಾ ತಂಡದ ವಿರುದ್ಧ ದಕ್ಷಿಣಾ ಆಫ್ರಿಕಾ ತಂಡ 164 ರನ್​ಗಳ ಭರ್ಜರಿ ಗೆಲುವು ಸಾಧಿಸಿತು.

South Africa vs Australia 4th ODI  South Africa won by 164 runs  Africa won by 164 runs against Australia  ದಕ್ಷಿಣ ಆಫ್ರಿಕಾ ತಂಡ ನೀಡಿದ ಬೃಹತ್ ಮೊತ್ತದ ಗುರಿ  ಆಫ್ರಿಕಾ ತಂಡ 164 ರನ್​ಗಳ ಭರ್ಜರಿ ಗೆಲುವು  ಬೃಹತ್​ ಮೊತ್ತ ಕಲೆ ಹಾಕಿದ ಸೌತ್​ ಆಫ್ರಿಕಾ  164 ರನ್​ಗಳ ಸೋಲು ಕಂಡ ಆಸ್ಟ್ರೇಲಿಯಾ  ಸೌತ್​ ಆಫ್ರಿಕಾಕ್ಕೆ ಕಾಡುತ್ತಿರುವ ಗಾಯದ ಸಮಸ್ಯೆ  ಬೃಹತ್​ ಮೊತ್ತದ ಗುರಿ ನೀಡಿದ ಸೌತ್​ ಆಫ್ರಿಕಾ  164 ರನ್​ಗಳ ಸೋಲು ಕಂಡ ಆಸ್ಟ್ರೇಲಿಯಾ
ಬೃಹತ್​ ಮೊತ್ತದ ಗುರಿ ನೀಡಿದ ಸೌತ್​ ಆಫ್ರಿಕಾ

By ETV Bharat Karnataka Team

Published : Sep 16, 2023, 8:12 AM IST

ಸೆಂಚುರಿಯನ್, ದಕ್ಷಿಣ ಆಫ್ರಿಕಾ:ಇಲ್ಲಿನ ಸೂಪರ್‌ಸ್ಪೋರ್ಟ್ ಪಾರ್ಕ್​ ಮೈದನಾದಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಪ್ರೇಕ್ಷಕರನ್ನು ರೋಮಾಂಚನಗೊಳಿಸಿತು. ಆಸ್ಟ್ರೇಲಿಯಾ ಗೆಲುವಿಗೆ ಸೌತ್​ ಆಫ್ರೀಕಾ ತಂಡ ಬೃಹತ್​ ಮೊತ್ತದ ಗುರಿ ನೀಡಿತ್ತು. ಎದುರಾಳಿ ತಂಡ ನೀಡಿದ ಗುರಿಯನ್ನು ಬೆನ್ನತ್ತಿದ್ದ ಕಾಂಗರೂ ಪಡೆ ಇನ್ನು 16 ಓವರ್​​ಗಳು ಬಾಕಿ ಇರುವಾಗಲೇ ತನ್ನೆಲ್ಲ ವಿಕೆಟ್​ಗಳನ್ನು ಕಳೆದುಕೊಂಡು ಸೋಲಪ್ಪಿಕೊಂಡಿತು.

83 ಎಸೆತಗಳಲ್ಲಿ 174 ರನ್ ಗಳಿಸಿದ ಹೆನ್ರಿಚ್ ಕ್ಲಾಸೆನ್ ಅವರ ಸ್ಫೋಟಕ ಆಟದಿಂದ ದಕ್ಷಿಣ ಆಫ್ರಿಕಾ ತಂಡ ಆಸ್ಟ್ರೇಲಿಯಾವನ್ನು 164 ರನ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡ 50 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 416 ರನ್‌ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಆಸ್ಟ್ರೇಲಿಯಾ ತಂಡ 34.5 ಓವರ್‌ಗಳಲ್ಲಿ 252 ರನ್‌ಗಳಿಗೆ ಪತನಗೊಂಡಿತು.

ಬೃಹತ್​ ಮೊತ್ತ ಕಲೆ ಹಾಕಿದ ಸೌತ್​ ಆಫ್ರಿಕಾ: ಮೊದಲು ಟಾಸ್ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್ ಮಾಡಲು ನಿರ್ಧರಿಸಿತು. ಹೆನ್ರಿಕ್ ಕ್ಲಾಸೆನ್ 83 ಎಸೆತಗಳಲ್ಲಿ 174 ರನ್‌ಗಳ ಬಿರುಸಿನ ಇನ್ನಿಂಗ್ಸ್‌ ಆಡಿದರು. ಅವರ ಇನ್ನಿಂಗ್ಸ್‌ನಲ್ಲಿ ಅವರು 13 ಬೌಂಡರಿ ಮತ್ತು 13 ಸಿಕ್ಸರ್‌ಗಳನ್ನು ಹೊಡೆದರು. ಇದಲ್ಲದೇ ಡೇವಿಡ್ ಮಿಲ್ಲರ್ 45 ಎಸೆತಗಳಲ್ಲಿ ಅಜೇಯ 82 ರನ್ ಗಳಿಸಿದರು. ತಂಡಕ್ಕೆ ಡುಸೆನ್ 62 ರನ್ ಕೊಡುಗೆ ನೀಡಿದರು. ಒಟ್ಟಿನಲ್ಲಿ ದಕ್ಷಿಣ ಆಫ್ರಿಕಾ ನಿಗದಿತ 50 ಓವರ್‌ಗಳಲ್ಲಿ ಐದು ವಿಕೆಟ್‌ಗಳ ನಷ್ಟಕ್ಕೆ 416 ರನ್ ಗಳಿಸಿತು. ಇದು ಏಕದಿನ ಕ್ರಿಕೆಟ್‌ನಲ್ಲಿ ದಕ್ಷಿಣ ಆಫ್ರಿಕಾದ ಐದನೇ ಗರಿಷ್ಠ ಸ್ಕೋರ್ ಆಗಿದೆ.

