ತರೌಬಾ(ಟ್ರಿನಿಡಾಡ್):ಐಸಿಸಿ ಅಂಡರ್ 19 ವಿಶ್ವಕಪ್ ರೋಚಕ ಹಂತಕ್ಕೆ ತಲುಪುತ್ತಿದೆ. ನಿನ್ನೆ ನಡೆದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ ಸೌತ್ ಆಫ್ರಿಕಾ ತಂಡಕ್ಕೆ ಬೃಹತ್ ಮೊತ್ತದ ಗೆಲುವು ದಾಖಲಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಹರಿಣಗಳ ಪಡೆ ಆರಂಭಿಕ ಆಘಾತ ಎದುರಿಸಿತ್ತು. ಕೇವಲ 63 ರನ್ಗಳಿಗೆ 3 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಬಳಿಕ ಡೆವಾಲ್ಡ್ ಬ್ರೆವಿಸ್ ಜೊತೆ ನಾಯಕ ಜಿವಿ ಹೀರ್ಡನ್ ಜವಾಬ್ದಾರಿಯುತ ಆಟವಾಡಿದರು. ಇಬ್ಬರು ಸೇರಿ 122 ರನ್ಗಳ ಜೊತೆಯಾಟವಾಡಿ ತಂಡದ ಸ್ಕೋರ್ ಹೆಚ್ಚಿಸುವಲ್ಲಿ ಸಫಲರಾದರು.
ಸೌತ್ ಆಫ್ರಿಕಾ ಪರ ವ್ಯಾಲಿಂಟೈನ್ ಕಿಟೈಮ್ 0, ಎಥಾನ್ ಜಾನ್ ಕನ್ನಿಂಗ್ಹ್ಯಾಮ್ 11 ರನ್, ಡೆವಾಲ್ಡ್ ಬ್ರೆವಿಸ್ 96 ರನ್, ಜಿಜೆ ಮೇರಿ (ವಿ.ಕೀ) 14 ರನ್, ನಾಯಕ ಜಾರ್ಜ್ ವ್ಯಾನ್ ಹೀರ್ಡೆನ್ 111 ರನ್, ಆಂಡಿಲ್ ಸಿಮೆಲೇನ್ 25 ರನ್, ಮಿಕ್ಕಿ ಕೋಪ್ಲ್ಯಾಂಡ್ 43 ರನ್, ಮ್ಯಾಥ್ಯೂ ಬೋಸ್ಟ್ ಅಜೇಯರಾಗಿ 2 ರನ್ಗಳನ್ನು ಗಳಿಸಿದ್ದಾರೆ.
ಒಟ್ಟಿನಲ್ಲಿ ದಕ್ಷಿಣ ಆಫ್ರಿಕ ತಂಡ 47 ಓವರ್ಗಳಿಗೆ 7 ವಿಕೆಟ್ಗಳನ್ನು ಕಳೆದುಕೊಂಡು 315 ರನ್ಗಳ ಬೃಹತ್ ಮೊತ್ತವನ್ನು ಕಲೆಹಾಕಿತು. ಐರ್ಲೆಂಡ್ ಪರ ಲಿಯಾಮ್ ಡೊಹೆರ್ಟಿ ಮತ್ತು ರೂಬೆನ್ ವಿಲ್ಸನ್ ತಲಾ ಎರಡೆರಡು ವಿಕೆಟ್ಗಳನ್ನು ಪಡೆದರೆ, ಮ್ಯಾಥ್ಯೂ ಹಂಫ್ರೀಸ್, ಜೇಮೀ ಫೋರ್ಬ್ಸ್ ಮತ್ತು ಸ್ಕಾಟ್ ಮ್ಯಾಕ್‌ಬೆತ್ ತಲಾ ಒಂದೊಂದು ವಿಕೆಟ್ ಪಡೆದರು.