ಕೋಲ್ಕತಾ( ಪಶ್ಚಿಮ ಬಂಗಾಳ): ಬಿಸಿಸಿಐನ ಮುಖ್ಯಸ್ಥ ಮತ್ತು ಟೀಂ ಇಂಡಿಯಾ ಮಾಜಿ ನಾಯಕ ಸೌರವ್ ಗಂಗೂಲಿಗೆ 10 ಸಾವಿರ ರೂಪಾಯಿ ದಂಡವನ್ನು ವಿಧಿಸಿ ಕಲ್ಕತ್ತಾ ಹೈಕೋರ್ಟ್ ಆದೇಶ ಹೊರಡಿಸಿದೆ.
ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಮತ್ತು ನ್ಯಾಯಮೂರ್ತಿ ಅರಿಜಿತ್ ಬ್ಯಾನರ್ಜಿ ಅವರನ್ನು ಒಳಗೊಂಡ ಕಲ್ಕತ್ತಾ ಹೈಕೋರ್ಟ್‌ನ ವಿಭಾಗೀಯ ಪೀಠವು ಸೋಮವಾರ ಈ ಆದೇಶ ನೀಡಿದ್ದು, ಪಶ್ಚಿಮ ಬಂಗಾಳ ಸರ್ಕಾರಕ್ಕೂ ಮತ್ತು ಪಶ್ಚಿಮ ಬಂಗಾಳ ವಸತಿ ಮೂಲಸೌಕರ್ಯ ಅಭಿವೃದ್ಧಿ ನಿಗಮ (WBHIDCO) ಅಧಿಕಾರಿಗಳಿಗೂ ತಲಾ 50 ಸಾವಿರ ರೂಪಾಯಿ ದಂಡ ವಿಧಿಸಿದೆ.
ಕೋಲ್ಕತಾಗೆ ಸಮೀಪದಲ್ಲಿರುವ ನ್ಯೂ ಟೌನ್ ಏರಿಯಾ ಪ್ರದೇಶದಲ್ಲಿ ಶಾಲೆಯೊಂದನ್ನು ನಿರ್ಮಾಣ ಮಾಡಲು ಅನಧಿಕೃತವಾಗಿ ಸ್ಥಳವನ್ನು ಸೌರವ್ ಗಂಗೂಲಿಗೆ ನೀಡಿದ ಆರೋಪದ ವಿಚಾರಣೆ ನಡೆಸಿದ ಹೈಕೋರ್ಟ್ ಈ ತೀರ್ಪು ನೀಡಿದೆ.
ಸೌರವ್ ಗಂಗೂಲಿಗೆ ನೀಡಿರುವ ಸ್ಥಳ ಕಾನೂನಿಗೆ ವಿರುದ್ಧವಾಗಿದೆ. ಈಗಾಗಲೇ ಸ್ಥಳವನ್ನು ಸರೆಂಡರ್ ಮಾಡಿಸಿರುವ ಕಾರಣದಿಂದ ಸ್ಥಳ ಹಂಚಿಕೆ ಆದೇಶವನ್ನು ರದ್ದು ಮಾಡುವ ಅವಶ್ಯಕತೆ ಇಲ್ಲ. ರಾಜ್ಯ ಸರ್ಕಾರ ಮತ್ತು WBHIDCOಗೆ ತಲಾ 50 ಸಾವಿರ ರೂಪಾಯಿ ದಂಡ ವಿಧಿಸಲಾಗುತ್ತಿದೆ ಎಂದು ಹೈಕೋರ್ಟ್ ಹೇಳಿದೆ.
ಹೈಕೋರ್ಟ್ ಹೇಳಿದ್ದೇನು?
