ಕರ್ನಾಟಕ

karnataka

ETV Bharat / sports

ಐರ್ಲೆಂಡ್​ ವಿರುದ್ಧ ಟಿ-20 ಗೆದ್ದು ಬೀಗಿದ ದಕ್ಷಿಣ ಆಫ್ರಿಕಾ - South Africa-Ireland T20

ಮಲಹೈಡ್‌ನಲ್ಲಿ ನಡೆದ ಟಿ-20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಐರ್ಲೆಂಡ್​ ವಿರುದ್ಧ ಮೊದಲ ಬಾರಿ ಗೆದ್ದಿದೆ.

South Africa
ದಕ್ಷಿಣ ಆಫ್ರಿಕಾ-ಐರ್ಲೆಂಡ್​

By

Published : Jul 20, 2021, 10:42 AM IST

Updated : Jul 20, 2021, 11:11 AM IST

ಡಬ್ಲಿನ್:ದಕ್ಷಿಣ ಆಫ್ರಿಕಾ ತಂಡವು ಐರ್ಲೆಂಡ್​ ವಿರುದ್ಧ ಮೊದಲ ಬಾರಿ ಟಿ-20 ಪಂದ್ಯ ಗೆದ್ದು ಬೀಗಿದೆ. ಮಲಹೈಡ್‌ನಲ್ಲಿ ನಡೆದ ಆಟದಲ್ಲಿ 33 ರನ್​ಗಳಿಂದ ದಕ್ಷಿಣ ಆಫ್ರಿಕಾ ಗೆಲುವಿನ ನಗೆ ಬೀರಿದೆ.

ಕೊನೆಯ ಓವರ್‌ನಲ್ಲಿ ಟೈಲೆಂಡರ್ ಕಗಿಸೊ ರಬಾಡಾ ಬಾರಿಸಿದ ನಾಲ್ಕು ಬೌಂಡರಿಗಳಿಂದ ದಕ್ಷಿಣ ಆಫ್ರಿಕಾ ತಂಡವು 7 ವಿಕೆಟ್​ ನಷ್ಟಕ್ಕೆ 165 ರನ್​ ಗಳಿಸಿದೆ. ಈ ಬಳಿಕ ಗುರಿ ಬೆನ್ನಟ್ಟಿದ ಐರ್ಲೆಂಡ್​ 8 ಓವರ್​ಗೆ 5 ವಿಕೆಟ್​ ಕಳೆದುಕೊಂಡು ಕೇವಲ 46 ರನ್​ ಗಳಿಸಲಷ್ಟೇ ಶಕ್ತವಾಯಿತು. ಆದರೆ, ಆ ಬಳಿಕ ಉತ್ತಮ ಪ್ರದರ್ಶನ ತೋರಿ 9 ವಿಕೆಟ್​ ನಷ್ಟಕ್ಕೆ 132 ರನ್​ ಗಳಿಸಿದರು. ಆದರೆ, 33 ರನ್​ಗಳಿಂದ ತಂಡ ಮುಗ್ಗರಿಸಿತು.

ಕಳೆದ ವಾರ 1-1 ಅಂಕಗಳಲ್ಲಿ ಡ್ರಾ ಮಾಡಿಕೊಂಡಿದ್ದವು. ಇದೀಗ ದಕ್ಷಿಣ ಆಫ್ರಿಕಾ ಗೆದ್ದು ಬೀಗಿದೆ.

Last Updated : Jul 20, 2021, 11:11 AM IST

ABOUT THE AUTHOR

...view details