ಕರ್ನಾಟಕ

karnataka

ETV Bharat / sports

ಮಹರಾಜ್ ಹ್ಯಾಟ್ರಿಕ್: 4 ವರ್ಷಗಳ ನಂತರ ವಿದೇಶದಲ್ಲಿ ಟೆಸ್ಟ್​ ಸರಣಿ ಗೆದ್ದ ದಕ್ಷಿಣ ಆಫ್ರಿಕಾ - ಕಗಿಸೋ ರಬಾಡ

ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್​ನಲ್ಲಿ ಡಿಕಾಕ್ (96), ಎಲ್ಗರ್​(77) ಅರ್ಧಶತಕದ ನೆರವಿನಿಂದ 298 ರನ್​ಗಳಿಸಿತ್ತು. ಇದಕ್ಕುತ್ತರವಾಗಿ ವಿಂಡೀಸ್​ ಹರಿಣಗಳ ದಾಳಿಗೆ ಸಿಲುಕಿ ಕೇವಲ 149 ರನ್​ಗಳಿಗೆ ಸರ್ವ ಪತನಗೊಂಡಿತು. ಬ್ಲಾಕ್​ವುಡ್​ 49 ಮತ್ತು ಶಾಯ್ ಹೋಪ್ 43 ರನ್​ಗಳಿಸಿದರು.

ಟೆಸ್ಟ್​ ಸರಣಿ ಗೆದ್ದ ದಕ್ಷಿಣ ಆಫ್ರಿಕಾ
ಟೆಸ್ಟ್​ ಸರಣಿ ಗೆದ್ದ ದಕ್ಷಿಣ ಆಫ್ರಿಕಾ

By

Published : Jun 22, 2021, 3:19 PM IST

ಸೇಂಟ್ ಲೂಸಿಯಾ: ಕೇಶವ್ ಮಹರಾಜ್ ಹ್ಯಾಟ್ರಿಕ್ ಹಾಗೂ ರಬಾಡ ಆಲ್​ರೌಂಡ್​ ಪ್ರದರ್ಶನದ ನೆರವಿನಿಂದ ಅತಿಥೇಯ ವೆಸ್ಟ್​ ಇಂಡೀಸ್​ ವಿರುದ್ಧ ದಕ್ಷಿಣ ಆಫ್ರಿಕಾ ತಂಡ 2-0ಯಲ್ಲಿ ಟೆಸ್ಟ್​ ಸರಣಿ ವಶಪಡಿಸಿಕೊಂಡಿದೆ. ಇದು ಕಳೆದ ನಾಲ್ಕು ವರ್ಷಗಳಲ್ಲೇ ಮೊದಲ ವಿದೇಶಿ ಟೆಸ್ಟ್​ ಸರಣಿಯಾಗಿದೆ.

ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್​ನಲ್ಲಿ ಡಿಕಾಕ್ (96), ಎಲ್ಗರ್​(77) ಅರ್ಧಶತಕದ ನೆರವಿನಿಂದ 298 ರನ್​ಗಳಿಸಿತ್ತು. ಇದಕ್ಕುತ್ತರವಾಗಿ ವಿಂಡೀಸ್​ ಹರಿಣಗಳ ದಾಳಿಗೆ ಸಿಲುಕಿ ಕೇವಲ 149 ರನ್​ಗಳಿಗೆ ಸರ್ವ ಪತನಗೊಂಡಿತು. ಬ್ಲಾಕ್​ವುಡ್​ 49 ಮತ್ತು ಶಾಯ್ ಹೋಪ್ 43 ರನ್​ಗಳಿಸಿದರು.

149 ರನ್​ಗಳ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದು 2ನೇ ಇನ್ನಿಂಗ್ಸ್​ನಲ್ಲಿ 174ಕ್ಕೆ ದಕ್ಷಿಣ ಆಫ್ರಿಕ ಕುಸಿದರೂ ಅತಿಥೇಯ ತಂಡಕ್ಕೆ 324 ರನ್​ಗಳ ಕಠಿಣ ಗುರಿ ನೀಡುವಲ್ಲಿ ಯಶಸ್ವಿಯಾಯಿತು. ಡಾಸೆನ್​ ಅಜೇಯ 75 ರನ್​ಗಳಿಸಿದರೆ, ರಬಾಡ 40 ರನ್​ಗಳಿಸಿದ್ದರು. ವೆಸ್ಟ್​ ಇಂಡೀಸ್ ಪರ ಕೆಮರ್ ರೋಚ್​ 4, ಕೈಲ್ ಮೇಯರ್ಸ್​ 3 ವಿಕೆಟ್​ ಪಡೆದಿದ್ದರು.

ಇನ್ನು 324 ರನ್​ಗಳ ಗುರಿ ಬೆನ್ನತ್ತಿದ ವಿಂಡೀಸ್​ ಎರಡನೇ ಇನ್ನಿಂಗ್ಸ್​ನಲ್ಲಿ 165 ರನ್​ಗಳಿಗೆ ಆಲೌಟ್ ಆಗುವ ಮೂಲಕ 158 ರನ್​ಗಳ ಜಯ ಸಾಧಿಸಿ 2-0ಯಲ್ಲಿ ಟೆಸ್ಟ್​ ಸರಣಿ ವಶಪಡಿಸಿಕೊಂಡಿತು. ಆರಂಭಿಕ ಬ್ಯಾಟ್ಸ್​ಮನ್ ಕೀರನ್ ಪೊವೆಲ್ 51 ರನ್​ಗಳಿಸಿ ಗರಿಷ್ಠ ಸ್ಕೋರರ್​ ಎನಿಸಿಕೊಂಡರು. ಸ್ಪಿನ್ನರ್ ಕೇಶವ್ ಮಹಾರಾಜ್ ಹ್ಯಾಟ್ರಿಕ್ ಸೇರಿದಂತೆ 5 ವಿಕೆಟ್​ ಪಡೆದರೆ, ರಬಾಡ 3 ವಿಕೆಟ್​ ಪಡೆದು ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

4 ವರ್ಷಗಳ ನಂತರ ವಿದೇಶದಲ್ಲಿ ಸರಣಿ ಜಯ:

ದಕ್ಷಿಣ ಆಫ್ರಿಕಾ ತಂಡ ಈ ಸರಣಿ ಜಯದೊಂದಿಗೆ 4 ವರ್ಷಗಳ ಬಳಿಕ ವಿದೇಶದಲ್ಲಿ ಟೆಸ್ಟ್​ ಗೆದ್ದ ಸಾಧನೆ ಮಾಡಿತು. 2017ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ಕೊನೆಯ ಬಾರಿ ವಿದೇಶಿ ನೆಲದಲ್ಲಿ ಟೆಸ್ಟ್​ ಸರಣಿ ಗೆದ್ದಿತ್ತು.

ಇದನ್ನು ಓದಿ:ಯಾವುದೇ ಪ್ರಮುಖ ಪಂದ್ಯಗಳು ಇಂಗ್ಲೆಂಡ್​ನಲ್ಲಿ ನಡೆಯಬಾರದು: ಕೆವಿನ್ ಪೀಟರ್​ಸನ್ ಆಕ್ರೋಶ

ABOUT THE AUTHOR

...view details