ದೇಶವು ಯಾವಾಗಲೂ ಕ್ರೀಡಾಪಟುಗಳ ಪರವಾಗಿ ನಿಲ್ಲುತ್ತದೆ, ವಿಶೇಷವಾಗಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ದೇಶವನ್ನು ಪ್ರತಿನಿಧಿಸುವ, ದೇಶಕ್ಕೆ ಕೀರ್ತಿ ತಂದ ಸೌರವ್ ಗಂಗೂಲಿ ಅಂಥವರ ಪರವಾಗಿ ನಾವಿರಬೇಕು ಆದರೆ, ಸಾಂವಿಧಾನಿಕವಾಗಿ ಅಲ್ಲದೇ, ಕಾನೂನಿನ ವಿರುದ್ಧವಾಗಿ ನಿವೇಶನ ಹಂಚಿಕೆಯಾಗಿರುವುದು ತಪ್ಪು ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ನ್ಯೂ ಟೌನ್ ಪಟ್ಟಣದಲ್ಲಿ ಶಾಲೆಯೊಂದನ್ನು ಸ್ಥಾಪಿಸಲು ಗಂಗೂಲಿ ಒಡೆತನದ 'ಗಂಗೂಲಿ ಶಿಕ್ಷಣ ಮತ್ತು ಕಲ್ಯಾಣ ಸಂಘ'ಕ್ಕೆ ಪಶ್ಚಿಮ ಬಂಗಾಳ ವಸತಿ ಮೂಲಸೌಕರ್ಯ ಅಭಿವೃದ್ಧಿ ನಿಗಮ ಎರಡು ಎಕರೆ ಜಮೀನು ಮಂಜೂರು ಮಾಡಿತ್ತು.
ಕ್ರೀಡಾಪಟುವಿಗೆ ನಾವು ಗೌರವಿಸುತ್ತೇವೆ, ಆದರೆ ಕಾನೂನು ಪಾಲನೆಗೇ ಮೊದಲ ಆದ್ಯತೆ
ಕ್ರಿಕೆಟ್ ನಲ್ಲಿ ದೇಶಕ್ಕೆ ಪ್ರಶಸ್ತಿಯನ್ನು ತಂದಿದ್ದಾರೆ ಎಂಬುದು ಕೂಡ ಸತ್ಯ. ಆದರೆ ಕಾನೂನಿನ ವಿಷಯಕ್ಕೆ ಬಂದಾಗ ನಮ್ಮ ಸಾಂವಿಧಾನಿಕ ಯೋಜನೆ ಎಂದರೆ ಎಲ್ಲರೂ ಸಮಾನರು ಮತ್ತು ಕಾನೂನಿನ ಮೇರೆಗೆ ಯಾರೂ ಪ್ರತ್ಯೇಕ ಎಂದು ಹೇಳಿಕೊಳ್ಳುವುದಿಲ್ಲ ಮತ್ತು ರಾಜ್ಯದಿಂದ ಪ್ರಯೋಜನಗಳನ್ನು ಪಡೆಯಲು ಸಾಧ್ಯವಿಲ್ಲ, ವಿಶೇಷವಾಗಿ ವಾಣಿಜ್ಯ ಉದ್ಯಮಗಳಿಗೆ ನಿವೇಶನಗಳ ಹಂಚಿಕೆಗಾಗಿ ಪ್ರಶ್ನೆ ಉದ್ಭವಿಸಿದಾಗ, "ಬೆಂಚ್ ಗಮನಿಸಿದೆ.
ನ್ಯೂ ಟೌನ್ ಪಟ್ಟಣದಲ್ಲಿ ಶಾಲೆಯೊಂದನ್ನು ಸ್ಥಾಪಿಸಲು ಗಂಗೂಲಿ ಒಡೆತನದ 'ಗಂಗೂಲಿ ಶಿಕ್ಷಣ ಮತ್ತು ಕಲ್ಯಾಣ ಸಂಘ'ಕ್ಕೆ ಪಶ್ಚಿಮ ಬಂಗಾಳ ವಸತಿ ಮೂಲಸೌಕರ್ಯ ಅಭಿವೃದ್ಧಿ ನಿಗಮ ಎರಡು ಎಕರೆ ಜಮೀನು ಮಂಜೂರು ಮಾಡಿತ್ತು. 2016ರಲ್ಲಿ ಇದರ ವಿರುದ್ಧ ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯೊಂದು ಸಲ್ಲಿಕೆಯಾಗಿದ್ದು, ಸತತ 8 ವರ್ಷಗಳ ವಿಚಾರಣೆ ನಂತರ ಹೈಕೋರ್ಟ್ ಈ ತೀರ್ಪು ನೀಡಿದೆ.
ಇದನ್ನೂ ಓದಿ:ಸಾಲು ಸಾಲು ಹಬ್ಬಗಳ ಸಮಯದಲ್ಲೂ ಚಿನ್ನದ ದರ ಕಡಿಮೆ ಸಾಧ್ಯತೆ.. ಕಾರಣ?