ಕೇಪ್ ಟೌನ್:ಭಾರತ ಮತ್ತುದಕ್ಷಿಣ ಆಫ್ರಿಕಾ ಮಧ್ಯೆ ಇಲ್ಲಿ ನಡೆಯುತ್ತಿರುವ 3ನೇ ಮತ್ತು ಕೊನೆಯ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ಪಂದ್ಯದ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಭಾರತ ತನ್ನ 2ನೇ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸುವುದರೊಂದಿಗೆ, ವಿಕೆಟ್ ಕೀಪರ್ ರಿಷಭ್ ಪಂತ್ರ ಶತಕ ಸಾಹಸದಿಂದ 198 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಒಪ್ಪಿಸಿತು.
ಮೊದಲ ಇನ್ನಿಂಗ್ಸ್ನಲ್ಲಿ ಪಡೆದ 14 ರನ್ಗಳ ಮುನ್ನಡೆ ಸೇರಿ 212 ರನ್ಗಳ ಟಾರ್ಗೆಟ್ ಬೆನ್ನಟ್ಟಿರುವ ದಕ್ಷಿಣ ಆಫ್ರಿಕಾ 4ನೇ ದಿನದಾಟದ ಅಂತ್ಯಕ್ಕೆ 2 ವಿಕೆಟ್ ನಷ್ಟಕ್ಕೆ 101 ರನ್ ಗಳಿಸಿ ಸುಭದ್ರ ಸ್ಥಿತಿಯಲ್ಲಿದೆ. ಇಂದು ಕೊನೆಯ ದಿನದಾಟ ಬಾಕಿ ಉಳಿದಿದ್ದು, ದಕ್ಷಿಣ ಆಫ್ರಿಕಾ ಗೆಲುವಿಗೆ 111 ರನ್ಗಳು ಮಾತ್ರವೇ ಬೇಕಿದೆ.
ಪಂಥ್ 100, ಕೊಹ್ಲಿ 29 ಉಳಿದ 9 ಆಟಗಾರರಿಂದ 41
ಇನ್ನು ಭಾರತ ಬ್ಯಾಟ್ಸಮನ್ಗಳು 2ನೇ ಇನ್ನಿಂಗ್ಸ್ನಲ್ಲಿ ಎಷ್ಟರ ಮಟ್ಟಿಗೆ ವೈಫಲ್ಯ ಅನುಭವಿಸಿದರು ಎಂದರೆ, ವಿಕೆಟ್ ಕೀಪರ್ ರಿಷಭ್ ಪಂತ್ ಏಕಾಂಗಿ ಹೋರಾಟ ನಡೆಸಿ ಕೆಚ್ಚೆದೆಯ 100 ರನ್ ಬಾರಿಸಿದರೆ, ನಾಯಕ ವಿರಾಟ್ ಕೊಹ್ಲಿ ಹೋರಾಟದ 29 ರನ್ ಗಳಿಸಿದರು. ಉಳಿದ 9 ಬ್ಯಾಟ್ಸಮನ್ಗಳು ಸೇರಿ ಕಲೆಹಾಕಿದ್ದು, ಕೇವಲ 41 ರನ್ ಮಾತ್ರ. ಇದರಲ್ಲಿ ಕೆ.ಎಲ್. ರಾಹುಲ್ 10 ರನ್ ಬಾರಿಸಿ ಎರಡಂಕಿ ಮೊತ್ತ ಗಳಿಸಿದ್ದು ಬಿಟ್ಟರೆ, ಇನ್ನು ಎಂಟು ಬ್ಯಾಟರ್ಗಳು ಒಂದಂಕಿ ಮೊತ್ತದಲ್ಲೇ ಔಟಾಗಿದ್ದಾರೆ.