ಮುಂಬೈ:ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಮೊಹಮ್ಮದ್ ಶಮಿ ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಮಾತ್ರವಲ್ಲದೆ, ಮೈದಾನದಿಂದ ಹೊರಗೂ ಸುದ್ದಿಯಾಗುತ್ತಿದ್ದಾರೆ. ಬಹುಭಾಷಾ ನಟ ಸೋನು ಸೂದ್ ಅವರ ಕಿರಿ ಮಗ ಅಯಾನ್ಗೆ ಶಮಿ ಬ್ಯಾಟಿಂಗ್ ಟಿಪ್ಸ್ ಕೊಟ್ಟಿದ್ದಾರೆ. ಈ ವಿಡಿಯೋವನ್ನು ಸೋನು ಸೂದ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು, ವೈರಲ್ ಆಗುತ್ತಿದೆ.
ಸೋನು ಸೂದ್ ಅವರ ಮಗ ಕ್ರಿಕೆಟ್‌ನಲ್ಲಿ ವಿಶೇಶ ಆಸಕ್ತಿ ಹೊಂದಿದ್ದು, ನೆಟ್ಸ್ನಲ್ಲಿ ಅಭ್ಯಾಸ ಮಾಡುತ್ತಿದ್ದಾಗ ಶಮಿ ಆವರಿಂದ ಕೆಲವು ಸಲಹೆಗಳನ್ನು ಪಡೆದುಕೊಂಡಿದ್ದಾರೆ. ವೇಗದ ಬೌಲಿಂಗ್ನಲ್ಲಿ ಹೇಗೆ ಬ್ಯಾಟ್ ಬೀಸಬೇಕು ಎಂಬುದನ್ನು ಅವರು ತಿಳಿದುಕೊಂಡರು. ನನ್ನ ಮಗನಿಗೆ ಶಮಿ ಮಾರ್ಗದರ್ಶನ ನೀಡಿದ್ದಾರೆ. ಇದಕ್ಕಾಗಿ ಶಮಿ ಮತ್ತು ತರುಬೇತುದಾರ ದೇವೇಶ್ ಉಪಾಧ್ಯಾಯ ಅವರಿಗೆ ಧನ್ಯವಾದಗಳು ಎಂದು ಬರೆದಿರುವ ಸೂದ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಎಲ್ಲಾ ಕ್ರಿಕೆಟ್ ಅಭಿಮಾನಿಗಳಂತೆ ಸೋನು ಸೂದ್ ಕೂಡ ಇಂದು (ಭಾನುವಾರ) ನಡೆಯಲಿರುವ ಭಾರತ-ಆಸ್ಟ್ರೇಲಿಯಾ ವಿಶ್ವಕಪ್ ಫೈನಲ್ ಬಗ್ಗೆ ಉತ್ಸುಕರಾಗಿದ್ದಾರೆ.