ಕರ್ನಾಟಕ

karnataka

ETV Bharat / sports

ಭಾರತದ ವಿರುದ್ಧ ಸರಣಿ ಗೆದ್ದ ಆಫ್ರಿಕಾಗೆ ಶಾಕ್​.. ನಿಧಾನಗತಿ ಬೌಲಿಂಗ್​ ಮಾಡಿದ್ದಕ್ಕೆ ಬಿತ್ತು ದಂಡ!

South Africa fined for slow over rate: ಟೀಂ ಇಂಡಿಯಾ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ಮಾಡಿದ್ದಕ್ಕಾಗಿ ದಕ್ಷಿಣ ಆಫ್ರಿಕಾ ತಂಡಕ್ಕೆ ಪಂದ್ಯದ ಶೇ. 20ರಷ್ಟು ದಂಡ ವಿಧಿಸಲಾಗಿದೆ.

South Africa fined for slow over rate
South Africa fined for slow over rate

By

Published : Jan 22, 2022, 8:47 PM IST

ಪಾರ್ಲ್​(ದಕ್ಷಿಣ ಆಫ್ರಿಕಾ):ಪ್ರವಾಸಿ ಭಾರತದ ವಿರುದ್ಧ ನಡೆದ ಎರಡನೇ ಏಕದಿನ ಪಂದ್ಯದಲ್ಲಿ 7 ವಿಕೆಟ್​ಗಳ ಭರ್ಜರಿ ಗೆಲುವು ದಾಖಲು ಮಾಡುವ ಮೂಲಕ ದಕ್ಷಿಣ ಆಫ್ರಿಕಾ ಸರಣಿ ಕೈವಶ ಮಾಡಿಕೊಂಡಿದೆ. ಇದರ ಬೆನ್ನಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಯಿಂದ ದಂಡಕ್ಕೊಳಗಾಗಿದೆ.

ಪಾರ್ಲ್​ನ ಬೋಲ್ಯಾಂಡ್​ ಪಾರ್ಕ್​​ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡ ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡದ ಕಾರಣಕ್ಕಾಗಿ ಪಂದ್ಯದ ಶೇ. 20ರಷ್ಟು ದಂಡ ತೆರಬೇಕಾಗಿದೆ. ಇದಕ್ಕೆ ಸಂಬಂಧಿಸಿದಂತೆ ಐಸಿಸಿ ಪ್ರಕಟಣೆ ಸಹ ಹೊರಡಿಸಿದೆ.

ಇದನ್ನೂ ಓದಿರಿ:ಮಾರ್ಚ್​ ಕೊನೆ ವಾರದಿಂದ IPL​ ಹಬ್ಬ.. ಭಾರತದಲ್ಲೇ ಟೂರ್ನಿ ಬಹುತೇಕ ಖಚಿತ ಎಂದ ಜಯ್​ ಶಾ

ಉಭಯ ತಂಡಗಳ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ 50 ಓವರ್​ ಎಸೆಯಲು ಆಫ್ರಿಕಾಗೆ 4ಗಂಟೆ ಸಮಯವಕಾಶ ನೀಡಲಾಗಿತ್ತು. ಆದರೆ, ಕೊನೆ ಓವರ್​​ ಎಸೆಯಲು ನೀಡಿದ್ದ ಅವಧಿಗಿಂತ ಹೆಚ್ಚಿನ ಸಮಯ ತೆಗೆದುಕೊಂಡಿದೆ. ಹೀಗಾಗಿ ಮ್ಯಾಚ್​ ರೆಫರಿ ನೀಡಿರುವ ಮಾಹಿತಿ ಪ್ರಕಾರ ಐಸಿಸಿ ದಂಡ ವಿಧಿಸಿದೆ. ಐಸಿಸಿ ನೀತಿ ಸಂಹಿತೆ ಸೆಕ್ಷನ್​ 2.22ರ ಪ್ರಕಾರ ನಿಗದಿತ ಸಮಯದಲ್ಲಿ ಬೌಲಿಂಗ್ ಮಾಡಬೇಕು. ಸಮಯ ಮೀರಿದರೆ ಪ್ರತಿ ಆಟಗಾರರ ಹಾಗೂ ಸಹಾಯಕ ಸಿಬ್ಬಂದಿಗೆ ದಂಡ ವಿಧಿಸಲಾಗುತ್ತದೆ.

ಪ್ರವಾಸಿ ಭಾರತದ ವಿರುದ್ಧ ನಡೆಯುತ್ತಿರುವ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಹರಿಣಗಳ ತಂಡ ಈಗಾಗಲೇ 2-0 ಅಂತರದಲ್ಲಿ ಸರಣಿ ಕೈವಶ ಮಾಡಿಕೊಂಡಿದ್ದು, ನಾಳೆ ನಡೆಯುವ ಅನೌಪಚಾರಿಕ ಪಂದ್ಯದಲ್ಲಿ ಭಾರತವನ್ನು ಎದುರಿಸಲಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details