164 ರನ್​ಗಳ ಸೋಲು ಕಂಡ ಆಸ್ಟ್ರೇಲಿಯಾ:ದಕ್ಷಿಣ ಆಫ್ರಿಕಾದ ಇನ್ನಿಂಗ್ಸ್‌ಗೆ ಉತ್ತರವಾಗಿ ಆಸ್ಟ್ರೇಲಿಯಾ 252 ರನ್‌ಗಳಿಗೆ ಆಲೌಟ್ ಆಯಿತು. ಅಲೆಕ್ಸ್ ಕ್ಯಾರಿ 77 ಎಸೆತಗಳಲ್ಲಿ 99 ರನ್ ಗಳಿಸಿ ಶತಕ ವಂಚಿತರಾಗಿ ಔಟಾದರು. ಟಿಮ್ ಡೇವಿಡ್ 35 ರನ್​ಗಳ ಇನಿಂಗ್ಸ್ ಆಡಿದರು. ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್‌ಗಿಡಿ 4 ವಿಕೆಟ್​ ಹಾಗೂ ಕಗಿಸೊ ರಬಾಡ 3 ವಿಕೆಟ್ ಪಡೆದು ಮಿಂಚಿದರು. ಈ ಗೆಲುವಿನೊಂದಿಗೆ ದಕ್ಷಿಣ ಆಫ್ರಿಕಾ ಸರಣಿಯಲ್ಲಿ 2-2 ಸಮಬಲ ಸಾಧಿಸಿದ್ದು, ಸರಣಿಯ ಕೊನೆಯ ಪಂದ್ಯ ಸೆ.17ರಂದು ನಡೆಯಲಿದೆ.

ಸೌತ್​ ಆಫ್ರಿಕಾಕ್ಕೆ ಕಾಡುತ್ತಿರುವ ಗಾಯದ ಸಮಸ್ಯೆ: ದಕ್ಷಿಣ ಆಫ್ರಿಕಾ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ಐದು ಪಂದ್ಯಗಳ ಏಕದಿನ ಸರಣಿಯಲ್ಲಿ ಆಫ್ರಿಕಾ ತಂಡಕ್ಕೆ ಸಮಸ್ಯೆಗಳು ಹೆಚ್ಚುತ್ತಿವೆ. 2023ರ ವಿಶ್ವಕಪ್‌ಗೂ ಮುನ್ನ ನಾಯಕ ತೆಂಬಾ ಬವುಮಾ ಸೇರಿದಂತೆ ತಂಡದ ಇಬ್ಬರು ಆಟಗಾರರು ಗಾಯಗೊಂಡಿದ್ದರು. ವೇಗದ ಬೌಲರ್ ಎನ್ರಿಕ್ ಗಾಯದ ಕಾರಣ ಮೂರನೇ ODI ಆಡಲು ಸಾಧ್ಯವಾಗಲಿಲ್ಲ, ಈಗ ಅವರು ಕೊನೆಯ ಎರಡು ODIಗಳಿಂದ ಹೊರಗುಳಿದಿದ್ದಾರೆ.

ಬೆನ್ನುನೋವಿನ ಕಾರಣ ಎನ್ರಿಕ್​ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ. ಎನ್ರಿಕ್​ ಅವರ ಗಾಯವು ವಿಶ್ವಕಪ್‌ಗೆ ಮುನ್ನ ಆಫ್ರಿಕಾಕ್ಕೆ ಸಮಸ್ಯೆ ಎದುರಾಗಬಹುದು. ಇನ್ನು ಅಮೋಘ ಫಾರ್ಮ್‌ನಲ್ಲಿರುವ ಆಫ್ರಿಕನ್ ನಾಯಕ ತೆಂಬಾ ಬಾವುಮಾ ಕೂಡ ಒತ್ತಡದ ಕಾರಣ ಸರಣಿಯ ಕೊನೆಯ ಪಂದ್ಯವನ್ನು ಆಡಲು ಸಾಧ್ಯವಾಗುವುದಿಲ್ಲ. ಬಾವುಮಾ ಬದಲಿಗೆ ಐಡೆನ್ ಮಾರ್ಕ್ರಾಮ್ ಉಳಿದ ಪಂದ್ಯಗಳಲ್ಲಿ ಆಫ್ರಿಕಾದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.

ಓದಿ:ಆಸ್ಟ್ರೇಲಿಯಾ ವಿರುದ್ಧ ಕ್ಲಾಸೆನ್​ ದಾಖಲೆಯ ಶತಕದಾಟ; ಭಾರತದ ದಾಖಲೆ ಮುರಿದ ದ.ಆಫ್ರಿಕಾ

ABOUT THE AUTHOR

...view details