ಕರ್ನಾಟಕ

karnataka

ETV Bharat / sports

ವಿರಾಟ್​ ಕೊಹ್ಲಿಯ ಆ ನಿರ್ಧಾರ ನನಗೆ ಅಚ್ಚರಿ ತಂದಿತ್ತು : ಸೌರವ್​ ಗಂಗೂಲಿ - ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ

ನಾನು ಕೂಡ ಆರು ವರ್ಷಗಳ ಕಾಲ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದೇನೆ. ಅದು ಹೊರಗಡೆಯಿಂದ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಗೌರವ ಎಲ್ಲವೂ ದೊರೆಯುತ್ತದೆ. ಆದರೆ, ಒಳಗಡೆಯಿಂದ ನೀವು ಸಾಕಷ್ಟು ಒತ್ತಡವನ್ನು ಅನುಭವಿಸುತ್ತೀರಿ. ಇದು ಎಲ್ಲಾ ನಾಯಕರಿಗೂ ಅನುಭವಕ್ಕೆ ಬಂದಿರುತ್ತದೆ..

ಸೌರವ್​ ಗಂಗೂಲಿ
ಸೌರವ್​ ಗಂಗೂಲಿ

By

Published : Oct 23, 2021, 4:54 PM IST

ದುಬೈ : ಟಿ-20 ವಿಶ್ವಕಪ್​ ಬಳಿಕ ಟೀಂ​ ಇಂಡಿಯಾ ಟಿ-20 ತಂಡದ ನಾಯಕತ್ವದಿಂದ ಕೆಳಗಿಳಿಯುವ ನಿರ್ಧಾರವನ್ನ ವಿರಾಟ್​ ಕೊಹ್ಲಿ ವ್ಯಕ್ತಪಡಿಸಿದ್ದಾರೆ. ಆದರೆ, ನಾವು ಅವರ ಮೇಲೆ ಯಾವುದೇ ಒತ್ತಡ ಹೇರಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ವಿರಾಟ್ ಕೊಹ್ಲಿಯ ಈ ನಿರ್ಧಾರ ಅಭಿಮಾನಿಗಳಿಗೆ ಮಾತ್ರವಲ್ಲ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೂ ಕೂಡ ಆಶ್ಚರ್ಯ ಮೂಡಿಸಿತ್ತಂತೆ. ಈ ವಿಚಾರವನ್ನು ಸ್ವತಃ ಸೌರವ್ ಗಂಗೂಲಿ ಬಹಿರಂಗಪಡಿಸಿದ್ದಾರೆ. ಬಿಸಿಸಿಐ ಯಾವುದೇ ಒತ್ತಡವನ್ನು ಹಾಕಿ ಟಿ20 ನಾಯಕತ್ವದಿಂದ ವಿರಾಟ್ ಕೊಹ್ಲಿಯನ್ನು ಕೆಳಗಿಳಿಸಿಲ್ಲ. ಸ್ವತಃ ವಿರಾಟ್ ಕೊಹ್ಲಿಯೇ ಈ ನಿರ್ಧಾರವನ್ನು ತೆಗೆದುಕೊಂಡಿದ್ದರು ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

"ಕೊಹ್ಲಿ ಈ ನಿರ್ಧಾರವನ್ನು ತೆಗೆದುಕೊಂಡಾಗ ನಾನು ಆಶ್ಚರ್ಯಗೊಂಡಿದ್ದೆ. ಇಂಗ್ಲೆಂಡ್ ಪ್ರವಾಸದ ನಂತರವೇ ಅವರು ಈ ನಿರ್ಧಾರವನ್ನು ತೆಗೆದುಕೊಂಡಿದ್ದರು. ಅದಕ್ಕಾಗಿ ಅವರ ಮೇಲೆ ನಾವು ಯಾವುದೇ ಒತ್ತಡ ಹೇರಿರಲಿಲ್ಲ. ನಾವು ಅವರ ಬಳಿ ಈ ಬಗ್ಗೆ ಏನನ್ನೂ ಹೇಳಿರಲಿಲ್ಲ" ಎಂದು ಗಂಗೂಲಿ ಈ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.

"ನಾನು ಕೂಡ ಆರು ವರ್ಷಗಳ ಕಾಲ ನಾಯಕನಾಗಿ ತಂಡವನ್ನು ಮುನ್ನಡೆಸಿದ್ದೇನೆ. ಅದು ಹೊರಗಡೆಯಿಂದ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಗೌರವ ಎಲ್ಲವೂ ದೊರೆಯುತ್ತದೆ. ಆದರೆ, ಒಳಗಡೆಯಿಂದ ನೀವು ಸಾಕಷ್ಟು ಒತ್ತಡವನ್ನು ಅನುಭವಿಸುತ್ತೀರಿ. ಇದು ಎಲ್ಲಾ ನಾಯಕರಿಗೂ ಅನುಭವಕ್ಕೆ ಬಂದಿರುತ್ತದೆ. ಇದು ಕೇವಲ, ತೆಂಡೂಲ್ಕರ್, ಗಂಗೂಲಿ, ಧೋನಿ ಅಥವಾ ಕೊಹ್ಲಿಗೆ ಮಾತ್ರವಲ್ಲ. ಮುಂಬರುವ ನಾಯಕರಿಗೂ ಅನುಭವಕ್ಕೆ ಬರುತ್ತದೆ. ಅದು ನಿಜಕ್ಕೂ ಕಠಿಣವಾದ ಕರ್ತವ್ಯ" ಎಂದು ಗಂಗೂಲಿ ಪ್ರತಿಕ್ರಿಯಿಸಿದ್ದಾರೆ.

ABOUT THE AUTHOR

...view details