ಇಂದೂರ್ : ಇಲ್ಲಿನ ಹೋಲ್ಕರ್ಮೈದಾನದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವಣ ಮೂರನೇ ಟಿ 20ಯಲ್ಲಿ ಭರ್ಜರಿ ಬ್ಯಾಟಿಂಗ್ ಮಾಡಿದ ಹರಿಣಗಳು 3 ವಿಕೆಟ್ ಕಳೆದುಕೊಂಡು 227 ರನ್ಗಳಿಸಿದೆ. ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ದಕ್ಷಿಣ ಆಫ್ರಿಕಾ ರಿಲೀ ರೊಸೊವ್ ಅವರ ಆಕರ್ಷಕ ಶತಕ ಮತ್ತು ಕ್ವಿಂಟನ್ ಡಿ ಕಾಕ್ ಅರ್ಧ ಶತಕದ ನೆರವಿನಿಂದ ಭಾರತಕ್ಕೆ 228 ರನ್ ಗುರಿ ನೀಡಿದೆ.
ಆಫ್ರಿಕಾ ನಾಯಕ ಬವುಮಾ ವಿಕೇಟ್ ಪಡೆದು ಉಮೇಶ್ ಯಾದವ್ ಆರಂಭಿಕ ಆಘಾತ ನೀಡಿದರಾದರೂ, ನಂತರ ಬಂದ ರಿಲೀ ರೊಸೊವ್, ಡಿ ಕಾಕ್ ರೊಂದಿಗೆ ಉತ್ತಮ ಇನ್ನಿಂಗ್ಸ್ ಕಟ್ಟಿದರು. ಈ ಜೋಡಿ ಐವತ್ತುಕ್ಕೂ ಹೆಚ್ಚು ರನ್ ಜೊತೆಯಾಟ ಮಾಡುವ ಮೂಲಕ ತಂಡದ ಬೃಹತ್ ಮೊತ್ತಕ್ಕೆ ಸಹಕರಿಸಿದರು.
ಡಿ ಕಾಕ್ ತಾಳ್ಮೆಯ ಆಟವಾಡಿ 43 ಎಸೆತದಲ್ಲಿ 6 ಬೌಂಡರಿ ಮತ್ತು 4 ಸಿಕ್ಸರ್ನಿಂದ 68 ರನ್ ಗಳಿಸಿದರು. ರಿಲೀ ರೊಸೊವ್ ಡಿ ಕಾಕ್ ಔಟ್ ಆದ ನಂತರ ಬಿರುಸಿನ ಆಟಕ್ಕೆ ಮುಂದಾದರು. ಟ್ರಿಸ್ಟಾನ್ ಸ್ಟಬ್ಸ್(23) ನಿಧಾನಗತಿಯಲ್ಲಿ ಆಡಿ ಕ್ರಿಸ್ನ್ನು ರಿಲೀಗೆ ಬಿಟ್ಟುಕೊಡುತ್ತಿದ್ದರು.