ಸೇಂಟ್ ಜಾರ್ಜ್ (ಗ್ರೆನೆಡಾ):ದಕ್ಷಿಣ ಆಫ್ರಿಕಾ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ 5 ಪಂದ್ಯಗಳ ಟಿ-20 ಸರಣಿಯ 2ನೇ ಪಂದ್ಯದಲ್ಲಿ ದ.ಆಫ್ರಿಕಾಗೆ ರೋಚಕ ಗೆಲುವು ದಾಖಲಿಸಿದೆ. ಈ ಗೆಲುವಿನ ಮೂಲಕ ಸರಣಿಯಲ್ಲಿ ಎರಡು ತಂಡಗಳು 1-1 ಪಾಯಿಂಟುಗಳ ಸಮಬಲ ಸಾಧಿಸಿದವು.
ಟಾಸ್ ಗೆದ್ದ ವಿಂಡಿಸ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಬ್ಯಾಟಿಂಗ್ಗೆ ಇಳಿದ ದಕ್ಷಿಣ ಆಫ್ರಿಕಾ ಮೊದಲ ವಿಕೆಟ್‌ಗೆ ರೀಜಾ ಹೆಂಡ್ರಿಕ್ಸ್ (42) ಮತ್ತು ಕ್ವಿಂಟನ್ ಡಿ ಕಾಕ್ (26) 73 ರನ್ ಗಳಿಸಿದರು. ನಾಯಕ ಬವುಮಾ 33 ಎಸೆತಗಳಲ್ಲಿ 46 ರನ್ ಗಳಿಸಿ ತಂಡದ ಮೊತ್ತವನ್ನು 150ರ ಗಡಿ ದಾಟಿಸುವಲ್ಲಿ ನೆರವಾದರು. ಅಂತಿಮವಾಗಿ ಸೌತ್ ಆಫ್ರಿಕಾ ತಂಡ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ಕಳೆದುಕೊಂಡು 166 ರನ್ಗಳಿಸಿತು.
ಈ ಗುರಿ ಬೆನ್ನತ್ತಿದ ಆತಿಥೇಯ ತಂಡದ ಎವಿನ್ ಲೂಯಿಸ್ (21) ಮತ್ತು ಆ್ಯಂಡ್ರೋ ಫ್ಲೆಚರ್ (35) ಮೊದಲ ವಿಕೆಟ್‌ಗೆ 31 ರನ್ಗಳ ಜೊತೆಯಾಟವಾಡಿದರು. ನಂತರ ಬಂದ ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ಗಳು ರನ್ ಗಳಿಸಲು ಪರದಾಡಿದರು. ಕೊನೆಯಲ್ಲಿ ಫ್ಯಾಬಿಯನ್ ಅಲೆನ್ ಮತ್ತು ಹೋಲ್ಡರ್ ಬಿರುಸಿನ ಆಟವಾಡಿ ತಂಡಕ್ಕೆ ಗೆಲವು ತಂದುಕೊಡುವ ನಿರೀಕ್ಷೆಯಲ್ಲಿದ್ದರು. ಆದರೆ ರಬಾಡ ಅದ್ಭುತ ಬೌಲಿಂಗ್ಗೆ ವಿಂಡೀಸ್ ಸೋಲೊಪ್ಪಿಕೊಂಡಿತು.
ಅಂತಿಮವಾಗಿ ವೆಸ್ಟ್ ಇಂಡೀಸ್ ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 150 ರನ್ಗಳಿಸಲಷ್ಟೇ ಶಕ್ತವಾಯಿತು. ಕೊನೆಯಲ್ಲಿ ಮಿಂಚಿನ ಆಟವಾಡಿದ ಅಲೆನ್ 12 ಎಸೆತಗಳಲ್ಲಿ 5 ಸಿಕ್ಸರ್ ನೆರವಿನಿಂದ 34 ರನ್ಗಳಿಸಿದರು.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ಆಫ್ರಿಕಾ- 20 ಓವರ್ಗಳಲ್ಲಿ 166/7 (ರೀಜಾ ಹೆಂಡ್ರಿಕ್ಸ್ 42, ಡಿ ಕಾಕ್ 26, ಬಾವುಮಾ 46, ಕೆವಿನ್ ಸಿಂಕ್ಲೇರ್ 23/2, ಒಬೆಡ್ ಮೆಕಾಯ್ 25/3) ವೆಸ್ಟ್ ಇಂಡಿಸ್ 20 ಓವರ್ಗಳಲ್ಲಿ 150/9 (ಲೂಯಿಸ್ 21, ಫ್ಲೆಚರ್ 35, ಫ್ಯಾಬಿಯನ್ ಅಲೆನ್ 34, ರಬಾಡಾ 37/3, ಜಾರ್ಜ್ ಲಿಂಡೆ 19/2 )