ಕರ್ನಾಟಕ

karnataka

ETV Bharat / sports

ಬಬಲ್​ ಸೇಫ್​ ಆಗಿತ್ತು.. ಆದ್ರೆ, ಕೆಲವು ಭಾರತೀಯರು​ ನಿರ್ಬಂಧಗಳನ್ನು ಇಷ್ಟಪಡುತ್ತಿರಲಿಲ್ಲ.. ಮುಂಬೈ ಫೀಲ್ಡಿಂಗ್ ಕೋಚ್​ - ಐಪಿಎಲ್ ರದ್ದು

ಟೂರ್ನಿ ನಿಲ್ಲುವ ಸ್ವಲ್ಪ ಸಮಯದವರೆಗೆ ಮುಂಬೈ ಬಳಗದಲ್ಲಿ ಎಲ್ಲರಲ್ಲೂ ದುಗುಡ ಮನೆ ಮಾಡಿತ್ತು ಎನ್ನುವುದನ್ನು ಕಿವೀಸ್ ಮಾಜಿ ಆಟಗಾರ ಒಪ್ಪಿಕೊಂಡಿದ್ದಾರೆ. ಕೋವಿಡ್ ಪ್ರಕರಣಗಳು ಕಂಡು ಬರಲು ಶುರುವಾದ ನಂತರ ಕೆಲವರಲ್ಲಿ ಸ್ವಲ್ಪ ಭಯ ಕಂಡು ಬಂದಿತು ಎಂದು ಶನಿವಾರ ಮನೆ ತಲುಪಿರುವ ಪಮೆಂಟ್ ತಿಳಿಸಿದ್ದಾರೆ..

ಜೇಮ್ಸ್​ ಪಮೆಂಟ್
ಜೇಮ್ಸ್​ ಪಮೆಂಟ್

By

Published : May 11, 2021, 3:22 PM IST

ಆಕ್ಲೆಂಡ್ ​:ಐಪಿಎಲ್​ಗಾಗಿ ನಿರ್ಮಿಸಲಾಗಿದ್ದ ಬಯೋಬಬಲ್ ತುಂಬಾ ಸುರಕ್ಷಿತವಾಗಿತ್ತು. ಆದರೆ, ಕೆಲವು ಹಿರಿಯ ಭಾರತೀಯ ಆಟಗಾರರು ಅಲ್ಲಿನ ನಿರ್ಬಂಧಗಳನ್ನು ವಿರೋಧಿಸುತ್ತಿದ್ದರು ಎಂದು ಮುಂಬೈ ಇಂಡಿಯನ್ಸ್ ತಂಡದ ಫೀಲ್ಡಿಂಗ್ ಕೋಚ್ ಜೇಮ್ಸ್​ ಪಮೆಂಟ್​ ಹೇಳಿದ್ದಾರೆ.

14ನೇ ಆವೃತ್ತಿಯ ಐಪಿಎಲ್ ಕೋವಿಡ್-19 ಕಾರಣದಿಂದ ತಾತ್ಕಾಲಿಕವಾಗಿ ರದ್ದಾಗಿದೆ. ಕಟ್ಟುನಿಟ್ಟಿನ ಬಯೋಬಬಲ್​ನಲ್ಲಿಯೂ ಕೆಲವು ಆಟಗಾರರಿಗೆ ಕೊರೊನಾ ಕಾಣಿಸಿಕೊಂಡಿದ್ದರಿಂದ ಲೀಗ್​ನ ಮೇ 4ರಂದು ಬಿಸಿಸಿಐ ಅಮಾನತು ಮಾಡಿತ್ತು.

"ಬಯೋಬಬಲ್ ಅತ್ಯಂತ ಸುರಕ್ಷಿತವಾಗಿತ್ತು. ಕೆಲವು ಭಾರತದ ಹಿರಿಯ ಆಟಗಾರರು ತಮ್ಮನ್ನು ನಿರ್ಬಂಧಿಸುವುದನ್ನು ಇಷ್ಟಪಡುತ್ತಿರಲಿಲ್ಲ ಎಂದು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಆದರೆ, ಪಮೆಂಟ್​ ತಮ್ಮ ವಾದದ ಬಗ್ಗೆ ವಿವರವಾಗಿ ತಿಳಿಸಲು ಬಯಸಿಲ್ಲ ಮತ್ತು ಆಟಗಾರರು ಹೆಸರುಗಳನ್ನು ಬಹಿರಂಗಪಡಿಸಿಲ್ಲ"

"ಆದರೆ, ನಾವು ಬಯೋಬಬಲ್​ನಲ್ಲಿ ಸುರಕ್ಷಿತವಾಗಿತ್ತು. ಯಾವುದೇ ಹಂತದಲ್ಲಿ ಬಬಲ್ ಜೊತೆ ರಾಜಿಯಾಗುತ್ತೇವೆಂದು ನಾವು ಭಾವಿಸಿರಲಿಲ್ಲ. ಆದರೆ, ಪ್ರಯಾಣ ಮಾಡುವುದೇ ಯಾವಾಗಲೂ ಸವಾಲಿನದ್ದಾಗಿತ್ತು" ಎಂದು ಅವರು ತಿಳಿಸಿದ್ದಾರೆ.

ಟೂರ್ನಿ ನಿಲ್ಲುವ ಸ್ವಲ್ಪ ಸಮಯದವರೆಗೆ ಮುಂಬೈ ಬಳಗದಲ್ಲಿ ಎಲ್ಲರಲ್ಲೂ ದುಗುಡ ಮನೆ ಮಾಡಿತ್ತು ಎನ್ನುವುದನ್ನು ಕಿವೀಸ್ ಮಾಜಿ ಆಟಗಾರ ಒಪ್ಪಿಕೊಂಡಿದ್ದಾರೆ.

ಕೋವಿಡ್ ಪ್ರಕರಣಗಳು ಕಂಡು ಬರಲು ಶುರುವಾದ ನಂತರ ಕೆಲವರಲ್ಲಿ ಸ್ವಲ್ಪ ಭಯ ಕಂಡು ಬಂದಿತು ಎಂದು ಶನಿವಾರ ಮನೆ ತಲುಪಿರುವ ಪಮೆಂಟ್ ತಿಳಿಸಿದ್ದಾರೆ.

ಇದನ್ನು ಓದಿ:ಭಾರತದ ಮೇಲೆ ನನಗೆ ತುಂಬಾ ಪ್ರೀತಿ, ಅಲ್ಲಿನ ಜನ ಸುರಕ್ಷಿತವಾಗಿರಬೇಕು.. ಹಿಂದಿಯಲ್ಲಿ ಟ್ವೀಟ್​ ಮಾಡಿ ಪ್ರಾರ್ಥಿಸಿದ ಪೀಟರ್ಸನ್..

ABOUT THE AUTHOR

...view details