ಕರ್ನಾಟಕ

karnataka

ETV Bharat / sports

ಅದು ಆಯ್ಕೆಗಾರರಿಗೆ ಬಿಟ್ಟಿದ್ದು: ಬೇರೆ ಆಟಗಾರರನ್ನು ಇಂಗ್ಲೆಂಡ್​ಗೆ ಕಳುಹಿಸುವ ಬಗ್ಗೆ ಗಂಗೂಲಿ ಪ್ರತಿಕ್ರಿಯೆ - ಶುಬ್ಮನ್​ ಗಿಲ್ ಗಾಯ

ಇಂಗ್ಲೆಂಡ್​​ನಲ್ಲಿರುವ ಟೀಂ ಇಂಡಿಯಾದ ಆರಂಭಿಕ ಆಟಗಾರ ಶುಬ್ಮನ್ ಗಿಲ್​ ಗಾಯಗೊಂಡಿದ್ದು, ಅವರ ಸ್ಥಾನಕ್ಕೆ ಬೇರೆ ಆಟಗಾರನನ್ನು ಭಾರತದಿಂದ ಕಳುಹಿಸಬೇಕು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಗಂಗೂಲಿ ಪ್ರತಿಕ್ರಿಯಿಸಿದರು.

Sourav Ganguly
Sourav Ganguly

By

Published : Jul 8, 2021, 8:28 PM IST

ಕೋಲ್ಕತ್ತಾ:ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಸರಣಿಯಲ್ಲಿ ಭಾಗಿಯಾಗಲು ಟೀಂ ಇಂಡಿಯಾ ಈಗಾಗಲೇ ಆಂಗ್ಲರ ನಾಡಿನಲ್ಲಿದೆ. ಆದ್ರೆ ಸರಣಿ ಆರಂಭಗೊಳ್ಳುವುದಕ್ಕೂ ಮೊದಲೇ ಆರಂಭಿಕ ಆಟಗಾರ ಶುಬ್ಮನ್​ ಗಿಲ್​ ಗಾಯಗೊಂಡು ಸರಣಿಯಿಂದ ಹೊರಬಿದ್ದಿದ್ದಾರೆ. ಹೀಗಾಗಿ ಇಂಗ್ಲೆಂಡ್​ಗೆ ಬದಲಿ ಆಟಗಾರರನ್ನು ಕಳುಹಿಸಬೇಕೆಂಬ ಮಾತು ಕೇಳಿ ಬರುತ್ತಿದ್ದು, ಬಿಸಿಸಿಐ ಅಧ್ಯಕ್ಷ ಗಂಗೂಲಿ ಇದೇ ಮೊದಲ ಸಲ ಈ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಟೀಂ ಇಂಡಿಯಾ ಕ್ರಿಕೆಟ್​

49ನೇ ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಬಿಸಿಸಿಐ ಅಧ್ಯಕ್ಷ ಸೌರವ್​ ಗಂಗೂಲಿ, ಇಂಗ್ಲೆಂಡ್​ಗೆ ಬೇರೆ ಆಟಗಾರರನ್ನು ಕಳುಹಿಸಬೇಕೋ, ಬೇಡವೋ ಎಂಬುದು ಆಯ್ಕೆ ಸಮಿತಿಗೆ ಬಿಟ್ಟಿರುವ ವಿಚಾರ ಎಂದಿದ್ದಾರೆ. ಇದೇ ವೇಳೆ ಭಾರತದಲ್ಲಿ ಕೋವಿಡ್​ ಹೆಚ್ಚಾಗಿರುವ ಕಾರಣ ವಿದೇಶದಲ್ಲಿ ಐಪಿಎಲ್​ ಆಯೋಜನೆ ಮಾಡಲು ನಿರ್ಧರಿಸಲಾಗಿದ್ದು, ಇದರ ಬೆನ್ನಲ್ಲೇ ಟಿ-20 ವಿಶ್ವಕಪ್​ ಸಹ ನಡೆಯಲಿದೆ ಎಂದಿದ್ದಾರೆ.

ಶುಬ್ಮನ್​ ಗಾಯಗೊಳ್ಳುತ್ತಿದ್ದಂತೆ ಪೃಥ್ವಿ ಶಾ ಹಾಗೂ ದೇವದತ್​ ಪಡಿಕ್ಕಲ್ ಅವರನ್ನು ಇಂಗ್ಲೆಂಡ್​ಗೆ ಕಳುಹಿಸುವಂತೆ ಭಾರತೀಯ ಕ್ರಿಕೆಟ್​ ತಂಡದ ಆಡಳಿತ ಮಂಡಳಿ ಮನವಿ ಮಾಡಿತ್ತು. ಆದರೆ ಇದಕ್ಕೆ ಆಯ್ಕೆ ಸಮಿತಿ ಹಾಗೂ ಬಿಸಿಸಿಐ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಇದೇ ಮೊದಲ ಸಲ ಮಾತನಾಡಿರುವ ಗಂಗೂಲಿ ಈ ರೀತಿಯಾಗಿ ಹೇಳಿಕೊಂಡಿದ್ದಾರೆ. ಇದರ ಮಧ್ಯೆ ಪೃಥ್ವಿ ಹಾಗೂ ಪಡಿಕ್ಕಲ್​ ಶ್ರೀಲಂಕಾ ಪ್ರವಾಸದಲ್ಲಿ ಮುಂದುವರೆಯಲಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೋರ್ವರು ಮಾಹಿತಿ ನೀಡಿದ್ದಾರೆ. ಹೀಗಾಗಿ ಇಂಗ್ಲೆಂಡ್​ನಲ್ಲಿ ಶುಬ್ಮನ್​ ಗಿಲ್​ ಬದಲಿಗೆ ಇದೀಗ ಮಯಾಂಕ್​ ಅಗರವಾಲ್​​ ಅಥವಾ ಕೆ.ಎಲ್​ ರಾಹುಲ್​ ಓಪನರ್​ ಸ್ಥಾನ ತುಂಬುವ ಸಾಧ್ಯತೆ ಇದೆ.

ಮುಂದಿನ ವಾರದಿಂದ ಶ್ರೀಲಂಕಾ ವಿರುದ್ಧ ಏಕದಿನ ಕ್ರಿಕೆಟ್​ ಸರಣಿ ಆರಂಭಗೊಳ್ಳಲಿದ್ದು, ಅದರಲ್ಲಿ ಭಾಗಿಯಾಗಲು ಪೃಥ್ವಿ ಶಾ ಹಾಗೂ ಪಡಿಕ್ಕಲ್​​ ಲಂಕಾದಲ್ಲಿದ್ದಾರೆ.

ಇದನ್ನೂ ಓದಿರಿ: ಹಸಿವು ಮರೆಯಲು YouTube ನೋಡ್ತಿದ್ದ ಕಾರ್ಮಿಕ ಅದರಿಂದಲೇ ಈಗ ಲಕ್ಷಾಧಿಪತಿ

ABOUT THE AUTHOR

...view details