ಲಂಡನ್: ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಇಂದು 50ನೇ ವರ್ಷದ ಹುಟ್ಟು ಹಬ್ಬದ ಸಂಭ್ರಮದಲ್ಲಿ ಇದ್ದಾರೆ. ತಮ್ಮ ಬದುಕಿನ ಅರ್ಧ ಶತಕ ಬಾರಿಸಿರುವ ದಾದಾ, ಕುಟುಂಬದೊಂದಿಗೆ ಲಂಡನ್ನಲ್ಲಿ ಬರ್ತ್ ಡೇ ಸೆಲೆಬ್ರೆಷನ್ ಮಾಡಿದ್ದಾರೆ.
ಈ ಹಿಂದೆ ಟೀಂ ಇಂಡಿಯಾದ ನಾಯಕರೂ ಆಗಿದ್ದ ಗಂಗೂಲಿ ಪತ್ನಿ ಡೋನಾ ಮತ್ತು ಪುತ್ರಿ ಸನಾ ಅವರೊಂದಿಗೆ ಮಧ್ಯರಾತ್ರಿಯೇ ಕೇಕ್ ಕತ್ತರಿಸುವ ಮೂಲಕ 50ನೇ ಜನ್ಮ ದಿನ ಆಚರಿಸಿಕೊಂಡಿದ್ದಾರೆ. ಇದೇ ವೇಳೆ, ಡೋನಾ, ಸನಾ ಹಾಗೂ ಫಾನ್ಸ್ ಜೊತೆಗೆ 'ಲಂಡನ್ ತುಮಕ್ಡಾ' ಹಾಡಿಗೆ ಸ್ಟೆಪ್ಸ್ ಹಾಕಿದ್ದಾರೆ. ಇದರ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.